ನಮ್ಮ ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಶೀಘ್ರ ಜಾರಿ

ಬೆಂಗಳೂರು, ಏ.11: ನಮ್ಮ ಮೆಟ್ರೋದಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ನಮ್ಮ ಮೆಟ್ರೋ ಎರಡನೇ ಹಂತದ ನಿಲ್ದಾಣಗಳಲ್ಲಿ ಆರಂಭವಾಗಲಿದೆ.

ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆ ಒನ್ ನೇಷನ್ ಒನ್ ಕಾರ್ಡ್ ವ್ಯವಸ್ಥೆ ಇದಾಗಿದೆ. ಎರಡನೇ ಹಂತದ ನಾಲ್ಕು ವಿಸ್ತರಣಾ ಮಾರ್ಗಗಳ 27 ಮೆಟ್ರೋ ನಿಲ್ದಾಣಗಳಲ್ಲಿ ಆಟೋಮೇಟೆಡ್ ಫೇರ್ ಕಲೆಕ್ಟರ್ ಗೇಟ್ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ.

ಗೊಟ್ಟಿಗೆರೆ-ನಾಗವಾರ ಹಾಗೂ ಆರ್‌ ವಿ ರಸ್ತೆ-ಬೊಮ್ಮಸಂದ್ರ ನಿಲ್ದಾಣಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ.ಹಾಗಾದರೆ ಕಾಮನ್ ಮೊಬಿಲಿಟಿ ಕಾರ್ಡ್ ಎಂದರೇನು ಎಂದು ನೋಡುವುದಾದರೆ ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ನಗದುರಹಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಎನ್‌ಸಿಎಂಸಿ ವ್ಯವಸ್ಥೆ ಜಾರಿಯಾಗಲಿದೆ.

BMRCL to introduce common mobility card in second phase

ಈ ಕುರಿತು ಕೇಂದ್ರದ ಮಾಹಿತಿ ತಂತ್ರಜ್ಞಾನ ಇಲಾಖೆ ದೇಶದ ಎಲ್ಲಾ ಬ್ಯಾಂಕ್, ತೈಲ ಲಂಪನಿಗಳು, ಸಾರಿಗೆ ಇಲಾಖೆ, ಮೆಟ್ರೋ ರೈಲು, ನಿಗಮಗಳಿಗೆ ಎನ್‌ಸಿಎಂಸಿ ಅಳವಡಿಸಿಕೊಳ್ಳಲು ಸೂಚನೆ ನೀಡಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ ಈ ಕಾರ್ಡ್‌ಗಳನ್ನು ವಿತರಿಸಲಿವೆ. ಮುಂದಿನ ದಿನಗಳಲ್ಲಿ ಗ್ರಾಹಕರು ಈ ಕಾರ್ಡ್ ಬಳಸಿ ಮೆಟ್ರೋ ಹಾಗೂ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+