ಹನಿಟ್ರ್ಯಾಪ್‌ ಬಗ್ಗೆ ಶಾಸಕ ಮುನಿರತ್ನ ಸ್ಫೋಟಕ ಹೇಳಿಕೆ

BJP MLA Munirathna: ಅತ್ಯಾಚಾರ ಪ್ರಕರಣದಲ್ಲಿ ಆರ್‌ಆರ್‌ ನಗರ ಬಿಜೆಪಿ ಶಾಸಕ ಮುನಿರತ್ನ ಜೈಲು ಸೇರಿದ್ದಾರೆ. ಈ ಪ್ರಕರಣದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇನ್ನು ಈ ಬಗ್ಗೆ ವಿಚಾರಣೆ ನಡೆಸಿದ ಕಗ್ಗಲೀಪುರ ಪೊಲೀಸರ ಮುಂದೆ ಮುನಿರತ್ನ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹಾಗಾದರೆ ಅವರು ಹೇಳಿದ್ದಾದ್ರೂ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಿಬಿಎಂಎಪಿ ಗುತ್ತಿಗೆದಾರನಿಗೆ ಬೇದರಿಕೆ & ಜಾತಿ ನಿಂದನೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಿನಿರತ್ನ ಅವರಿಗೆ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿತ್ತು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಅವರನ್ನು ಪರಪ್ಪನ ಅಗ್ರಹಾರದಲ್ಲೇ ಅರೆಸ್ಟ್‌ ಮಾಡಿ ಕಗ್ಗಲೀಪುರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು. ಇನ್ನು ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲಿದ್ದು, ಸ್ಫೋಟಕ ಮಾಹಿತಿಗಳನ್ನು ಹೊರಬೀಳುತ್ತಲೇ ಇವೆ.

BJP MLA Munirathna Shocking statement about honeytrap know details

ಮುನಿರತ್ನ ಹೇಳಿದ್ದೇನು.?: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರೆಯ ಹನಿಟ್ರಾಪ್‌ ಆರೋಪದ ಬಗ್ಗೆ ಶಾಸಕ ಮುನಿರತ್ನ ಪೊಲೀಸರ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. "ದೂರುದಾರೆ ನನಗೆ ತುಂಬಾ ಪರಿಚಯ, ಆಕೆಯ ವೃತ್ತಿಯ ಹನಿಟ್ರ್ಯಾಪ್‌ ಮಾಡುವುದಾಗಿದೆ. ನಿಮಗೆ ಯಾರ ವಿಡಿಯೋ ಬೇಕು ಹೇಳಿ, ನಿಮಗೆ ದುಷ್ಮನ್ ಯಾರಿದ್ದಾರೆ ಹೇಳಿ. ಅಂತಹವರ ವಿಡಿಯೋ ಮಾಡಿಕೊಡುತ್ತೇನೆ ಎಂದು ಆಫರ್‌ ಕೊಟ್ಟಿದ್ದಳು. ಇದಕ್ಕೆ ನಾನು ಒಪ್ಪಿರಲಿಲ್ಲ," ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

"ಆಕೆಯೆ ಅಂದರೆ ದೂರುದಾರೆಯೇ ಹನಿಟ್ರ್ಯಾಪ್‌ ಮಾಡುವ ಕೆಲವವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆ ವಿಡಿಯೋಗಳನ್ನು ನನಗೆ ತಂದು ತೋರಿಸುತ್ತಿದ್ದವು. ಆದರೆ ನಾನು ಆಕೆಯ ಕಡೆಯಿಂದ ಯಾವುದೇ ಹನಿಟ್ರ್ಯಾಪ್‌ ವಿಡಿಯೋಗಳನ್ನು ಮಾಡಿಸಿಲ್ಲ," ಎಂದು ಹೇಳಿಕೆ ನೀಡಿದ್ದಾರೆ.

ಸಂತ್ರಸ್ತೆ ಮಹಿಳೆ ಹೇಳಿಕೆ: ಕೊವಿಡ್ ಸಂದರ್ಭದಲ್ಲಿ ಮಹಿಳೆ ಸ್ಥಳೀಯ ಕಾರ್ಪೊರೇಟರ್ ಸಹಾಯದಿಂದ ಮಾಸ್ಕ್ ವಿತರಣೆ ಮಾಡಿದ್ದರು. ಈ ಬಗ್ಗೆ ತಿಳಿದ ಮುನಿರತ್ನ ಕರೆ ಮಾಡಿ ಭೇಟಿ ಆಗಲು ಹೇಳುತ್ತಾರೆ. ಅದರಂತೆಯೇ ಅವರ ಕಚೇರಿಗೆ ಹೋದಾಗ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಮುಂದೊಂದು ದಿನ ನಿಮ್ಮ ಸಹಾಯ ಬೇಕಾಗುತ್ತದೆ. ಆಗ ಹೇಳುತ್ತೇನೆ ಎಂದಿದ್ದಾರೆ ಎಂದು ಹೇಳಿದ್ದಾರೆ.

ಬಳಿಕ ಸಂದೇಶಗಳನ್ನು ಕಳುಹಿಸುವ ಮೂಲಕ ಇಬ್ಬರ ನಡುವೆ ಸ್ನೇಹಕ್ಕೆ ತಿರುಗಿತು. ಬಳಿಕ ಅವರು ಪ್ರೇಮ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಂದು ದಿನ ಸ್ನಾನಕ್ಕೆ ಹೋದ ಸಮಯದಲ್ಲಿ ವಿಡಿಯೋ ಕರೆ ಮಾಡಿದಾಗ ನಾನು ರಿಸೀವ್ ಮಾಡುವುದಿಲ್ಲ. ಆದರೆ, ನಂತರ ಅವರ ಮಿಸ್ಡ್‌ ಕಾಲ್ ನೋಡಿ ಮರಳಿ ಕರೆ ಮಾಡುತ್ತೇನೆ. ಆದರೆ ಆಗ ಯಾಕೆ ರಿಸೀವ್ ಮಾಡಲಿಲ್ಲವೆಂದು ಕೇಳಿದಾಗ ಸ್ನಾನಕ್ಕೆ ಹೋಗಿದ್ದೆ ಎಂದಿದ್ದೆ.

ಆಗ ನಾನು ರೂಂನಲ್ಲಿದ್ದೇನೆ ಎಂದು ತಿಳಿದುಕೊಂಡು ವಿಡಿಯೋ ಕರೆ ಮಾಡಲು ಹೇಳುತ್ತಾರೆ. ಕರೆ ಮಾಡಿದಾಗ ನಿನ್ನ ನಗ್ನ ದೇಹ ತೋರಿದು ಎಂದು ಹೇಳುತ್ತಾರೆ. ಆಗ ನಾನು ಒಪ್ಪುವುದಿಲ್ಲ. ನನ್ನನ್ನು ಗೋಡೌನ್‌ಗೆ ಬಂದು ಭೇಟಿ ಮಾಡಲು ಹೇಳುತ್ತಾರೆ.

ಕೆಲವು ದಿನ ಬಿಟ್ಟು ಅವರ ಗೋಡೌನ್‌ಗೆ ಹೋದಾಗ ಅವರ ಜೊತೆ ಗನ್ ಮ್ಯಾನ್ ಸಹ ಇರುತ್ತಾರೆ. ನನ್ನ ನೋಡಿದ ತಕ್ಷಣ ನಿನ್ನ ನೋಡಿದರೆ ಮೈ ಝುಮ್ ಎನಿಸುತ್ತದೆ ಎಂದೆಲ್ಲಾ ಅಶ್ಲೀಲವಾಗಿ ಮಾತನಾಡಿ ತಬ್ಬಿಕೊಳ್ಳುತ್ತಾರೆ. ಪ್ರತಿರೋಧಿಸಿದಾಗ ಗನ್ ಮ್ಯಾನ್ ಅನ್ನು ಆಚೆ ಕಳುಹಿಸಿ ರೇಪ್ ಮಾಡುತ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಳಿಕ ವಿಡಿಯೋ ಮಾಡಿಕೊಂಡು ಹಲವು ಬಾರಿ ನನ್ನ ಮೇಲೆ ಮುನಿರತ್ನ ಅತ್ಯಾಚಾರ ಮಾಡುತ್ತಾರೆ. ನಾನು ಅಳುತ್ತಾ ಕೂತಿದ್ದಾಗ ಇದನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಎಚ್‌ಐವಿ ಸೋಂಕಿತರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವ ಅಭ್ಯಸವೂ ಅವರಿಗಿತ್ತು.

ಇದೇ ರೀತಿ ಆರ್‌ಆರ್‌ ನಗರದ ಕಾರ್ಪೋರೇಟರ್ ಒಬ್ಬರ ಪತಿಗೆ ಎಚ್‌ಐವಿ ಸೋಂಕಿತೆ ಜೊತೆ ಲೈಂಗಿಕ ಸಂಪರ್ಕ ನಡೆಸಿ ಅದರ ವಿಡಿಯೋ ಮಾಡಿಟ್ಟುಕೊಂಡಿದ್ದರು. ಬಳಿಕ ಅವರ ಮಗನಿಗೂ ಲೈಂಗಿಕ ಸಂಪರ್ಕ ನಡೆಸುವಂತೆ ಎಚ್‌ಐವಿ ಸೋಂಕು ಇಂಜೆಕ್ಟ್ ಮಾಡುವಂತೆ ಬಲವಂತ ಮಾಡಿದ್ದರು. ಕಾರ್ಪೋರೇಟರ್ ಪತಿಯ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನನಗೂ ತೋರಿಸಿ ವಿಕೃತಿ ಮೆರೆದಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+