ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಚೆಕ್‌ರೇಲ್ ಅಳವಡಿಕೆ, ಏನಿದರ ಉಪಯೋಗ?

ಬೆಂಗಳೂರು, ಫೆಬ್ರವರಿ 1: ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನೇರಳೆ ನಮ್ಮ ಮೆಟ್ರೋ ಮಾರ್ಗದಲ್ಲಿ ಚೆಕ್‌ರೇಲ್ ಅಳವಡಿಸಲಾಗುತ್ತಿದೆ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಪ್ರವೇಶದ ಮಾರ್ಗದ ತಿರುವಿನಲ್ಲಿ ಚಕ್ರಗಳು ಜರುಗದಿರಲು ಚೆಕ್‌ರೇಲ್ ಅಳವಡಿಸಲು ಕಾಮಗಾರಿ ನಡೆಯಲಿದೆ. ಆದರೆ ಇದರಿಂದ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಚೆಕ್ ರೇಲ್ ಎಂದರೇನು? ರೈಲಿನ ಚೆಕ್ರಗಳು ಹಳಿಯನ್ನು ತಪ್ಪಿದರೆ ಪಕ್ಕಕ್ಕೆ ಜರುಗದಿರುವಂತೆ ಕಾಂಕ್ರೀಟ್ ಕಟ್ಟೆ ಇದೆ. ಈ ಕಟ್ಟೆಯು ಚಕ್ರಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ತಿರುವಿನಲ್ಲಿ ಚಕ್ರ ವಾಲುವಾಗ ಹಳಿ ತಪ್ಪುವ ಸಾಧ್ಯತೆ ಇರುತ್ತದೆ. ಇಂತಹ ಹಲವು ತಿರುವುಗಳಲ್ಲಿ ಈಗಾಗಲೇ ಚೆಕ್ ರೇಲ್ ಅಳವಡಿಸಲಾಗಿದೆ.

BMRCL installing checkrail in carvings

ನಮ್ಮ ಮೆಟ್ರೋ ಮಾರ್ಗದ ತಿರುವುಗಳಲ್ಲಿ ಬಹಳ ಎಚ್ಚರಿಕೆಯಿಂದ ರೈಲನ್ನು ಕಾರ್ಯಾಚರಿಸಲಾಗುತ್ತದೆ. ಎತ್ತರಿಸಿದ ಮಾಗದಲ್ಲಿ ರೈಲು ಸಂಚರಿಸುವಾಗ ಗಂಟೆಗೆ 80 ಕಿ.ಮೀ ವೇಗವಿರುತ್ತದೆ. ತಿರುವಿನಲ್ಲಿದ್ದಾಗ ವೇಗ 30-40 ರಲ್ಲಿರುತ್ತದೆ.

ಒಂದು ಹಳಿಯಿಂದ ಇನ್ನೊಂದು ಹಳಿಗೆ ಬದಲಿಸಲು ಚೆಕ್ ರೇಲ್ ಬಳಕೆಯಾಗುತ್ತದೆ. ಇದು ಹಳಿಯಂತೆಯೇ ಇರುವ ಸುಮಾರು 10 ಮೀಟರ್ ಉದ್ದದ ಕಂಬಿಗಳಾಗಿವೆ. ಮೆಟ್ರೋ ರೈಲುಗಳ ಹಳಿ ಬದಲಾವಣೆಗೆ ನಾಗಸಂದ್ರ, ಬೈಯಪ್ಪನಹಳ್ಳಿ, ಮೆಜೆಸ್ಟಿಕ್ ಮೊದಲಾದ ಕಡೆಗಳಲ್ಲಿ ಚೆಕ್‌ರೇಲ್‌ಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+