Bigg Boss Season 11: ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌-ಯಾರೆಲ್ಲಾ ಸ್ಪರ್ಧಿಗಳಿರಲಿದ್ದಾರೆ?

Bigg Boss Season 11: ಈಗಾಗಲೇ ಬಿಗ್ ಬಾಸ್ 10 ಸೀಸನ್‌ ಮುಗಿದಿದ್ದು, ಈ ಸೀಸನ್‌ನಲ್ಲಿ ನಟ ಕಾರ್ತಿಕ್ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು. ಇದೀಗ ಬಿಗ್‌ ಬಾಸ್‌ 11 ಯಾವಾಗ ಆರಂಭವಾಗಲಿದೆ ಹಾಗೂ ಯಾರೆಲ್ಲ ಬಿಗ್‌ ಬಾಸ್‌ ಮನೆ ಸ್ಪರ್ಧಿಸಲಿದ್ದಾರೆ ಎನ್ನುವ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ ತಿಳಿಯಿರಿ.

ಬಿಗ್‌ ಬಾಸ್‌ ಸೀಸನ್‌ 11 ಶೋ ಅಕ್ಟೋಬರ್ ತಿಂಗಳಿನಿಂದ ಆರಂಭ ಆಗಲಿದ್ದು, ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸೀಸನ್‌ನಲ್ಲಿ ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.

Bigg boss season 11 date fixed Know Details of contestants

ಬಿಗ್ ಬಾಸ್ ಸೀಸನ್‌ 10 ಕೆಲವು ವಿವಾದಗಳಿಂದ ಭಾರೀ ಸುದ್ದಿಯಾಗಿತ್ತು. ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದಲೇ ಬಂಧನವಾಗಿದ್ದು, ನಂತರ ಮತ್ತೆ ಬಿಡುಗಡೆಯಾಗಿ ಬಿಗ್‌ ಬಾಸ್‌ ಮನೆಯನ್ನು ಪ್ರವೇಶಿಸಿದ್ದರು.

ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಡ್ರೋನ್ ಪ್ರತಾಪ್ ಡ್ರೋನ್‌ ವಿಚಾರವಾಗಿಯೇ ಕೆಲವು ವಿವಾದಗಳಿಂದಲೇ ಸುದ್ದಿ ಆಗಿದ್ದರು. ಆದರೆ ಈ ಬಾರಿ ಮಜಾಭಾರತ ಖ್ಯಾತಿಯ ರಾಘವೇಂದ್ರ , ತುಕಾಲಿ ಸಂತೋಷ್‌ ಪತ್ನಿ ಮಾನಸಾ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಸೇರಿದಂತೆ ಹಲವು ಸ್ಪರ್ಧಿಗಳ ಹೆಸರು ಮುನ್ನಲೆಗೆ ಬಂದಿವೆ. ಆದರೆ ಈ ಬಗ್ಗೆ ಇನ್ನೂ ಬಿಗ್‌ ಬಾಸ್‌ ಮನೆ ಕಡೆಯಿಂದ ಯಾವುದೇ ಸುಳಿವು ಹೊರಬಿದ್ದಿಲ್ಲ.

10ನೇ ಸೀಸನ್‌ನಲ್ಲಿ ಬಿಗ್ ಬಾಸ್‌ ಮನೆ ಪ್ರವೇಶಿಸುವ ಡ್ರೋನ್‌ ಪ್ರತಾಪ್‌ ಭಾರೀ ವಿವಾದಗಳಿಗೆ ಒಳಗಾಗಿದ್ದರು. ಅಲ್ಲದೆ, ಹುಲಿ ಉಗುರಿನ ಪೆಂಡೆಂಟ್‌ ವಿಚಾರವಾಗಿ ಬಿಗ್‌ ಬಾಸ್‌ ಮನೆಯಿಂದ ಅರ್ಧದಲ್ಲೇ ವರ್ತೂರ್‌ ಸಂತೋಷ್‌ ಹೊರಹೋಗಬೇಕಾಯಿತು. ಆದರೆ ಮತ್ತೆ ತನಿಖೆ ಮುಗಿಸಿ ಬಿಗ್‌ ಬಾಸ್‌ ಮನೆಗೆ ವಾಪಾಸಾಗಿದ್ದರು. ಆದರೆ ಬಿಗ್‌ ಬಾಸ್‌ ಮುಗಿಯುವವರೆಗೂ ಒಳಗಿನವರಿಗೆ ವರ್ತೂರ್‌ ಸಂತೋಷ ಅವರಿಗೆ ಏನೆಲ್ಲ ಆಯಿತು ಎನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+