Namma Metro: ಹಳದಿ ಮಾರ್ಗದ BTM ಲೇಔಟ್ ಸ್ಟೇಷನ್‌ನಲ್ಲಿ ಕ್ಲಿಯರೆನ್ಸ್!
ಬೆಂಗಳೂರು ಮೆಟ್ರೋ ನಿಲ್ದಾಣವೊಂದರಲ್ಲಿ ಶುಕ್ರವಾರ ಬೆಂಕಿ ಅವಘಡ ಕ್ಲಿಯರೆನ್ಸ್ (Fire Clearance) ಕೊಡಲಾಗಿದೆ. ಬೆಂಗಳೂರಲ್ಲಿ ಮೆಟ್ರೋ ಇದೀಗ ಜನರ ಜೀವನಾಡಿಯಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ಹಾಗೂ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಭಾರೀ ಸಹಕಾರಿಯಾಗಿದೆ. ಇದೀಗ ಶುಕ್ರವಾರ ಬೆಂಗಳೂರಿನ ಮೆಟ್ರೋ ನಿಲ್ದಾಣದ ಹಳದಿ ಮಾರ್ಗದಲ್ಲಿ ಬೆಂಕಿ ಅವಘಡ (ಆಗದಂತೆ ಮುನ್ನೆಚ್ಚರಿಕೆ ವಹಿಸುವ) ಕ್ಲಿಯರೆನ್ಸ್ ಕೊಡಲಾಗಿದೆ.
ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗವು ಹಲವು ಕಾರಣಗಳಿಂದ ವಿಶೇಷವಾಗಿದೆ. ಶುಕ್ರವಾರ (ನವೆಂಬರ್ 15) ಬೆಳಿಗ್ಗೆ ಈ ಭಾಗದಲ್ಲಿನ ಮೆಟ್ರೋ ನಿಲ್ದಾಣವೊಂದರಲ್ಲಿ ಕ್ಲಿಯರೆನ್ಸ್ ಪ್ರಕ್ರಿಯೆ ನಡೆಯಿತು. ಬೆಂಗಳೂರಿನ ಬಿಟಿಎಂ ಲೇಔಟ್‌ನ ಮೆಟ್ರೋ ನಿಲ್ದಾಣದಲ್ಲಿ ಈ ವಿಶೇಷವಾದ ಕಾರ್ಯಾಚರಣೆ ನಡೆದಿದೆ. ಈ ಭಾಗದ ಮೂಲಕ ನಿತ್ಯವೂ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಶುಕ್ರವಾರ ಮತ್ತೊಂದು ನಿಲ್ದಾಣಕ್ಕೆ ಕ್ಲಿಯರೆನ್ಸ್ ಸಿಕ್ಕಿರುವುದು ಜನರಲ್ಲಿ ಸಂತೋಷವನ್ನು ಉಂಟು ಮಾಡಿದೆ.

ಕುತೂಹಲದಿಂದ ನೋಡಿದ ಜನ: ಇನ್ನು ಶುಕ್ರವಾರ ಈ ಭಾಗದಲ್ಲಿ ನಡೆದ ಕಾರ್ಯಾಚರಣೆಯನ್ನು ಹಲವರು ಕುತೂಹಲದಿಂದ ನೋಡಿದರು. ನೆರೆದಿದ್ದ ಜನ ಅಗ್ನಿ ಅವಘಡ ಕ್ಲಿಯರೆನ್ಸ್ ದೃಶ್ಯಗಳನ್ನು ವಿಡಿಯೋ ಮಾಡಿಕೊಳ್ಳುವುದು ಹಾಗೂ ಪೋಟೋ ತೆಗೆದುಕೊಳ್ಳುತ್ತಿರುವುದು ಕಂಡು ಬಂತು.
BMRCL Namma metro Yellow line BTM Layout Station, fire Clearance Inspection by Karnataka State fire & Emergency services#bangalore #bengaluru #nammametro #bmrcl @OfficialBMRCL @BlrCityPolice @blrcitytraffic @CPBlr @Jointcptraffic @Lolita_TNIE @ChristinMP_ pic.twitter.com/fMalKOARnh
— Karnataka Portfolio (@karnatakaportf) November 15, 2024
BMRCL ನಮ್ಮ ಮೆಟ್ರೋದ ಹಳದಿ ಮಾರ್ಗದ BTM ಲೇಔಟ್ ಸ್ಟೇಷನ್‌ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಅಗ್ನಿಶಾಮಕ ದಳದಿಂದ ಅಗ್ನಿ ಅವಘಡ ಕ್ಲಿಯರೆನ್ಸ್ ಕೊಡಲಾಗಿದೆ. ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುವುದಕ್ಕೂ ಮುಂಚೆ ಹಲವು ಮಾದರಿಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹಲವು ಪರೀಕ್ಷೆಗಳ ನಂತರವಷ್ಟೇ ಮೆಟ್ರೋ ಕಾರ್ಯಾಚರಣೆಗೆ ಅವಕಾಶ ನೀಡಲಾಗುತ್ತದೆ. ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಕ್ರಮಗಳನ್ನು ಅನುಸರಿಸಲಾಗುತ್ತದೆ.
ಅದೇ ರೀತಿ ಬೆಂಗಳೂರಿನ ಬಿಟಿಎಂ ಲೇಔಟ್‌ನ ಮೆಟ್ರೋ ನಿಲ್ದಾಣದಲ್ಲಿ ಈ ವಿಶೇಷವಾದ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ ವತಿಯಿಂದ ನಡೆಸಲಾಗಿದೆ. ಅಗ್ನಿ ಅವಘಡ ಕ್ಲಿಯರೆನ್ಸ್ ಕೊಡಲಾಗಿದೆ.
ವಿಡಿಯೋ ವೈರಲ್: ಇನ್ನು ಕ್ಲಿಯರೆನ್ಸ್ ಸಂಬಂಧಿಸಿದಂತೆ ಮಾಡಲಾಗಿರುವ ನೀರು ಚುಮ್ಮಿಸುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಹಲವರು ಸೋಷಿಯಲ್ ಮೀಡಿಯಾದಲ್ಲಿ ಈ ಕ್ಲಿಯರೆನ್ಸ್ ವಿಡಿಯೋ ಹಂಚಿಕೊಂಡಿದ್ದಾರೆ.
ಹಲವು ವಿಶೇಷತೆ
ನಮ್ಮ ಮೆಟ್ರೋ ಹಳದಿ ಮಾರ್ಗವು ಹಲವು ಕಾರಣಗಳಿಂದ ವಿಶೇಷತೆ ಪಡೆದುಕೊಂಡಿದೆ. ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಚೀನಾದಿಂದ ಮೆಟ್ರೋ ರೈಲುಗಳು ಬಂದಿದ್ದು, ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಚಾಲಕ ರಹಿತ ರೈಲು ಕಾರ್ಯಾಚರಣೆ , ಕಾರ್ಯಾಚರಣೆಯ ನಿಯಂತ್ರಣ ಕೇಂದ್ರದಿಂದ ವರ್ಧಿತ ಮೇಲ್ವಿಚಾರಣೆ ಸಾಮರ್ಥ್ಯ ಇದರಲ್ಲಿ ಇರಲಿದೆ. ಅಲ್ಲದೇ ಟ್ರಾಕ್ ಮಾನಿಟರಿಂಗ್ ಸಿಸ್ಟಮ್, ಹಾಟ್ ಆಕ್ಸಲ್ ಪತ್ತೆ ವ್ಯವಸ್ಥೆ, ಅಬಾಜ್ ಮತ್ತು ಡಿರೈಲ್ಮೆಂಟ್ ಡಿಟೆಕ್ಷನ್ ವ್ಯವಸ್ಥೆ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿ ಇವೆ ಎನ್ನಲಾಗಿದೆ.












Click it and Unblock the Notifications