ನಮ್ಮ ಮೆಟ್ರೋ ಎಸ್ಕಲೇಟರ್‌ನಿಂದ ಕಾಲು ಜಾರೋದು ತಪ್ಪಿಸಲು ಕಂಬಿ ಅಳವಡಿಕೆ

ಬೆಂಗಳೂರು, ಫೆಬ್ರವರಿ 25: ಇತ್ತೀಚೆಗಷ್ಟೇ ಎಸ್ಕಲೇಟರ್‌ನಿಂದ ಮಗುವೊಂದು ಕೆಳಗೆ ಬಿದ್ದು ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೋ ಎಸ್ಕಲೇಟರ್‌ಗೆ ಕಬ್ಬಿಣದ ಕಂಬಿಯನ್ನು ಅಳವಡಿಸಲಾಗುತ್ತಿದೆ.

ಈ ಕಂಬಿಯನ್ನು ಹಿಡಿದುಕೊಂಡು ಸುಲಭವಾಗಿ ಎಸ್ಕಲೇಟರ್ ಹತ್ತಬಹುದಾಗಿದೆ. ಆದರೆ ಎಲ್ಲಾ ಕಡೆ ಸುರಕ್ಷತಾ ಬಲೆ ಅಳವಡಿಸುವ ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ.ಮಹಾಲಕ್ಷ್ಮೀ ಲೇಔಟ್‌ ನಿಲ್ದಾಣದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಶ್ರೀರಾಂಪುರ, ಮಹಾಕವಿ ಕುವೆಂಪು ರಸ್ತೆ, ರಾಜಾಜಿನಗರ ಇನ್ನೂ ಹಲವು ನಿಲ್ದಾಣಗಳಲ್ಲಿ ಈ ರೀತಿಯ ಕಾಮಗಾರಿ ಮಾಡಲು ಚಿಂತನೆ ನಡೆಸಲಾಗಿದೆ.

ಕೇವಲ ಮಕ್ಕಳು ಮಾತ್ರವಲ್ಲ ವೃದ್ಧರಿಗೂ ಕೂಡ ಯಾವುದೇ ಅವಲಂಬನೆ ಇಲ್ಲದೆ ಹತ್ತುವುದು ಕಷ್ಟವಾಗಿತ್ತು. ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಎಸ್ಕಲೇಟರ್‌ ಬದಿ ತೆರೆದಿದೆ. ಇಲ್ಲಿಂದ ಏನೇ ಕೈ ಜಾರಿದರೂ ನೇರವಾಗಿ ರಸ್ತೆಗೆ ಬೀಳುತ್ತದೆ. ಇದನ್ನು ತಪ್ಪಿಸಲು ಈ ರೀತಿಯ ಕಂಬಿ ಅಳವಡಿಸಲಾಗುತ್ತದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಎಸ್ಕಲೇಟರ್‌ಗಳಿಗೆ ಮಾತ್ರ ಕಂಬಿ ಅಳವಡಿಸಲಾಗುತ್ತದೆ.

BMRCL installing iron rods to Metro escalators

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಎಸ್ಕಲೇಟರ್ ಗಳಿಗೆ ಸುರಕ್ಷತಾ ಬಲೆ ಅಳವಡಿಸಲಾಗಿದೆ. ಶ್ರೀರಾಂಪುರ, ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+