Bengaluru Viral Video: ಕಂಪನಿ ಉದ್ಯೋಗಿಗೆ ಸರ್ಪ್ರೈಸ್ ಕೊಟ್ಟ ಬಾಸ್: ನಮಗೂ ಈ ತರ ಬಾಸ್ ಬೇಕು ಎಂದ ನೆಟ್ಟಿಗರು
ಬೆಂಗಳೂರು: ಕಂಪನಿಗಳ ಬಾಸ್‌ಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿ. ತಿಳಿ ಹಾಸ್ಯ ಮಾಡುವ, ಉದ್ಯೋಗಿಗಳನ್ನು ಅರ್ಥ ಮಾಡಿಕೊಳ್ಳುವ ಬಾಸ್‌ಗಳಾಗಲಿ, ಮ್ಯಾನೇಜರ್‌ಗಳು ಸಿಗುವುದು ವಿರಳ ಎಂದೇ ಹೇಳಬಹುದು. ಆದರೆ ಬೆಂಗಳೂರಿನಲ್ಲಿ ಬಾಸ್‌ವೊಬ್ಬರು ಮಾಡಿರುವ ಸಣ್ಣ ಕೆಲಸ ಆ ಕಂಪನಿಗಳ ಉದ್ಯೋಗಿಗಳನ್ನು ಖುಷಿಯಾಗಿಸಿದೆ. ಅಷ್ಟೇ ಅಲ್ಲ ಇದ್ದರೆ ಈ ರೀತಿ ಬಾಸ್ ಇರ್ಬೇಕು ಅಂತ ಜನ ಹೇಳ್ತಿದ್ದಾರೆ. ಇಷ್ಟಕ್ಕೂ ಈ ಬಾಸ್ ಯಾರು, ಕಂಪನಿಯ ಉದ್ಯೋಗಿಗಳಿಗೆ ಅವರು ಕೊಟ್ಟ ಗುಡ್‌ನ್ಯೂಸ್ ಏನು, ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವುದು ಇಲ್ಲಿದೆ.
ಬೆಂಗಳೂರಿನ ಕಂಪನಿಯೊಂದರ ಬಾಸ್ ಆ ಕಂಪನಿಯ ಉದ್ಯೋಗಿಗಳಿಗೆ ಕೊಟ್ಟಿರುವ ಸಣ್ಣ ಸರ್ಪ್ರೈಸ್ ಖುಷಿಗೆ ಕಾರಣವಾಗಿದೆ. ಕೇವಲ ಆ ಕಂಪನಿಯ ಉದ್ಯೋಗಿಗಳು ಮಾತ್ರವಲ್ಲದೇ ವಿವಿಧ ಕಾರ್ಪೊರೇಟ್ ಉದ್ಯೋಗಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ಪೊರೇಟ್‌ವೊಂದರ ಬಾಸ್ ಅವರು ಉದ್ಯೋಗಿಯೊಬ್ಬರಿಗೆ ಕೇಕ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಉದ್ಯೋಗಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2,000 ಫಾಲೋವರ್ಸ್ ದಾಟಿರುವುದನ್ನು ಸಂಭ್ರಮಿಸಲು ಈ ರೀತಿ ಮಾಡಿದ್ದಾರೆ. ಇದು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಉದ್ಯೋಗಿ ಹಂಚಿಕೊಂಡಿರುವ ಈ ವಿಡಿಯೋ ಕೆಲಸದ ಸ್ಥಳದ ವೈಬ್ ಹಾಗೂ ಪಾಸಿಟಿವಿಟಿಗೆ ಬೆಸ್ಟ್ ಅಂತ ನೆಟ್ಟಿಗರು ಹೇಳಿದ್ದಾರೆ. dentist_in_corporate_ (Aiswarya) ಎನ್ನುವ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ಮತ್ತು ಸಹೋದ್ಯೋಗಿಗಳು ಕೆಲಸದಲ್ಲಿ ವೈಯಕ್ತಿಕ ಮೈಲಿಗಲ್ಲನ್ನು ಆಚರಿಸಲು ಹೇಗೆ ಮುಂದಾದರು ಎನ್ನುವ ವಿಡಿಯೋ ಆನ್‌ಲೈನ್‌ನಲ್ಲಿ ನೆಟ್ಟಿಗರ ಮನಸ್ಸು ಗೆದ್ದಿದೆ. ಐಶ್ವರ್ಯ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಈ ಸಣ್ಣ ವಿಡಿಯೋಗೆ ಮೆಚ್ಚುಗೆಯ ಸುರಿಮಳೆ ಬಂದಿದೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2,000 ಫಾಲೋವರ್ಸ್ ದಾಟಿದ ನಂತರ ಅವರ ಕಂಪನಿಯು ಕೇಕ್ ನೀಡಿ ಸರ್ಪ್ರೈಸ್ ಕೊಟ್ಟಿದೆ.
ವೈರಲ್ ವಿಡಿಯೋದಲ್ಲಿ ಏನಿದೆ ?
ಇನ್ನು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಂಪನಿಯೊಂದರ ಮೀಟಿಂಗ್ ಹಾಲ್‌ಗೆ ಐಶ್ವರ್ಯ ಅವರು ಎಂಟ್ರಿ ಆಗುತ್ತಾರೆ. ಅವರು ಬರುವುದನ್ನು ವಿಡಿಯೋ ಮಾಡುತ್ತಿರುವುದನ್ನು ನೋಡಿ ಅವರು ಆರ್ಶ್ಚಯ ವ್ಯಕ್ತಪಡಿಸುತ್ತಾರೆ. ಒಳಗೆ ಅವರ ಬಾಸ್ ಮತ್ತು ತಂಡದ ಸದಸ್ಯರು ಕುಳಿತುಕೊಂಡಿದ್ದು. ಮೇಜಿನ ಮೇಲೆ ಕೇಕ್ ಇರಿಸಲಾಗಿದೆ. ಅದರ ಬೋರ್ಡ್ ಮೇಲೆ "2k ಫಾಲೋವರ್ಸ್‌ಗೆ ಸಂತೋಷ. ಅಭಿನಂದನೆಗಳು ಐಶು." ಎಂದು ಬರೆಯಲಾಗಿದೆ. ಈ ವೀಡಿಯೊ Instagram ನಲ್ಲಿ 1,15,000 ಕ್ಕೂ ಹೆಚ್ಚು ವೀವ್ಸ್ ಕಂಡಿದ್ದು, ಜನರಿಂದ ಮೆಚ್ಚುಗೆಗೆ ಕಾರಣವಾಗಿದೆ. ಇದು ಸಣ್ಣ ಸಂಭ್ರಮಾಚರಣೆಯಾದರೂ, ಕಂಪನಿಯಲ್ಲಿ ಈ ರೀತಿಯ ವಾತಾವರಣವಿದ್ದರೆ, ಕಿರಿಕಿರಿ ಇರಲ್ಲ. ಎಂಜಾಯ್ ಮಾಡಿಕೊಂಡು ಕೆಲಸ ಮಾಡಬಹುದು ಅಂತ ನೆಟ್ಟಿಗರು ಹೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಇನ್ನು ಈ ವೈರಲ್ ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇನ್ನೂ ಕೆಲವರು ನೀವೇ ಅದೃಷ್ಟವಂತರು ಕಣ್ರೀ ನಮಗೆಲ್ಲಾ ಈ ರೀತಿ ಬಾಸ್ ಸಿಗಲಿಲ್ಲ ಎಂದಿದ್ದಾರೆ. ಇನ್ನೊಬ್ಬರು ಈ ವಿಡಿಯೋವನ್ನು ನನ್ನ ಕಂಪನಿ ಅವರು ನೋಡಿದರೆ ಇದು AI ವಿಡಿಯೋ ಅಂತ ಹೇಳುತ್ತಾರೆ ಎಂದು ಕಾಮಿಡಿ ಮಾಡಿದ್ದಾರೆ.












Click it and Unblock the Notifications