Bengaluru Viral Video: ಹೃದಯಾಘಾತ ಅಂಗಲಾಚಿದರೂ ಸಿಗಲಿಲ್ಲ ಸಹಾಯ; ರಸ್ತೆಯಲ್ಲೇ ವ್ಯಕ್ತಿ ಸಾವು
Bengaluru Viral Video: ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಈ ಘಟನೆ ಇಡೀ ಬೆಂಗಳೂರು ತಲೆತಗ್ಗಿಸುವಂತೆ ಮಾಡಿದೆ. ಮಾನವೀಯತೆ ವಿಚಾರದಲ್ಲಿ ನಾಗರಿಕ ಸಮಾಜವೊಂದು ಯಾವ ರೀತಿ ನಡೆದುಕೊಳ್ಳಬಾರದು ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಈ ಘಟನೆ ಇದೆ. ಹೃದಯಾಘಾತದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಡು ರಸ್ತೆಯಲ್ಲೇ ಒದ್ದಾಡಿ ಸಾವನ್ನಪ್ಪಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳವಾರ (ಡಿಸೆಂಬರ್ 16) ನಡೆದಿರುವ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮೃತರ ಪತ್ನಿಯು ಯಾರಾದರೂ ಒಬ್ಬರಾದರೂ ಸಹಾಯ ಮಾಡಿದ್ದರೆ ನನ್ನ ಪತಿ ಉಳಿಯುತ್ತಿದ್ದರು. ಯಾರೂ ಸಹಾಯ ಮಾಡಲಿಲ್ಲ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಹ ಸಿಗಲಿಲ್ಲ ಎಂದು ಹೇಳಿದ್ದಾರೆ.

ಹೃದಯಾಘಾತದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ದಾರಿಯಲ್ಲಿಯೇ ಸಾವನ್ನಪ್ಪಿದ್ದಾರೆ. ದಾರಿಯಲ್ಲಿ ಹೋಗುವವರ ಬಳಿ ಜೀವ ಉಳಿಸುವುದಕ್ಕೆ ಅಂಗಲಾಚಿದರೂ ಯಾರೊಬ್ಬರೂ ಮುಂದೆ ಬಂದು ಸಹಾಯ ಮಾಡಿಲ್ಲ. ಈ ದುರಂತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದದ್ದೇನು ?
ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದೆ. ನಗರದ ಬನಶಂಕರಿ ಸಮೀಪದ ಕದಿರೇನಹಳ್ಳಿಯಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಹಾಗೂ ಅವರ ಪತ್ನಿ ಆಸ್ಪತ್ರೆಗೆ ಹೋಗಬೇಕು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದರೂ ಯಾರೂ ಸಹ ಸಹಾಯಕ್ಕೆ ಬಂದಿಲ್ಲ. ಹೃದಯಾಘಾತಕ್ಕೆ ಒಳಗಾಗದ ವೆಂಕಟರಮಣ ಎನ್ನುವವರನ್ನು ಜಯದೇವ ಆಸ್ಪತ್ರೆಗೆ ಸಾಗಿಸಲು ಅವರ ಪತಿ ರೂಪಾ ಅವರು ಪರದಾಡಿದ್ದಾರೆ.
ವೆಂಕಟರಮಣ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಸಕಾಲದಲ್ಲಿ ಆಂಬುಲೆನ್ಸ್ ಸೇವೆ ಸಹ ಸಿಕ್ಕಿಲ್ಲ. ಹೀಗಾಗಿ ದಂಪತಿಯೇ ಬೈಕ್ನಲ್ಲಿ ಆಸ್ಪತ್ರೆಗೆ ಹೋಗುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಬೈಕ್ವೊಂದಕ್ಕೆ ಡಿಕ್ಕಿಯಾಗಿದ್ದು ವೆಂಕಟರಮಣ ಎನ್ನುವವರಿಗೆ ಗಂಭೀರ ಗಾಯವಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಬೇಡಿಕೊಂಡರೂ ಯಾರೂ ಸಹ ಸಹಾಯ ಮಾಡಿಲ್ಲ. ಯಾರಾದರೂ ಆಗ ಸಹಾಯಕ್ಕೆ ಬಂದಿದ್ದರೆ ನನ್ನ ಗಂಡನ ಜೀವ ಉಳಿಸಬಹುದಾಗಿತ್ತು ಎಂದು ರೂಪಾ ಅವರು ಹೇಳಿದ್ದಾರೆ.
ಘಟನೆಯ ಹಿನ್ನೆಲೆ ಏನು ?
ಮಂಗಳವಾರ ಸಂಜೆ ವೆಂಕಟರಮಣ ಅವರು ತೀವ್ರ ಎದೆನೋವು ಅನುಭವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮೊದಲು ಹತ್ತಿರದ ಆಸ್ಪತ್ರೆಗೆ ಕರೆದಿದ್ದು, ಅವರು ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಕೂಡಲೇ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಆಂಬುಲೆನ್ಸ್ ಸೇವೆ ಕಲ್ಪಿಸಿಲ್ಲ ಎಂದು ರೂಪಾ ಅವರು ಆರೋಪಿಸಿದ್ದಾರೆ. ಬೇರೆ ದಾರಿಯಿಲ್ಲದೆ, ದಂಪತಿಗಳು ಆಸ್ಪತ್ರೆ ತಲುಪಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆವು.
ವಾಹನದಲ್ಲಿ ಹೋಗುವಾಗಲೇ ವೆಂಕಟರಮಣ ಅವರ ಸ್ಥಿತಿ ಹದಗೆಟ್ಟಿತ್ತು. ಅಲ್ಲದೇ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಇಬ್ಬರೂ ರಸ್ತೆಯಲ್ಲಿ ಬಿದ್ದೆವು. ವೆಂಕಟರಮಣ ಅವರು ರಕ್ತಸ್ರಾವವಾಗಿ ಉಸಿರಾಡಲು ಕಷ್ಟಪಡುತ್ತಾ ಕುಸಿದುಬಿದ್ದರು. ಯಾರೂ ಸಹಾಯಕ್ಕೆ ಬರಲೇ ಇಲ್ಲ ಯಾರಾದರೂ ಒಬ್ಬರು ಬಂದಿದ್ದರೂ ಅವರ ಜೀವವನ್ನು ಉಳಿಸಬಹುದಾಗಿತ್ತು ಎಂದು ರೂಪಾ ಹೇಳಿದ್ದಾರೆ.
15 ನಿಮಿಷ ನಾನು ಬೇಡಿಕೊಂಡರೂ ಯಾರೊಬ್ಬರೂ ಬರಲಿಲ್ಲ. ಕೊನೆಯದಾಗಿ ಯಾರೋ ಕ್ಯಾಬ್ ಬುಕ್ ಮಾಡಿಕೊಟ್ಟರು ಆದರೆ ಅಷ್ಟೊತ್ತಿಗಾಗಲೇ ವೆಂಕಟರಮಣ ಅವರು ಸಾವನ್ನಪ್ಪಿದ್ದರು ಎಂದು ರೂಪಾ ಅವರು ಹೇಳಿದ್ದಾರೆ.
ಕಣ್ಣುಗಳ ದಾನ: ಸಮಾಜದಲ್ಲಿ ಯಾರೊಬ್ಬರೂ ಸಹಾಯ ಮಾಡದಿದ್ದರೂ ವೆಂಕಟರಮಣ ಅವರು ಮತ್ತೊಬ್ಬರ ಬದುಕಿಗೆ ಆಶಾಕಿರಣವಾಗಿದ್ದಾರೆ. ಅವರ ಸಾವಿನ ನಂತರ ತೀವ್ರ ದುಃಖದ ನಡುವೆಯೂ ಪತಿಯ ನೇತ್ರದಾನ ಮಾಡುವುದಕ್ಕೆ ಅವರ ಪತ್ನಿ ರೂಪಾ ಮುಂದಾಗಿದ್ದು, ಅವರ ಕಣ್ಣುಗಳನ್ನು ದಾನ ಮಾಡಲಾಗುತ್ತಿದೆ.
-
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Bengaluru: ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು ಮುಂದಾದ ಜಿಬಿಎ -
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications