ಬೆಂಗಳೂರಿಗರು & ಕನ್ನಡಿಗರು ವಿಶಾಲ ಹೃದಯವಂತರು: ನಾವು "ಲುರು" ಅಂತೀವಿ ಎಂದ ತೆಲುಗು ಭಾಷಿಗ, ಕನ್ನಡಿಗರು ಹೇಳಿದ್ದೇನು ?
ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಬಗ್ಗೆ ಹಾಗೂ ಬೆಂಗಳೂರಿನ ಬಗ್ಗೆ ಪ್ರತಿ ದಿನವೂ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಷಯಗಳು ಚರ್ಚೆ ಆಗುತ್ತಲ್ಲೇ ಇರುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಭಾಷಾ ವಿವಾದವೂ ಇನ್ನೊಂದು ಹಂತಕ್ಕೆ ಹೋಗಿದೆ. ಈ ನಡುವೆ ಬೆಂಗಳೂರಿನ ಬಗ್ಗೆ ತೆಲುಗು ಭಾಷಿಕರೊಬ್ಬರು (ಮಾತೃಭಾಷೆ ತೆಲುಗು) ಮಾಡಿರುವ ಟ್ವೀಟ್ ಪರ - ವಿರೋಧಕ್ಕೆ ಕಾರಣವಾಗಿದೆ. ಬೆಂಗಳೂರಿಗರು ಹಾಗೂ ಕನ್ನಡಿಗರು ವಿಶಾಲ ಹೃದಯವಂತರು ಈ ದ್ವೇಷವೆಲ್ಲವೂ ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಎಂದಿದ್ದಾರೆ. ಆದರೆ ಅವರು ಬಳಸಿರುವ "ಲುರು" ಬಳಕೆ ಹೆಚ್ಚು ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ.
ಬೆಂಗಳೂರಿಗೆ ಬಂದು ಇಲ್ಲೇ ಮೂರ್ನಾಲ್ಕು ತಲೆಮಾರಿನಿಂದ ನೆಲೆಸಿರುವ ತೆಲುಗು ಭಾಷಿಕರು ಹಾಗೂ ತಮಿಳಿಗರು ಈಗ ಕನ್ನಡಿಗರೇ ಆಗಿದ್ದಾರೆ. ಆದರೆ ಎಲ್ಲರೂ ಅಲ್ಲ. ಈ ರೀತಿ ನೆಲೆಸಿರುವ ಹಲವರು ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಕನ್ನಡವನ್ನು ಕಲಿತು ಜೀವನದ ಭಾಗವಾಗಿಸಿಕೊಂಡಿರುವ ಲಕ್ಷಾಂತರ ಜನ ಇದ್ದಾರೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿಯೂ ಮರಾಠಿ ಭಾಷಿಕರು ಕನ್ನಡಿಗರಾಗಿದ್ದಾರೆ. ತನು - ಮನವನ್ನು ಕನ್ನಡಕ್ಕೆ ಅರ್ಪಿಸಿರುವವರು ಇದ್ದಾರೆ. ಮನೆಯಲ್ಲಿ ನನ್ನ ಮಾತೃ ಭಾಷೆ. ಗೇಟಿನಿಂದ ಹೊರಗೆ ಬಂದರೆ ನಾನು ಕನ್ನಡತಿ... ಕನ್ನಡ ಈ ನೆಲದ ಭಾಷೆ ಎಂದು ಮಹಿಳೆಯೊಬ್ಬರು ಹೇಳಿದ್ದ ವಿಡಿಯೋ ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದೀಗ ತೆಲುಗು ಭಾಷಿಕರೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು. ಬೆಂಗಳೂರಿನಲ್ಲಿ ಭಾಷಾ ಸಮಸ್ಯೆ ಆನ್‌ಲೈನ್‌ನಲ್ಲಿ ಹೇಳುತ್ತಿರುವಂತೆ ಇಲ್ಲ. ಈ ಭಾಷಾ ವಿವಾದ & ದ್ವೇಷ ಇರುವುದು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ. ಬೆರೆತು ಬಾಳಿದರೆ ಇಲ್ಲಿ ಸಮಸ್ಯೆ ಇಲ್ಲ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನ ಸಂಕ್ಷಿಪ್ತ ರೂಪವಾಗಿ 'ಲುರು' ಎನ್ನುವ ಪದವನ್ನು ಬಳಸಿರುವುದು ಚರ್ಚೆಗೂ ಕಾರಣವಾಗಿದೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ 'ಊರು' ಎಂದರೆ ಪಟ್ಟಣ ಅಥವಾ ನಗರ ಎಂದರ್ಥ ಎಂದಿದೆ. ನಾವೆಲ್ಲರೂ ಸಣ್ಣ ವಯಸ್ಸಿನಲ್ಲಿ ಲುರು ಎನ್ನುತ್ತಿದ್ದೆವು ಎಂದಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಇಲ್ಲಿ ಭಾಷಾ ಸಮಸ್ಯೆ ಇಲ್ಲ: ಬೆಂಗಳೂರಿನಲ್ಲಿ ಭಾಷಾ ವಿವಾದವಾಗಲಿ ಅಥವಾ ಭಾಷಾ ಸಮಸ್ಯೆ ಆಗಲಿ ಇರುವುದು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ. ನಿಜವಾಗಿಯೂ ಬೆಂಗಳೂರಿನಲ್ಲಿ ಆ ರೀತಿ ಇಲ್ಲ. ಬೆಂಗಳೂರಿನಲ್ಲಿ ನಾವು ಸ್ವಿಚ್ ಇನ್ ಆಗುತ್ತವೆ. ಒಂದು ಭಾಷೆ ಮಾತನಾಡುತ್ತಲ್ಲೇ ಮತ್ತೊಂದು ಭಾಷೆಯಲ್ಲಿ ಮಾತನಾಡುವ ಸಾಮರ್ಥ್ಯ ಇಲ್ಲಿನ ಜನರಿಗೆ ಇದೆ. ದೈನಂದಿನ ಜೀವನದಲ್ಲಿ ನಾವು ಕನ್ನಡ, ತೆಲುಗು, ತಮಿಳು ಮತ್ತು ಡೆಕ್ಕಾನಿ ಭಾಷೆಗಳನ್ನು ಸುಲಭವಾಗಿ ಬದಲಾಯಿಸುತ್ತೇವೆ. ಈ ದ್ವೇಷವು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮಾತ್ರ ಎಂದಿದ್ದಾರೆ.
ಇದೇ ಸಮಸ್ಯೆ: ಇನ್ನು ಬೆಂಗಳೂರಿನಲ್ಲಿ ಇದೇ ಸಮಸ್ಯೆ ಬೆಂಗಳೂರಿಗರು ಹೊರ ರಾಜ್ಯದವರ ಭಾಷೆಯನ್ನು ಕಲಿಯುತ್ತಾರೆ. ಆದರೆ ಅವರಿಗೆ ಕನ್ನಡ ಕಲಿಸುವುದರಲ್ಲಿ ಹಿಂದುಳಿಯುತ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.
ಬೆಂಗಳೂರು "ಲುರು" ಎನ್ನುತ್ತೇವೆ ಎನ್ನುವುದಕ್ಕೆ ವಿರೋಧ!
Mr ಅದು B'lore ಯಾರೂ ಸಹ ಬೆಂಗಳೂರನ್ನು lore ಎನ್ನಲ್ಲ. ನೀವು ಬೇಕಾದರೆ B'luru ಎನ್ನಬಹುದು ಎಂದಿದ್ದಾರೆ. ಬೆಂಗಳೂರಿನಲ್ಲಿ ತೆಲುಗು ಭಾಷೆಯನ್ನು ಕನ್ನಡಕ್ಕೆ ಸಮಾನವಾಗಿಸುವ ಕನಸು ಕಾಣುತ್ತಿದ್ದಾರೆ. ನಿಮ್ಮ ಕನಸಿನಲ್ಲಿಯೂ ಅದು ಸಾಧ್ಯವಿಲ್ಲ.. ವಲಸಿಗರು ಶಾಶ್ವತವಾಗಿ ವಲಸಿಗರೇ. ನೀವು ಎಂದಿಗೂ ಸ್ಥಳೀಯರಾಗಲು ಸಾಧ್ಯವಿಲ್ಲ. ಹಲವು ವರ್ಷಗಳ ಕಾಲ ಇಲ್ಲಿಯೇ ಇದ್ದ ನಂತರ ನೀವು ಸ್ಥಳೀಯರಾಗಬಹುದು ನಿಮ್ಮ ಮಾತೃಭಾಷೆಯನ್ನು ಮರೆತು ಕನ್ನಡಕ್ಕೆ ಅಂಟಿಕೊಳ್ಳಿ ಎಂದು ಕನ್ನಡಿಗರು ಹೇಳಿದ್ದಾರೆ. ಲುರು ಬಳಕೆಯ ಬಗ್ಗೆ ಕನ್ನಡಿಗರು ಅಸಮಾಧಾನ ಹೊರ ಹಾಕಿದ್ದಾರೆ.












Click it and Unblock the Notifications