Bengaluru Temperature: ಶತಮಾನದ ಗರಿಷ್ಠ ತಾಪಮಾನ, ಬುಧವಾರ 32.5 ಡಿಸೆ ದಾಖಲು, ಅಂಕಿ-ಸಂಖ್ಯೆ ಇಲ್ಲಿದೆ

ಬೆಂಗಳೂರು, ಆಗಸ್ಟ್ 16: ಪ್ರತಿ ವರ್ಷ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ದಾಖಲಾಗುತ್ತಿತ್ತು. ಎರಡು ವರ್ಷದಿಂದ ದಾಖಲೆ ಮಳೆ ಆಗಸ್ಟ್‌ನಲ್ಲಿ ಸುರಿದಿದೆ. ವಿಪರ್ಯಾಸವೆಂದರೆ ಈ ಬಾರಿ ಆಗಸ್ಟ್‌ನಲ್ಲಿ ಶತಮಾನದ ದಾಖಲೆಯ ತಾಪಮಾನ ದಾಖಲಾಗಿದೆ. ಈ ಮೂಲಕ ಮಳೆಗಾಲದಲ್ಲಿ ಸಹ ಶುಷ್ಕ ವಾತಾವರಣ ಮುಂದುವರಿದಿದೆ. ಬೆಂಗಳೂರಿನ KIAL ಪ್ರದೇಶದಲ್ಲಿಯೇ ಬುಧವಾರ 32.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಇದು ಶತಮಾನದಲ್ಲೇ ಆಗಸ್ಟ್‌ನಲ್ಲಿ ಕಂಡು ಬಂದ ಅಧಿಕ ತಾಪಮಾನ ಅಂತಲೂ ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಬರುವ ಈ ಬೆಂಗಳೂರಿನಲ್ಲಿ ಅಧಿಕ ಮಳೆ ಸುರಿಯುವುದು ವಾಡಿಕೆ ಆದರೆ ಈ ಬಾರಿ ಎಲ್ಲವೂ ಬದಲಾಗಿದೆ. ಮಳೆ ಕಡಿಮೆ ಆಗಿದ್ದಲ್ಲದೇ ತಾಪಮಾನ ಎಗ್ಗಿಲ್ಲದೇ ದಾಖಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಹೀಗೆ ಶುಷ್ಕ ವಾತಾವರಣ ಮುಂದುವರಿಯುವ ಸಾಧ್ಯತೆಗಳು ಇವೆ.

Bengaluru weather: Extremely High Temperature Recorded In august At Bengaluru Over 100 Years

ಬುಧವಾರ ಬೆಳಗ್ಗೆ ನಗರದ KIAL ಪ್ರದೇಶದಲ್ಲಿ 32.5 ಡಿಗ್ರಿ ಸೆಲ್ಸಿಯಸ್, ನಗರದ ಭಾಗದಲ್ಲಿ 31.8 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 31.5ಡಿಗ್ರಿ ಸೆಲ್ಸಿಯಸ್ ಮಳೆ ದಾಖಲಾಗಿದೆ. ಇದೆಲ್ಲ ಗಮನಿಸಿದರೆ ಆಗಸ್ಟ್‌ ತಿಂಗಳಲ್ಲಿ ಅಧಿಕ ಮಳೆಯಾಗಿ ಮಲೆನಾಡಿನ ವಾತಾವರಣದಂತೆ ಆಗಬೇಕಿದ್ದ ಬೆಂಗಳೂರು ಇದೀಗ ಉತ್ತರ ಕರ್ನಾಟಕದ ಜಿಲ್ಲೆಗಳಂತಾಗಿದೆ.

ಶೇ 40ಕ್ಕೂ ಅಧಿಕ ಮಳೆ ಕೊರತೆ?

ಇನ್ನೂ ಮೂಲಗಳ ಪ್ರಕಾರ 1899ರಲ್ಲಿ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದೇ ತಿಂಗಳು ಬೆಂಗಳೂರು ಶೇಕಡಾ 40ಕ್ಕಿಂತಲೂ ಅಧಿಕ ಮಳೆ ಕೊರತೆ ಎದುರಾಗಿದೆ ಎನ್ನಲಾಗಿದೆ. ನಿರೀಕ್ಷಿತ ಮಳೆ ಈ ಬಾರಿ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಕೆಲವೆಡೆ ಆಗಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

Bengaluru weather: Extremely High Temperature Recorded In august At Bengaluru Over 100 Years

ಒಂದು ತಿಂಗಳು ತಡವಾಗಿ ಆರಂಭವಾದ ಮಳೆ, ಜುಲೈನಲ್ಲಿ ಅಬ್ಬರಿಸಿತ್ತು. ಆಗ ಕೆಲವು ದಿನ ಮಾತ್ರ ಬೆಂಗಳೂರಿನಲ್ಲಿ ಕಂಡು ಬಂದರೆ, ಉಳಿದಂತೆ ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚಾಗಿತ್ತು. ಇದನ್ನು ಹೊರತುಪಡಿಸಿದರೆ, ಈ ಬಾರಿ ಸಾಮಾನ್ಯ ಮಳೆ ನಿರೀಕ್ಷೆ ಇತ್ತು, ಅಷ್ಟು ಮಳೆ ಸಹ ಆಗಲಾರದು ಎಂಬ ವಾತಾವರಣ ಸದ್ಯ ಕಂಡು ಬರುತ್ತಿದೆ.

ಒಂದು ದಶಕದ ತಾಪಮಾನ ಮಾಹಿತಿ

ಇನ್ನೂ ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ಕಂಡು ಬಂದ ತಾಪಮಾನ ವಿವರ ನೋಡುವುದಾದರೆ, 2011ರಲ್ಲಿ ಗರಿಷ್ಠ 30.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ 2012ರಲ್ಲಿ ಗರಿಷ್ಠ 32.4 ಮತ್ತು ಕನಿಷ್ಠ 19.5 ಡಿ.ಸೆ, 2013 ಗರಿಷ್ಠ 30.3 ಮತ್ತು ಕನಿಷ್ಠ 18.6 ಡಿ.ಸೆ, 2014 ರಲ್ಲಿ ಗರಿಷ್ಠ 30.8 ಮತ್ತು ಕನಿಷ್ಠ 19.4 ಡಿ.ಸೆ ತಾಪಮಾನ ದಾಖಲಾಗಿದೆ.

2015 ಗರಿಷ್ಠ 31.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19.4 ಡಿ.ಸೆ. ಉಷ್ಣಾಂಶ, 2016ರಲ್ಲಿ ಗರಿಷ್ಠ 30.6 ಡಿ.ಸೆ. ಮತ್ತು ಕನಿಷ್ಠ 19.1 ಡಿ.ಸೆ, 2017ರಲ್ಲಿ ಗರಿಷ್ಠ 31.5 ಡಿ.ಸೆ, 19.2 ಡಿ.ಸೆ ಹಾಗೂ 2021ರಲ್ಲಿ ಗರಿಷ್ಠ 30.7 ಡಿ.ಸೆ ಹಾಗೂ ಕನಿಷ್ಟ 19.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ತುಂತುರು ಮಳೆ: ಶುಷ್ಕ ವಾತಾವರಣ ನಿರೀಕ್ಷೆ

ಬುಧವಾರ ರಾತ್ರಿ ನಗರದ ಕೆಲವೆಡೆ ತುಂತುರು ಮಳೆ ದಾಖಲಾಗಿದೆ. ಮುಂದಿನ ನಾಲ್ಕೈದು ದಿನ ನಗರದಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ಸದ್ಯ ಕರ್ನಾಟಕದಲ್ಲಿ ಯಾವ ಭಾಗದಲ್ಲಿಯೂ ಅಷ್ಟಾಗಿ ಮಳೆ ದಾಖಲಾಗಿಲ್ಲ. ಮುಂದಿನ ಮೂರರಿಂದ ನಾಲ್ಕು ದಿನ ಕರಾವಳಿ ಭಾಗ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಒಂದೆರಡು ಕಡೆ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇದರ ಹೊರತಾಗಿ ಎಲ್ಲಿಯೂ ಗಂಭೀರ ಮಳೆ ವಾತವರಣ ಇರದೇ ಶುಷ್ಕ ವಾತಾವರಣವೇ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+