ಬೆಂಗಳೂರಲ್ಲಿ 4 ದಿನ ತುಂತುರು ಮಳೆ, ಕೊರೆವ ಚಳಿ, ಕೆಟ್ಟ ಗಾಳಿ
ಬೆಂಗಳೂರು, ನವೆಂಬರ್ 3: ತಮಿಳುನಾಡಿನಲ್ಲಿ ಈಶಾನ್ಯ ಹಿಂಗಾರು ಚುರುಕಾಗಿದ್ದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ನವೆಂಬರ್ 7 ರವರೆಗೆ ತುಂತುರು ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಬೆಂಗಳೂರಿಗೂ ಹಿಂಗಾರಿನ ಆಗಮನವಾಗಿದ್ದು ನವೆಂಬರ್ 7ರವರೆಗೆ ಆಗಾಗ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ನಿರ್ಗಮನದ ನಂತರ ಕಳೆದ ವಾರ ದಕ್ಷಿಣ ಒಳನಾಡಿಗೆ ಹಿಂಗಾರಿನ ಆಮನವಾಗಿದೆ. ರಾಜಧಾನಿಯಲ್ಲಿ ಮೊದಲ ದಿನವೇ ಮಳೆಯಾಗಿದೆ.
ಸಾಮಾನ್ಯವಾಗಿ ಹಿಂಗಾರು ಆಗಮನದ ವೇಳೆ ಜೋರು ಮಳೆಯಾಗುತತ್ದೆ. ಆದರೆ ಈ ವರ್ಷ ತುಂತುರು ಮಳೆಯಾಗಿದೆ. ನಗರದ ಕೇಂದ್ರ ಭಾಗಗಳಲ್ಲಿ ಕೆಲವೆಡೆ ಮಾತ್ರ ಮಳೆಯಾಗಿದೆ.

ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು, ಪಾಂಡಿಚೇರಿ, ಆಂಧ್ರ ಪ್ರದೇಶದ ಹಾಗೂ ಕರ್ನಾಟಕದ ಕೆಲ ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಆದರೆ ಹಿಂಗಾರಿನಲ್ಲಿ ಹೆಚ್ಚಾಗಿ ತಮಿಳುನಾಡಿನಲ್ಲಿ ಮಳೆಯಾಗುತ್ತದೆ. ಮುಂಗಾರಿನಲ್ಲಿ ಕರ್ನಾಟಕದಲ್ಲಿ ಮಳೆಯಾಗುತ್ತದೆ. ಈ ಬಾರಿ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.












Click it and Unblock the Notifications