Namma Metro: ಮೆಟ್ರೋ ನಿಲ್ದಾಣದಲ್ಲಿ ಬರಲಿದೆ ಹೋಟೆಲ್, ಶಾಪಿಂಗ್ ಮಾಲ್

ಬೆಂಗಳೂರು, ಫೆಬ್ರವರಿ 13: ಆದಾಯ ಸಂಗ್ರಹಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಮ್ಮ ಮೆಟ್ರೋ ರೈಲಿನ ಪ್ರಯಾಣ ದರ ಹೆಚ್ಚಳ ಮಾಡಿದೆ. ಈ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಟಿಕೆಟ್ ರಹಿತ ಆದಾಯ ಸಂಗ್ರಹಣೆಗೆ ಗಮನ ನೀಡಬೇಕು ಎಂದು ಸಲಹೆ ನೀಡಲಾಗಿದೆ. ಆದ್ದರಿಂದ ಬಿಎಂಆರ್‌ಸಿಎಲ್ ಹೊಸ ಯೋಜನೆ ರೂಪಿಸಿದೆ.

ಈಗಾಗಲೇ ನಮ್ಮ ಮೆಟ್ರೋ ಪ್ರಯಾಣ ದರ ಕಡಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದ್ದಾರೆ. ಪ್ರಯಾಣ ದರ ಪರಿಷ್ಕರಣೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ಬಿಎಂಆರ್‌ಸಿಎಲ್ ಚಿಂತೆಗೆ ಕಾರಣವಾಗಿದೆ.

BMRCL Aims Non Fare Revenue Commercial Complex Cum Hotel In Metro Station

ಮೆಟ್ರೋ ನಿಲ್ದಾಣದಲ್ಲಿ ಹೋಟೆಲ್: ಟಿಕೆಟ್ ರಹಿತ ಆದಾಯ ಸಂಗ್ರಹಕ್ಕೆ ಮುಂದಾಗಿರುವ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೋಟೆಲ್, ಕಛೇರಿ ಮತ್ತು ಶಾಪಿಂಗ್ ಮಾಲ್ ತೆರೆಯಲು ಅವಕಾಶ ನೀಡಲಿದೆ. ಈ ಯೋಜನೆ ಮೊದಲ ಹಂತವಾಗಿ ಮೆಜೆಸ್ಟಿಕ್ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅನುಮತಿ ನೀಡಲಾಗುತ್ತದೆ.

ಬಿಎಂಆರ್‌ಸಿಎಲ್ ಈಗಾಗಲೇ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ವಾಣಿಜ್ಯ ಸಂಕೀರ್ಣ, ಹೋಟೆಲ್ ಅಭಿವೃದ್ಧಿಪಡಿಸಲು ಟೆಂಡರ್ ಕರೆದಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು 31,920 ಚದರ ಮೀಟರ್ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತದೆ. ಇದು ಟಿಕೆಟ್ ರಹಿತ ಆದಾಯ ಸಂಗ್ರಹದಲ್ಲಿ ಮಹತ್ವದ ಹೆಜ್ಜೆ ಎಂದು ಅಂದಾಜಿಸಲಾಗಿದೆ.

ಫೆಬ್ರವರಿ 9ರ ಭಾನುವಾರದಿಂದಲೇ ಜಾರಿಗೆ ಬರುವಂತೆ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಬಿಎಂಆರ್‌ಸಿಎಲ್ ರಚನೆ ಮಾಡಿದ್ದ ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಆದರೆ ಈ ದರ ಏರಿಕೆಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ.

ಸಮಿತಿ ಟಿಕೆಟ್ ರಹಿತ ಆದಾಯ ಸಂಗ್ರಹ ಮಾಡಲು ಸಹ ಬಿಎಂಆರ್‌ಸಿಎಲ್ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿತ್ತು. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಬಲಭಾಗದಲ್ಲಿ ಹೋಟೆಲ್ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಆದರೆ ಈ ಯೋಜನೆಯಿಂದ ಎಷ್ಟು ಆದಾಯ ಸಂಗ್ರಹವಾಗಲಿದೆ? ಎಂಬ ಸುಳಿವನ್ನು ಬಿಎಂಆರ್‌ಸಿಎಲ್ ಬಿಟ್ಟುಕೊಟ್ಟಿಲ್ಲ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ, ಹೋಟೆಲ್ ವಿನ್ಯಾಸಗೊಳಿಸಿ, ನಿರ್ಮಾಣ ಮಾಡಿ, ನಿರ್ವಹಣೆ ಮಾಡಿ ಹಸ್ತಾಂತರ ಮಾಡುವ ಮಾದರಿಯಲ್ಲಿ 30 ವರ್ಷಗಳ ಅವಧಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ಇಲ್ಲಿನ ಹೋಟೆಲ್‌ಗಳು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಅಂದಾಜಿಸಲಾಗಿದೆ.

ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಕಛೇರಿ, ಕೋ ವರ್ಕ್ ಸ್ಪೇಸ್ ಮಾದರಿಯಲ್ಲಿ ಬಾಡಿಗೆಗೆ ನೀಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಮೆಟ್ರೋ ರೈಲಿನಲ್ಲಿ ಆಗಮಿಸಿ, ಮೆಟ್ರೋ ನಿಲ್ದಾಣದ ಕಛೇರಿಯಲ್ಲಿಯೇ ಕೆಲಸ ಮುಗಿಸಿ ಜನರು ಮೆಟ್ರೋದಲ್ಲೇ ವಾಪಸ್ ಆಗಬಹುದು.

ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ರೂಂಗಳನ್ನು ನಿರ್ಮಾಣ ಮಾಡಿದರೆ ಅಂತರಾಷ್ಟ್ರೀಯ ಪ್ರಯಾಣಿಕರು, ಬೇರೆ ನಗರ/ ಪಟ್ಟಣದಿಂದ ಬೆಂಗಳೂರಿಗೆ ಆಗಮಿಸಿರುವ ಜನರಿಗೆ ಉಪಯೋಗವಾಗಲಿದೆ. ಆದ್ದರಿಂದ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

ಮಜೆಸ್ಟಿಕ್ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್, ಭಾರತೀಯ ರೈಲ್ವೆಯನ್ನು ಸಂಪರ್ಕಿಸುವ ಪ್ರಮುಖ ಸ್ಥಳವಾಗಿದೆ. ಪ್ರತಿನಿತ್ಯ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ನಮ್ಮ ಮೆಟ್ರೋ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡುವ ಮೂಲಕ ಆದಾಯ ಸಂಗ್ರಹಕ್ಕೆ ಸಹ ಬಿಎಂಆರ್‌ಸಿಎಲ್‌ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+