8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್

ಸಾಮಾನ್ಯವಾಗಿ ಎಂದಿನಂತೆ ಕೆಲಸಕ್ಕೆ ಬರುವ ಉದ್ಯೋಗಿಗೆ, ಆ ದಿನವೇ ತಾನು ಕೆಲಸ ಮಾಡುವ ಕಂಪನಿಯಲ್ಲಿ ತನ್ನ ಕೆಲಸದ ಕೊನೆಯ ದಿನವಾಗುತ್ತದೆ ಎಂದು ಯಾರು ಊಹಿಸಿರಿವುದಿಲ್ಲಾ. ಆದರೆ ಇತ್ತೀಚಿಗೆ ನಡೆದ ಇಂತಹ ಒಂದು ಘಟನೆ ಕಂಪನಿಗಳಲ್ಲಿ ನಡೆಯುವ ವಾಸ್ತವಿಕತೆಯ ಬಹಿರಂಗಪಡಿಸಿದೆ. ಸುಮಾರು ಎಂಟು ವರ್ಷಗಳ ಕಾಲ ಆ ಕಂಪನಿಗೆ ವ್ಯವಸ್ತಾಪಕರಾಗಿ ಕೆಲಸ ಮಾಡಿದ ಉದ್ಯೋಗಿಗೆ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ. ಎಕ್ಸ್‌ (ಹಳೆಯ ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಕಾರ, ಆ ವ್ಯವಸ್ಥಾಪಕರು ಎಂದಿನಂತೆ ಬೆಳಿಗ್ಗೆ ಕಚೇರಿಗೆ ಹಾಜರಾಗಿದ್ದರು. ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಕೆಲವೇ ಗಂಟೆಗಳ ನಂತರ HR ವಿಭಾಗದಿಂದ ಸಭೆಗೆ ಕರೆಯಲಾಗುತ್ತದೆ.

Employee Fired

ಆ ಸಭೆಯಲ್ಲಿ ಅವರಿಗೆ ಹೇಳಿದ ವಿಷಯ ಅಚ್ಚರಿ ಮೂಡಿಸುವಂತಿತ್ತು. ಕಂಪನಿಯು ಅವರ ಹುದ್ದೆಯನ್ನು ವಜಾಗೊಳಿಸಬೇಕು ಎಂಬ ನಿರ್ಧಾರ ಕೈಗೊಂಡಿದೆ, ತಕ್ಷಣದಿಂದಲೆ ಇದು ಜಾರಿಗೆ ಬರುತ್ತದೆ ಎಂದು ತಿಳಿಸಿದರು. ಕಂಪನಿಯು ಯಾವುದೇ ಮುಂಚಿತವಾಗಿ ಸೂಚನೆ ಕೊಡದೆ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಈ ಘಟನೆಯ ಅತ್ಯಂತ ಆಘಾತಕಾರಿ ಅಂಶ ಆಗಿದೆ.

ಎಂಟು ವರ್ಷಗಳ ಕಾಲ ಕಂಪನಿಗೆ ನೀಷ್ಠೆಯಿಂದ ಸೇವ ಸಲ್ಲಿಸಿದ್ದ ಅವರು, ಹಗಲು, ರಾತ್ರಿ ಮತ್ತು ವಾರಂತ್ಯಗಳಲ್ಲಿಯೂ ಕೆಲಸ ಮಾಡಿ ಸಂಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಆದರೂ ಈ ಎಲ್ಲ ಪರಿಶ್ರಮಕ್ಕೆ ಯಾವುದೇ ಮೌಲ್ಯ ನೀಡದೆ ಕ್ಷಣರ್ಧಾದಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಪ್ರತಿಕ್ರಿಯೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ. ಅನೇಕರು ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಭದ್ರತೆ ಸ್ಥಿರವಾಗಿ ಇರುವುದಿಲ್ಲ ಮತ್ತು ಈ ಘಟನೆಯಿಂದ ಖಾಸಗಿ ಉದ್ಯೋಗದ ಮೇಲೆ ನಂಬಿಕೆಯು ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಬ್ಬರು, "ಕಂಪನಿಗಳು ಭಾವನೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಲಾಭ ಮತ್ತು ಅಗತ್ಯವೇ ಮುಖ್ಯ. ನೀವು ಅವರಿಗೆ ಬೇಕಾಗಿರುವವರೆಗೂ ಮಾತ್ರ ನೀವು ಅಲ್ಲಿ ಇರುತ್ತೀರಿ" ಎಂದು ಪ್ರತಿಕ್ರಿಯಿಸಿದ್ದಾರೆ.

ತಜ್ಞರ ಅಭಿಪ್ರಾಯದಂತೆ, ಉದ್ಯೋಗಿಗಳು ತಮ್ಮ ವೃತ್ತಿ ಯೋಜನೆಗಳನ್ನು ಜಾಗರೂಕತೆಯಿಂದ ರೂಪಿಸಬೇಕು. ಯಾವುದೇ ಸಮಯದಲ್ಲಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ, ಸಿದ್ಧತೆಯಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಮಾನಸಿಕ ಆರೋಗ್ಯ ತಜ್ಞರು ಸಹ ಹಠಾತ್ ಉದ್ಯೋಗ ವಜಾ ಆದ ನಂತರ ಒತ್ತಡ, ಆತಂಕ ಹಾಗೂ ಖಿನ್ನತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ಉದ್ಯೋಗಿಗಳಿಗೆ ಸಲಹೆಗಳು:

ನೀವು ನಿಮಗೆ ಆದ್ಯತೆ: ಕಂಪನಿಗಳು ವ್ಯವಹಾರ ಸಂಸ್ಥೆಗಳು, ಕುಟುಂಬಗಳಲ್ಲ. ನಿಮ್ಮ ವೃತ್ತಿ ಮತ್ತು ಯೋಗಕ್ಷೇಮವನ್ನು ಮೊದಲಿಗೆ ಗಮನಿಸಿ.

ಮಾನಸಿಕವಾಗಿ ಸಿದ್ಧತೆಯಿಂದ ಇರಬೇಕು: ಯಾವಾಗಲೂ ನಿಮ್ಮ ಸಿವಿಯನ್ನು ನವೀಕರಿಸಿಕೊಂಡು ಇರಬೇಕು ಮತ್ತು ಹೊಸ ಅವಕಾಶಗಳ ಬಗ್ಗೆ ಕಣ್ಣಿಟ್ಟಿರಬೇಕು.

ನಮ್ಮ ನೆಟ್‌ವರ್ಕ್: ವೃತ್ತಿಪರ ಸಂಪರ್ಕಗಳನ್ನು ಬೆಳೆಸಿಕೊಳ್ಳುಬೇಕು ಇದು ಭವಿಷ್ಯದಲ್ಲಿ ಸಹಾಯ ಮಾಡುತ್ತದೆ.

ಆರ್ಥಿಕ ಭದ್ರತೆ: ತುರ್ತು ಪರಿಸ್ಥಿತಿಗೆ ಹಣವನ್ನು ಉಳಿತಾಯ ಮಾಡಿಕೊಂಡಿರುವುದು ಒಳ್ಳೆಯದು.

ಈ ಘಟನೆ ಕಾರ್ಪೊರೇಟ್ ಜಗತ್ತಿನ ನಿಷ್ಠೆ ಮತ್ತು ಉದ್ಯೋಗ ಭದ್ರತೆ ಬಗ್ಗೆ ಮತ್ತೆ ಚಿಂತನೆ ಮಾಡುವ ಹಾಗೆ ಮಾಡಿದೆ. ಉದ್ಯೋಗಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಜಾಗರೂಕರಾಗಬೇಕು ಮತ್ತು ಮಾನಸಿಕವಾಗಿ ಸಿದ್ಧರಾಗಿರುವುದು ಅವಶ್ಯಕವಾಗಿದೆ. ಈ ಘಟನೆ ಇಂದಿನ ಕಾರ್ಪೊರೇಟ್ ವಾತಾವರಣದಲ್ಲಿ ನಿಷ್ಠೆಗಿಂತ ವ್ಯವಹಾರ ಪ್ರಾಮುಖ್ಯತೆಯನ್ನು ಮತ್ತೆ ನೆನಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+