Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು

Bengaluru Rain: ಬೆಂಗಳೂರಿನ ಸಣ್ಣ ಸಣ್ಣ ವಿಚಾರವೂ ಸಹ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುವುದು ಇದೆ. ಇದೀಗ ಬೆಂಗಳೂರಿನಲ್ಲಿ ಅನಿರೀಕ್ಷಿತ ವಿದ್ಯುತ್ ಕಡಿತ ವಿಚಾರವು ಚರ್ಚೆಗೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣವು ಹೆಚ್ಚಳವಾಗುತ್ತಿತ್ತು. ಈಚೆಗೆ ಮಳೆಯಾಗಿದ್ದು ವಾತಾವರಣವು ತುಸು ತಂಪಾಗಿದೆ.

ಭಾನುವಾರ ನಗರದಾದ್ಯಂತ ಮಿಂಚು ಗುಡುಗು ಸಹಿತ ಮಳೆಯಾಗಿದೆ. ಬೆಂಗಳೂರಿನ ತಾಪಮಾನವು ತುಸು ಇಳಿಕೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಸಾಧಾರಣ ಮಳೆಗೂ ಸಹ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ನಾವು ಈಗ ಎಐ ಯುಗದಲ್ಲಿ ಇದ್ದೇವೆ ಆದರೂ ಬೆಂಗಳೂರಿನಲ್ಲಿ ಸಣ್ಣ ಮಳೆಗೂ ಈ ರೀತಿಯ ಸಮಸ್ಯೆಗಳು ಆಗುತ್ತಿರುವುದು ಹೇಗೆ ಎಂದು ಡಾಕ್ಟರ್‌ವೊಬ್ಬರು ಪ್ರಶ್ನೆ ಮಾಡಿದ್ದಾರೆ.

Bengaluru Rain

ಬೆಂಗಳೂರಿನ ಡಾಕ್ಟರ್ ದೀಪಕ್ ಕೃಷ್ಣಮೂರ್ತಿ ಅವರು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಬೆಂಗಳೂರಿನಲ್ಲಿ ಒಂದೇ ಒಂದು ತಾಸು ಮಳೆ ಬಂದರೂ ಸಹ ಹೇಗೆಲ್ಲ ಸಮಸ್ಯೆ ಆಗುತ್ತದೆ ಎನ್ನುವ ಬಗ್ಗೆ ಬರೆದುಕೊಂಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಒಂದು ತಾಸು ಮಳೆ ಬಂದರೂ ಸಹ ಕನಿಷ್ಠ 20 ನಿಮಿಷ ವಿದ್ಯುತ್ ಕಡಿತವಾಗುವ ಬಗ್ಗೆ ಅವರು ಬರೆದುಕೊಂಡಿದ್ದಾರೆ. ನಾವು AI ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಮೂಲಭೂತ ತಂತ್ರಜ್ಞಾನ ಮತ್ತು ವ್ಯವಸ್ಥೆಗಳು ಪ್ರಾಚೀನಕಾಲದ್ದೇ ಆಗಿದೆ. ಅಲ್ಲದೆ ವಿಶ್ವಾಸಾರ್ಹವಲ್ಲದ ವ್ಯವಸ್ಥೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೀಪಕ್ ಕೃಷ್ಣಮೂರ್ತಿ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದಿರುವ ಈ ಪೋಸ್ಟ್‌ ಇದೀಗ ಭಾರೀ ವೈರಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಪರ - ವಿರೋಧ ಅಭಿಪ್ರಾಯಗಳು ಸಹ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಜನರು AI ನಂತಹ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಮಾತನಾಡುವಾಗ, ಮೂಲಭೂತ ಮೂಲಸೌಕರ್ಯ ಮತ್ತು ವಿದ್ಯುತ್ ಪೂರೈಕೆಯಂತಹ ವ್ಯವಸ್ಥೆಗಳು ಹಳೆಯದಾಗಿದೆ ಎಂದಿದ್ದಾರೆ.

Bengaluru Rain ನೆಟ್ಟಿಗರು ಹೇಳಿದ್ದೇನು ?

ಇನ್ನು ವೈದ್ಯರ ಈ ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಜು ಎನ್ನುವವರು ನಾವು ಇರುವ ಪ್ರದೇಶದಲ್ಲಿ ಇನ್ನೂ ಮಳೆ ಬರುತ್ತಿದೆ ಆದರೆ ಇದುವರೆಗೆ ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸಿಲ್ಲ ಎಂದಿದ್ದಾರೆ. ಕನ್ನಡಿಗರು ಅಭಿವೃದ್ಧಿಗಿಂತ ಉಚಿತ ಕೊಡುಗೆಗಳನ್ನು ಆರಿಸಿಕೊಂಡಿದ್ದಾರೆ, ಮಳೆ ಉಚಿತ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಈ ರಾಜಕೀಯ ಪ್ರೇರಿತರ ಈ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡುರುವ ದೀಪಕ್ ಕೃಷ್ಣಮೂರ್ತಿ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅದು ಹಾಗೆಯೇ ಇತ್ತು. ಆದ್ದರಿಂದ ಅದು ಅದರ ಬಗ್ಗೆ ಈ ಚರ್ಚೆ ಅಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರವಲ್ಲ, ಭಾರತದ ಎಲ್ಲೆಡೆ ಇದು ಸಂಭವಿಸುತ್ತದೆ ಏಕೆಂದರೆ ತಂತಿಗಳು ಸಡಿಲವಾಗಿ ನೇತಾಡುತ್ತವೆ ಮತ್ತು ಗಾಳಿ ಬೀಸಿದಾಗ ಯಾವಾಗಲೂ ಶಾರ್ಟ್ ಸರ್ಕ್ಯೂಟ್ ಭಯವಿರುತ್ತದೆ. ಹೀಗಾಗಿ ಭೂಮಿಯ ಆಳದಲ್ಲಿ ವೈರಿಂಗ್ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+