BESCOM's Helpline Numbers: ಬೆಸ್ಕಾಂನ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿಗೆ ದೂರು ನೀಡುವುದೇಗೆ? ಜಿಲ್ಲಾವರು ಸಂಪರ್ಕ ವಿವರಗಳು
BESCOM's WhatsApp Helpline Numbers: ಸಾಮಾನ್ಯವಾಗಿ ಮಳೆ ಬಂದಂತಹ ವೇಳೆ ಹಾಗೂ ಕಾಮಗಾರಿ ನಡೆಯುವಂತಹ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಮಾಡಲಾಗುತ್ತದೆ. ಇನ್ನೂ ಕರೆಂಟ್ ಕಟ್ ಆದಂತಹ ವೇಳೆ ಕುಂದುಕೊರೆತೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬಹುತೇಕ ಮಂದಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡುತ್ತಾರೆ. ಆದ್ದರಿಂದ ಹೆಚ್ಚಿನ ಪ್ರಮಾಣದ ಕರೆಗಳನ್ನು ನಿರ್ವಹಿಸಲು ಕೆಲ ಜಿಲ್ಲೆಗಳಿಗೆ ವ್ಯಾಟ್ಸಾಪ್ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಹಾಗಾದರೆ, ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಸ್ಕಾಂ ವಾಟ್ಸಾಪ್ ಸಹಾಯವಾಣಿ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ)ನ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳನ್ನು ಇಲ್ಲಿ ನೀಡಲಾಗಿದೆ. ವಿದ್ಯುತ್ ಪೂರೈಕೆ ವ್ಯತ್ಯಯ ಆದಂತಹ ಪ್ರದೇಶಗಳ ನಿವಾಸಿಗಳು ಇದಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ನೇರವಾಗಿ ಸರಬರಾಜು ಕಂಪನಿಗೆ ನೋಂದಾಯಿಸುವುದು ಸುಲಭ ಆಗಿದೆ.

ಬೆಸ್ಕಾಂ ವಾಟ್ಸಾಪ್ ಸಹಾಯವಾಣಿ ಸಂಖ್ಯೆ ಆರಂಭ ಏಕೆ?: ಕರ್ನಾಟಕವು ವಿದ್ಯುತ್ ಹೆಚ್ಚುವರಿ ರಾಜ್ಯ ಆಗಿದ್ದರೂ, ಮೂಲಸೌಕರ್ಯ ಸಮಸ್ಯೆಗಳು ಮತ್ತು ತುರ್ತು ಕಾಮಗಾರಿ ಕೈಗೊಳ್ಳುವಂತಹ ಸಮಯದಲ್ಲಿ ಬೆಂಗಳೂರಿನಲ್ಲಿ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗತ್ತದೆ.
ಆಗಾಗ ವಿದ್ಯುತ್ ಕಡಿತಗೊಳ್ಳುವುದರಿಂದ ನಿವಾಸಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ವೇಳೆ ಹೆಚ್ಚಿನ ಜನರು ಬೆಸ್ಕಾಂನ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡುತ್ತಲಿರುತ್ತಾರೆ. ಹೆಚ್ಚಿನ ಪ್ರಮಾಣದ ಕರೆಗಳನ್ನು ನಿರ್ವಹಿಸಲು ಮತ್ತು ಗ್ರಾಹಕ ಬೆಂಬಲವನ್ನು ಹೆಚ್ಚಿಸಲು, ಬೆಸ್ಕಾಂ ಈ ವರ್ಷದ ಆರಂಭದಲ್ಲಿ ಅನೇಕ ಜಿಲ್ಲೆಗಳಿಗೆ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳನ್ನು ಪರಿಚಯಿಸಿತು, ಇದರಿಂದಾಗಿ ಗ್ರಾಹಕರು ಕುಂದುಕೊರತೆಗಳನ್ನು ಹೆಚ್ಚು ವರದಿ ಮಾಡಲು ಅವಕಾಶ ಮಾಡಿಕೊಟ್ಟಿತು.
1. ಬೆಂಗಳೂರು ನಗರ
* 8277884011
* 8277884012
* 8277884013
* 8277884014
2. ಬೆಂಗಳೂರು ಗ್ರಾಮಾಂತರ: 8277884017
3. ಕೋಲಾರ: 8277884015
4. ಚಿಕ್ಕಬಳ್ಳಾಪುರ: 8277884016
5. ರಾಮನಗರ: 8277884018
6. ತುಮಕೂರು: 8277884019
7. ದಾವಣಗೆರೆ: 8277884021
8. ಚಿತ್ರದುರ್ಗ: 8277884020
ನೋಂದಣಿ ವಿವರ ಇಲ್ಲಿದೆ
* ವಿದ್ಯುತ್ ಸಂಬಂಧಿತ ದೂರುಗಳನ್ನು ವಾಟ್ಸಪ್‌ನಲ್ಲಿ ಬೆಸ್ಕಾಂಗೆ ನೋಂದಾಯಿಸಲು, ನೀವು ಮೊದಲು ನಿಮ್ಮ ಪ್ರದೇಶಕ್ಕೆ ಮೀಸಲಾದ ಬೆಸ್ಕಾಂನ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ.
* ಸಮಸ್ಯೆಯ ಫೋಟೋ ಕ್ಲಿಕ್ ಮಾಡಿ ಅಥವಾ ವೀಡಿಯೊ ಮಾಡಿ.
* ಬಳಿಕ ಕ್ಲಿಕ್ಕಿಸಿದ ಫೋಟೋ ಅಥವಾ ವಿಡಿಯೋವನ್ನು ನಿಮ್ಮ ಜಿಲ್ಲೆಗೆ ಮೀಸಲಾದ ಸಹಾಯವಾಣಿ ಸಂಖ್ಯೆಗೆ ವಾಟ್ಸಾಪ್ ಮೂಲಕ ಬೆಸ್ಕಾಂಗೆ ಕಳುಹಿಸಿ.
* ನಿಮ್ಮ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಯ ಬಗ್ಗೆ ಸರಳ ಸಂದೇಶವನ್ನು ಸಹ ಕಳುಹಿಸಬಹುದು.
ಇನ್ನು ಹೆಚ್ಚಿನ ಸೇವೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಅಥವಾ ವಾಟ್ಸಾಪ್ ಸೇವೆಯಲ್ಲಿನ ಯಾವುದೇ ಸಮಸ್ಯೆಯನ್ನು ತಿಳಿದುಕೊಳ್ಳಲು, ನೀವು ಬೆಸ್ಕಾಂನ ಗ್ರಾಹಕ ಸೇವಾ ಸಂಖ್ಯೆ 1912 ಅನ್ನು ಡಯಲ್ ಮಾಡಬಹುದು. ಆಗ ಕುಂದುಕೊರತೆಗಳನ್ನು ವೇಗವಾಗಿ ಪರಿಹರಿಸುವ ಭರವಸೆಯನ್ನು ನೀಡಲಾಗುತ್ತದೆ. ಹೀಗೆ ನೀವು ವಿದ್ಯುತ್ ಪೂರೈಕೆ ಸಂಬಂಧ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು. ಇನ್ನು ವಿದ್ಯುತ್ ಪೂರೈಕೆ ಕಡಿತಕ್ಕೂ ಮುನ್ನ ಒಂದು ದಿನ ಮುಂಚಿತವಾಗಿ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜೊತೆಗೆ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಬ್ಯಾಟರಿ ಸೇರಿದಂತೆ ಇನ್ನಿತರೆ ವಿದ್ಯುತ್ ಉಪಕರಣಗಳನ್ನು ಮುಂಜಾಗ್ರತಾ ಕ್ರಮವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವಂತೆ ಸಲಹೆಯನ್ನು ಕೂಡ ಬೆಸ್ಕಾಂ ನೀಡುತ್ತಲಿರುತ್ತದೆ.












Click it and Unblock the Notifications