ಕೆಐಎಎಲ್ ಗೆ 2ನೇ ಬಾರಿ ಸ್ವೀಡನ್‌ನ ಸ್ಕೈಟ್ರ್ಯಾಕ್ಸ್ ಅವಾರ್ಡ್
ಬೆಂಗಳೂರು, ಮಾರ್ಚ್ 23: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಎರಡನೇ ವರ್ಷವೂ ಸ್ವೀಡನ್‌ನ ಸ್ಕೈಟ್ರ್ಯಾಕ್ಸ್ ಅವಾರ್ಡ್ ಗೆ ಭಾಜನವಾಗಿದೆ. ಭಾರತದ ಹಾಗೂ ಮಧ್ಉ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂದು ಹೊರಹೊಮ್ಮಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
2011ರ ನಂತರ ನಾಲ್ಕನೇ ಬಾರಿ ಈ ಪ್ರಶಸ್ತಿಯನ್ನು ಕೆಐಎಎಲ್ ಭಾಜನವಾಗುತ್ತಿದೆ. ಭಾರಿ ಸಂಖ್ಯೆಯ ಪ್ರಯಾಣಿಕರ ವಿಮಾನ ನಿಲ್ದಾಣ ಕುರಿತಂತೆ ಪ್ರಯಾಣಿಕರ ತೃಪ್ತಿಕರ ಸೇವೆ ಪರಿಗಣಿಸಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸತತ ಎರಡನೇ ವರ್ಷವೂ ಸ್ಕೈಟ್ರ್ಯಾಕ್ಸ್ ಪ್ರಶಸ್ತಿ ಲಭ್ಯವಾಗಿದೆ.

ಜಗತ್ತಿನ 500 ವಿಮಾನ ನಿಲ್ದಾಣಗಳಲ್ಲಿ 13.73 ಮಿಲಿಯನ್ ಜನರನ್ನು ಸಮೀಕ್ಷೆಗೆ ಒಳಪಡಿಸಿ ಈ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ. ಬಿಐಎಎಲ್ ಗುರುವಾರ ಈ ಪ್ರಕಟಣೆಯನ್ನು ಹೊರಡಿಸಿದೆ.












Click it and Unblock the Notifications