"ಮೆಟ್ರೋ ಬೆಲೆ ಏರಿಕೆಯ ಕ್ರೆಡಿಟ್‌ ಇವರಿಗೇ ಸಿಗಬೇಕು"

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಆರೋಪಿಸಿದೆ. ಕೇಂದ್ರ ಸರ್ಕಾರದ ಅನುಮತಿಯ ಆಧಾರದ ಮೇಲೆಯೇ ಬೆಲೆ ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವವರು ಅಜ್ಞಾನಿಗಳು ಎಂದು ಬಿಜೆಪಿ ನಾಯಕರನ್ನು ರಾಜ್ಯದ ಪ್ರಭಾವಿ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿಲ್ಲಿ ಮೆಟ್ರೋ ಪ್ರಯಾಣ ದರವನ್ನು 10 ರೂಪಾಯಿಂದ 90 ರೂಪಾಯಿಯ ವರೆಗೆ ಹೆಚ್ಚಳ ಮಾಡಲಾಗಿದೆ. ಈ ರೀತಿಯ ಬೆಲೆ ಏರಿಕೆಯು ದೇಶದ ಉಳಿದ ಯಾವುದೇ ಮೆಟ್ರೋದಲ್ಲೂ ಆಗಿಲ್ಲ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ವಾಕ್ಸಮರ ಮುಂದುವರಿದಿದೆ.

ಇದೀಗ ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಟ್ವೀಟ್‌ ಮಾಡಿದ್ದು. ಈ ಟ್ವೀಟ್‌ ಭಾರೀ ವೈರಲ್‌ ಆಗುತ್ತಿದೆ. ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ‌ ಗೂಬೆ ಕೂರಿಸುತ್ತಿರುವ ಅಜ್ಞಾನಿ ರಾಜ್ಯ ಬಿಜೆಪಿ ಅವರೇ, ಅಲ್ಪ ಜ್ಞಾನ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದರ ಬಗ್ಗೆ ಅರಿವಿರಲಿ ಎಂದು ಟಾಂಗ್‌ ಕೊಟ್ಟಿದ್ದಾರೆ.

BJP Should Get Credit For Metro Fare Hike Minister Ramalinga Reddy

ಮೆಟ್ರೋ ಕಾಯಿದೆ ಪ್ರಕಾರ ದರ ಏರಿಕೆ ಮಾಡಲು ಒಂದು ಸಮಿತಿ ಇರುತ್ತದೆ, ಸಮಿತಿಯ ಶಿಫಾರಸ್ಸು ಅನ್ನು ಮೆಟ್ರೋ ಮಂಡಳಿ ಸಭೆಯಲ್ಲಿ ಮಂಡಿಸುತ್ತಾರೆ, ಮಂಡಳಿಯ ಅಧ್ಯಕ್ಷರು ಕೇಂದ್ರ ಸರ್ಕಾರದ ವಸತಿ ಮತ್ತು‌ ನಗರಾಭಿವೃದ್ಧಿ ಕಾರ್ಯದರ್ಶಿಗಳಿದ್ದು, ಅವರು ದರ ಏರಿಕೆಯನ್ನು ಅಂತಿಮಗೊಳಿಸುತ್ತಾರೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮೆಟ್ರೋ ಬೆಂಗಳೂರಿಗೆ ತಂದಿದ್ದು ದೂರದೃಷ್ಟಿಯುಳ್ಳ ಕಾಂಗ್ರೆಸ್ ಸರ್ಕಾರ. ಬುರುಡೆ‌ ಪಕ್ಷದ ಕೆಲವು‌ ನಾಯಕರು ಮೆಟ್ರೋ ತಂದಿದ್ದೇ ನಾವೇ ಎಂದು‌ ಪ್ರತಿದಿನ ಪೋಸ್ ಕೊಡುತ್ತಿದ್ದವರು ಇಂದು ದರ ಏರಿಕೆಯ ಬಗ್ಗೆ ಚಕಾರವೆತ್ತಲು ಆಗದಿರುವುದನ್ನು ನೋಡಿದರೆ ಪಾಪ ಎಂದು ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆಯೇ ಅಥವಾ ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಎಂಬುದನ್ನು ಬಿ.ಜೆ.ಪಿ ನಾಯಕರು ತಿಳಿಸುವ ಕಷ್ಟ ತೆಗೆದುಕೊಳ್ಳುತ್ತೀರಾ. ನಾಯಕನ ಗುಣ ವಿಶೇಷಣ ಒಪ್ಪು ತಪ್ಪು ಎರಡನ್ನೂ ಸಮನಾಗಿ‌ ಸ್ವೀಕರಿಸಿ, ತಪ್ಪನ್ನು ಒಪ್ಪಿಕೊಳ್ಳುವ ಉದಾರತೆ ಇರಬೇಕು. ಕ್ರೆಡಿಟ್ ತಗೋಳೋದಿಕ್ಕೆ ನಾ ಮುಂದು, ತಾ ಮುಂದು ಎನ್ನುವ ಬಿ.ಜೆ.ಪಿ ನಾಯಕರು ಇಂದು ಮೆಟ್ರೋ ದರ‌ ಏರಿಕೆ‌ ಬಗ್ಗೆಯೂ ಕ್ರೆಡಿಟ್ ತೆಗೆದುಕೊಳ್ಳುವ ಎದೆಗಾರಿಕೆ‌ ತೋರಿಸಿ‌ ನೋಡೋಣ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ದೂಷಿಸಲು ತಮಗೆ ಆತ್ಮಸಾಕ್ಷಿ ಚುಚ್ಚುವುದಿಲ್ಲವೇ ಎಂದೂ ಅವರು ಹೇಳಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿ ಅವರ ಟ್ವೀಟ್‌ಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬೆಲೆ ಏರಿಕೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ಶುರುವಾಗಿದೆ. ಮೆಟ್ರೋ ಪ್ರಯಾಣ ದರವನ್ನು ಭಾರೀ ಏರಿಕೆ ಮಾಡಿದೆ ಎಂದು ಮೆಟ್ರೋದ ಪ್ರಯಾಣಿಕರು ಸಹ ತಮ್ಮ ಅಸಮಾಧನವನ್ನು ಹೊರ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+