ಕ್ಯಾಬ್‌ನಿಂದ ಇಳಿತಿಯೋ ಇಲ್ಲ ಬಟ್ಟೆ ಹರಿತೀನಿ: ಊಬರ್ ಚಾಲಕನ ನೀಚ ಮಾತು
ಬೆಂಗಳೂರು, ಆಗಸ್ಟ್ 6: ಇತ್ತೀಚೆಗೆ ಊಬರ್, ಓಲಾ ಕ್ಯಾಬ್ ಚಾಲಕರ ಉಪಟಳ ಹೆಚ್ಚಾಗಿದೆ. ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ.
ಈ ಕಹಿ ಘಟನೆ ಕುರಿತು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನನ್ನ ಜೀವನದಲ್ಲಿ ಸತ್ಯಂತ ಕಹಿ ಘಟನೆಯೊಂದು ನಡೆದೇ ಹೋಗಿದೆ.
ರಾತ್ರಿ ಊಟ ಮುಗಿಸಿ ಊಬರ್ ಕಾರ್ ಹತ್ತಿದೆ. ಚಾಲಕ ಅದು ಇದು ಮಾತನಾಡುತ್ತಾ ಬಳಿಕ ಹೆಣ್ಣುಮಕ್ಕಳು 7 ಗಂಟೆಗೆ ಮನೆಗೆ ಸೇರಬೇಕು ಅಂತೆಲ್ಲಾ ಹೇಳಿದ ಬಳಿಕ ಅದೆಲ್ಲಾ ನೀವು ಮಾತನಾಡುವುದು ಬೇಡ, ಅದು ನನ್ನ ವೈಯಕ್ತಿಕ ವಿಚಾರ ಎಂದು ಹೇಳಿದೆ.

ಅದು ಜಗಳಕ್ಕೆ ಕಾರಣವಾಯಿತು. ಬಳಿಕ ಎಮರ್ಜೆನ್ಸಿ ಬಟನ್ ಒತ್ತಿದೆ. ಕಸ್ಟಮರ್ ಕೇರ್‌ನವರು ಕರೆ ಮಾಡಿದರು ಆಗ ನಾನು ಕುಡಿದಿದ್ದೇನೆ ಎಂದು ಸುಳ್ಳು ಹೇಳಿದ. ನನಗೆ ಆಶ್ಚರ್ಯವಾಗಿತ್ತು. ಜೋರಾಗಿ ಕಿರುಚಿದೆ ಕಸ್ಟಮರ್ ಕೇರ್‌ನವರು ನನ್ನ ಬಳಿ ಮಾತನಾಡಿ ಕೂಡಲೇ ಕಾರನ್ನು ಬಿಟ್ಟು ಕೆಳಗಿಯಲು ಹೇಳಿದರು. ಬೇರೆ ಕ್ಯಾಬ್ ಕಳುಹಿಸುವುದಾಗಿಯೂ ತಿಳಿಸಿದ್ದರು.
ಆಗ ಚಾಲಕ ನೀವು ಕಾರಿನಿಂದ ಕೆಳಗಿಳಿಯಿರಿ ಇಲ್ಲವಾದರೆ ಬಟ್ಟೆ ಹರಿಯುತ್ತೀನಿ ಎಂದು ಎಂದು ಗದರಿಸಿದ್ದ. ಕಾರಿನಿಂದ ಇಳಿಯುವಾಗ ರಾತ್ರಿ ಹನ್ನೊಂದು ಗಂಟೆ ದಾಟಿತ್ತು. ಬೇರೆ ಕ್ಯಾಬನ್ನು ಕಳುಹಿಸಿಲ್ಲ, ಹಣವನ್ನು ವಾಪಸ್ ನೀಡಿಲ್ಲ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications