ಬೆಂಗಳೂರು ರಸ್ತೆಗಳಲ್ಲಿ 12 ಕಿ.ಮೀ ಜಾಗಿಂಗ್: ಟ್ರಾಫಿಕ್ ಮತ್ತು ಧೂಳಿನಿಂದ ಮಹಿಳೆಯ ಹೈರಾಣ, Video Viral

ಬೆಂಗಳೂರು: ತಮ್ಮ ಪ್ರೀತಿಯ ಸ್ನೇಹಿತೆಯನ್ನು ಭೇಟಿಯಾಗಲು ಬೆಳಗಿನ ಜಾವ ಇಡೀ ನಗರವನ್ನು ಜಾಗಿಂಗ್ ಮೂಲಕ ಹೋಗಲು ಮುಂದಾದ ಬೆಂಗಳೂರಿನ ಮಹಿಳೆಯೊಬ್ಬರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೀರ್ತಿ ಪುರಸ್ವಾನಿ ಎಂಬ ಮಹಿಳೆ, ಸರ್ಜಾಪುರದಿಂದ ಮಹದೇವಪುರದವರೆಗೆ ತಾವು ಮಾಡಿದ ಜಾಗಿಂಗ್ ಪ್ರಯಾಣವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಕಾಲ್ನಡಿಗೆಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವುದು ಎಷ್ಟು ಕಷ್ಟ ಎಂಬ ನೈಜ ಚಿತ್ರಣವನ್ನು ಇದು ತೆರೆದಿಟ್ಟಿದೆ.

ತಮ್ಮ ವಿಡಿಯೋದಲ್ಲಿ ಈ ಬಗ್ಗೆ ವಿವರಿಸಿರುವ ಕೀರ್ತಿ, "ನಾನು ಸರ್ಜಾಪುರದಲ್ಲಿ ವಾಸಿಸುತ್ತಿದ್ದೇನೆ, ನನ್ನ ಬೆಸ್ಟ್ ಫ್ರೆಂಡ್ ಮಹದೇವಪುರದ ಬಾಗ್ಮನೆ ಗೂಗಲ್‌ನಲ್ಲಿ ಕೆಲಸ ಮಾಡುತ್ತಾಳೆ. ನಮಗೆ ಸಿಗಲು ಸರಿಯಾಗಿ ಸಮಯವೇ ಸಿಗುವುದಿಲ್ಲ, ಇದು ನಿಜಕ್ಕೂ ಬೇಸರದ ಸಂಗತಿ. ಹಾಗಾಗಿ ಇಂದು ಸರ್ಜಾಪುರದಿಂದ ಮಹದೇವಪುರಕ್ಕೆ ಜಾಗಿಂಗ್ ಮೂಲಕ ಹೋಗಿ, ಅವಳೊಂದಿಗೆ ಬೆಳಗಿನ ಉಪಾಹಾರ ಸವಿಯಲು ನಿರ್ಧರಿಸಿದ್ದೇನೆ. ಈಗ ಬೆಳಿಗ್ಗೆ 6 ಗಂಟೆಯಾಗಿದೆ, ನಾನು ಈ ರೀತಿ ಮಾಡುತ್ತಿರುವುದು ಯಾರಿಗೂ ತಿಳಿದಿಲ್ಲ. ನನ್ನ ಪತಿ ಹಾಗೂ ಸ್ನೇಹಿತೆ ಇಬ್ಬರೂ ನಿದ್ದೆಯಲ್ಲಿದ್ದಾರೆ. ನನ್ನ ಈ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ನೋಡೋಣ," ಎಂದು ಹೇಳುತ್ತಾ ತಮ್ಮ ಓಟವನ್ನು ಆರಂಭಿಸಿದ್ದಾರೆ.

Bengaluru

ದಾರಿಯುದ್ದಕ್ಕೂ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, "ಕೆರೆಯ ಬಳಿ 1 ಕಿ.ಮೀ, ಮಣಿಪಾಲ್ ಆಸ್ಪತ್ರೆ ಬಳಿ 2 ಕಿ.ಮೀ ಕ್ರಮಿಸಿದ್ದೇನೆ. ಇದು ಸುಲಭವಲ್ಲ, ನನ್ನ ಹೃದಯದ ಬಡಿತ 174 ತಲುಪಿದೆ, ಹೊಟ್ಟೆಯ ಪಕ್ಕದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ನನ್ನ ವೇಗ ಕಡಿಮೆಯಾಗಿದ್ದರೂ, ನಡೆದುಕೊಂಡಾದರೂ ಗುರಿ ತಲುಪುತ್ತೇನೆ," ಎಂದು ಹೇಳಿದ್ದಾರೆ. ಆದರೆ, ದೂರ ಕ್ರಮಿಸಿದಂತೆ ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಸಮಸ್ಯೆಗಳು ಹೆಚ್ಚಾಗಿವೆ. "ಸೆಸ್ನಾ ಬ್ಯುಸಿನೆಸ್ ಪಾರ್ಕ್, ಮಾರತ್ತಹಳ್ಳಿಯ ಮೇಘನಾ ಫುಡ್ಸ್ ದಾಟುವಷ್ಟರಲ್ಲಿ 8 ಕಿ.ಮೀ ಮುಗಿದಿದೆ. ಆದರೆ ಈಗ ಟ್ರಾಫಿಕ್ (Traffic) ಮತ್ತು ದೂಳು ವಿಪರೀತವಾಗಿದೆ. ನಾನು ಕಣ್ಣಿಗೆ ಕನ್ನಡಕ (Goggles) ಹಾಕಿಕೊಳ್ಳಬೇಕಿತ್ತು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?
Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?

ಕೊನೆಯ ಹಂತದ ಕುರಿತು ಮಾತನಾಡುತ್ತಾ, "ಫ್ಲೈಓವರ್ ದಾಟಿದ್ದೇನೆ, 10 ಕಿ.ಮೀ ಮುಗಿದಿದೆ, ಇನ್ನು 2 ಕಿ.ಮೀ ಬಾಕಿಯಿದೆ. ಈಗ ನಾನು ರಸ್ತೆ ದಾಟಿ ಮುಖ್ಯ ರಸ್ತೆಯಲ್ಲಿಯೇ ಹೋಗಬೇಕು. ಕೊನೆಯ 2 ಕಿ.ಮೀ ನಲ್ಲಿ ಯಾವುದೇ ಫುಟ್‌ಪಾತ್ (Sidewalk) ಇಲ್ಲ. ರೈನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆ ಬಳಿ ಸಂಪೂರ್ಣವಾಗಿ ವಾಹನ ದಟ್ಟಣೆಯಿರುವ ಮುಖ್ಯ ರಸ್ತೆಯಲ್ಲಿಯೇ ಓಡಿದ್ದೇನೆ," ಎಂದು ಬೆಂಗಳೂರಿನ ಪಾದಚಾರಿಗಳ ಸಂಕಷ್ಟವನ್ನು ವಿವರಿಸಿದ್ದಾರೆ.

ಇಷ್ಟೆಲ್ಲಾ ಕಷ್ಟಪಟ್ಟು ಬೆಳಿಗ್ಗೆ 7:45ಕ್ಕೆ ಸ್ನೇಹಿತೆಯ ಮನೆ ತಲುಪಿದರೆ, ಅಲ್ಲಿ ಕೀರ್ತಿಗೆ ನಿರಾಸೆ ಕಾದಿತ್ತು! "ನನ್ನ ಪ್ರಯತ್ನ ವಿಫಲವಾಗಿದೆ. ನಾನು ತಲುಪುವಷ್ಟರಲ್ಲಿ ಅವಳು ಆಫೀಸ್ ಕಾಲ್‌ನಲ್ಲಿದ್ದಳು, ಕಚೇರಿಗೆ ಹೋಗಿದ್ದಳು. ಗೂಗಲ್ ಉದ್ಯೋಗಿಗಳು ತುಂಬಾ ಕೆಲಸ ಮಾಡುತ್ತಾರೆ. ಗೂಗಲ್‌ನಲ್ಲಿ ಕೆಲಸ ಮಾಡುವವರನ್ನು ಬೆಸ್ಟ್ ಫ್ರೆಂಡ್ಸ್ ಆಗಿ ಮಾಡಿಕೊಳ್ಳಬೇಡಿ!" ಎಂದು ತಮಾಷೆಯಾಗಿ ಹೇಳಿದ್ದಾರೆ. ತಮ್ಮ ವಿಡಿಯೋಗೆ "ಬೆಂಗಳೂರು ರಸ್ತೆಗಳಲ್ಲಿ ಟಕೇಶಿಸ್ ಕ್ಯಾಸಲ್ (Takeshi's Castle) ಆಡಿದಂತಿದೆ. ನಾನು ಬಿಗಿನರ್ ಆಗಿರುವುದರಿಂದ ಈ ವಿಡಿಯೋ ಹಾಕಬೇಕೋ ಬೇಡವೋ ಎಂಬ ಗೊಂದಲವಿತ್ತು," ಎಂದು ಅಡಿಬರಹ ನೀಡಿದ್ದಾರೆ.

50 ಲಕ್ಷ ಸಂಬಳವಿದ್ದರೂ ಐಫೋನ್, ಐಷಾರಾಮಿ ಕಾರು ಬೇಡ: ಹೊಸ ಟ್ರೆಂಡ್ ಸೃಷ್ಟಿಸಿದ 27 ವರ್ಷದ ಬೆಂಗಳೂರು ಟೆಕ್ಕಿ
50 ಲಕ್ಷ ಸಂಬಳವಿದ್ದರೂ ಐಫೋನ್, ಐಷಾರಾಮಿ ಕಾರು ಬೇಡ: ಹೊಸ ಟ್ರೆಂಡ್ ಸೃಷ್ಟಿಸಿದ 27 ವರ್ಷದ ಬೆಂಗಳೂರು ಟೆಕ್ಕಿ

ಈ ವಿಡಿಯೋ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಅನೇಕರು ಬೆಂಗಳೂರಿನ ರಸ್ತೆಗಳ ವಾಸ್ತವವನ್ನು ಒಪ್ಪಿಕೊಂಡಿದ್ದಾರೆ. "ಇದು ನೂರಕ್ಕೆ ನೂರು ಸತ್ಯ, ಬೆಂಗಳೂರಿನ ರಸ್ತೆಗಳನ್ನು ಪಾದಚಾರಿಗಳಿಗಾಗಿ ಮಾಡಿಲ್ಲ," ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು, "ನಿಮ್ಮ ಶ್ರಮಕ್ಕೆ ಮೆಚ್ಚುಗೆ, ಆದರೆ ಇಲ್ಲಿನ ಟ್ರಾಫಿಕ್ ಹೋರಾಟ ನಿಜಕ್ಕೂ ಭಯಾನಕ," ಎಂದಿದ್ದಾರೆ. ದೂಳು ಮತ್ತು ಫುಟ್‌ಪಾತ್ ಇಲ್ಲದಿರುವುದನ್ನು ಹಲವರು ಪ್ರಸ್ತಾಪಿಸಿ, "ಬೆಂಗಳೂರಿನಲ್ಲಿ ಮಾತ್ರ ಒಂದು ಸರಳ ಜಾಗಿಂಗ್ ಇಂತಹ ಸಾಹಸಮಯ ಯಾನವಾಗಿ ಬದಲಾಗಲು ಸಾಧ್ಯ," ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+