ವೆಲ್ಲಾರ ಜಂಕ್ಷನ್‌ ನಲ್ಲಿ ಮೆಟ್ರೋ ಕಾಮಗಾರಿ ಆರಂಭ, ಟ್ರಾಫಿಕ್ ವಿಪರೀತ

ಬೆಂಗಳೂರು, ಮೇ 31: ವೆಲ್ಲಾರ ಜಂಕ್ಷನ್‌ನಿಂದ ಪಾಟರಿ ಟೌನ್ ವರೆಗೆ ನಮ್ಮ ಮೆಟ್ರೋ ಸುರಂಗ ಕಾಮಗಾರಿ ಆರಂಭವಾಗಿದ್ದು, ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ವೆಲ್ಲಾರ ಜಂಕ್ಷನ್‌ನಲ್ಲಿದ್ದ ಪ್ರಸಿದ್ಧ ಫಾತಿಮಾ ಬೇಕರಿ ಹಾಗೂ ಟಾಮ್‌ಹೋಟೆಲ್‌ನ್ನು ಮುಚ್ಚಿ ಮೆಟ್ರೋ ಯೋಜನೆಗೆ ಜಾಗ ನೀಡಲಾಗುತ್ತಿದೆ. ಫಾತಿಮಾ ಬೇಕರಿಯು 1957ರಲ್ಲೇ ನಿರ್ಮಾಣವಾಗಿದ್ದು ಎಲ್ಲರಿಗೂ ಚಿರಪರಿಚಿತವಾಗಿದೆ.

1980ರಲ್ಲಿ ಸೂಪರ್ ಮಾರ್ಕೆಟನ್ನು ಕೂಡ ಆರಂಭಿಸಿತ್ತು. ಹೋಟೆಲ್ ಟಾಮ್ ಮಂಗಳೂರು ಮೂಲದ್ದಾಗಿದೆ. ವೆಲ್ಲಾರ ಜಂಕ್ಷನ್‌ನಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಲು ಹೊರಟಿರುವ ಬಿಎಂಆರ್‌ಸಿಎಲ್ ಕ್ರಮ ವಿರೋಧಿಸಿ ಶೋಲೆ ವೃತ್ತದಲ್ಲಿ ಆಲ್ ಸೇಂಟ್ ಚರ್ಚ್‌ನ ಸದಸ್ಯರು ಪ್ರತಿಭಟನೆ ನಡೆಸಿದರು.

BMRCL begins underground work in Vellara junction

ಆ ಭಾಗದಲ್ಲಿ ಈಗಾಗಲೇ ಹೆಚ್ಚು ಸಂಚಾರ ದಟ್ಟಣೆ ಇದೆ, ಇದೀಗ ಮೆಟ್ರೋ ನಿರ್ಮಾಣ ಕಾರ್ಯ ಆರಂಭವಾದರೆ ತುಂಬಾ ಕಷ್ಟವಾಗುತ್ತದೆ. ಹಾಗೆಯೇ ಆ ಪ್ರದೇಶವೆಲ್ಲವೂ ಧೂಳಿನಿಂದ ತುಂಬಿಕೊಳ್ಳುತ್ತದೆ ಎನ್ನುವುದು ಪ್ರಯಾಣಿಕರ ವಾದವಾಗಿದೆ.

ಬಿಎಂಆರ್‌ಸಿಎಲ್ ಫಾತಿಮಾ ಬೇಕರಿ, ಟಾಮ್ ಹೋಟೆಲ್ ಸೇರಿ ಅನೇಕ ಆಸ್ತಿಗಳನ್ನು ತೆರವುಗೊಳಿಸಲಾಗುತ್ತಿದೆ. ವೆಲ್ಲಾರ ಜಂಕ್ಷನ್-ಟ್ಯಾನರಿ ರಸ್ತೆವರೆಗಿನ 5.63 ಕಿ.ಮೀ ಸುರಂಗ ಮಾರ್ಗದ ಮೊದಲ ಹಂತದ ಕಾಮಗಾರಿಗೆ ಚಾಲನೆ ದೊರೆತಿದೆ.

ವೆಲ್ಲಾರ ಜಂಕ್ಷನ್-ಟ್ಯಾನರಿ ರಸ್ತೆವರೆಗಿನ ಸುರಂಗ ಮಾರ್ಗ ನಿರ್ಮಾಣ ಗುತ್ತಿಗೆಯನ್ನು ಎಲ್ ಆಂಡ್ ಟಿ ಕಂಪನಿ ಪಡೆದಿದೆ. ಬ್ರಿಗೇಡ್ ರಸ್ತೆಯ ವೆಲ್ಲಾರ ಜಂಕ್ಷನ್‌ನಿಂದ ಎಂಜಿ ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್ ಮೂಲಕ ಟ್ಯಾನರಿ ರಸ್ತೆವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ.

ಅಂದಾಜು 11,014 ಕೋಟಿ ರ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ ಅಂದಾಜು 13 ಕಿ.ಮೀ ಸುರಂಗ ಮಾರ್ಗ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಎಲ್ ಆಂಡ್ ಟಿ ಸುರಂಗ ಮಾರ್ಗದ 2 ಪ್ಯಾಕೇಜ್ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+