Bengaluru Vande Bharat: ಬೆಂಗಳೂರು - ಮುಂಬೈ ಹೊಸ ವಂದೇ ಭಾರತ್ ಸ್ಲೀಪರ್ ರೈಲು: ಕರ್ನಾಟಕದ ಈ ಭಾಗದವರಿಗೆ ಗುಡ್‌ನ್ಯೂಸ್

Bengaluru Vande Bharat: ಬೆಂಗಳೂರು ಹಾಗೂ ಮುಂಬೈ ನಗರಗಳ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ ಬಂದಿದೆ. ಬೆಂಗಳೂರು ಹಾಗೂ ಮುಂಬೈ ಮಹಾನಗರಗಳ ನಡುವೆ ಹೆಚ್ಚು ಜನ ಪ್ರಯಾಣ ಮಾಡುವುದರಿಂದ ಹಾಗೂ ಎರಡೂ ನಗರಗಳ ನಡುವೆ ಸಂಪರ್ಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಈ ಎರಡೂ ನಗರಗಳ ನಡುವೆ ಹೊಸ ವಂದೇ ಭಾರತ್ ರೈಲು ಪರಿಚಯಿಸಲಾಗುತ್ತಿದೆ. ಇದೀಗ ಬಹುನಿರೀಕ್ಷಿತ ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಪುಣೆ-ಸೋಲಾಪುರ ಮಾರ್ಗದ ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂಬೈ - ಬೆಂಗಳೂರು ವಂದೇ ಭಾರತ್ ಸ್ಲೀಪರ್‌ಗಾಗಿ ಪುಣೆ-ಸೋಲಾಪುರ ಮಾರ್ಗದ ಜೋಡಣೆ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಬೇಡಿಕೆಯ ಆಧಾರದ ಮೇಲೆ ಈ ಬದಲಾವಣೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ಬೆಂಗಳೂರು ಹಾಗೂ ಮುಂಬೈ ನಗರಗಳ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಪ್ರಾರಂಭಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಹಾಗೂ ಮುಂಬೈ ನಗರಗಳ ನಡುವಿನ ಹೊಸ ವಂದೇ ಭಾರತ್ ಸ್ಲೀಪರ್ ರೈಲನ್ನು ಪ್ರಯಾಣಿಕರ ಬೇಡಿಕೆ ಮತ್ತು ರೈಲು ಮಾರ್ಗ ದಕ್ಷತೆಯನ್ನು ನಿರ್ಣಯಿಸಿದ ನಂತರ ಜೋಡಣೆಯನ್ನು ಅಂತಿಮಗೊಳಿಸಲಾಗಿದೆ. ಇನ್ನು ಮೀರಜ್ ಮತ್ತು ಹುಬ್ಬಳ್ಳಿ ಮೂಲಕ ರೈಲು ಸಂಚಾರ ಸೇವೆ ಪ್ರಾರಂಭವಾಗಲಿದೆ ಎನ್ನುವ ಚರ್ಚೆಗಳು ನಡೆದಿದದ್ದವು. ಇದು ಪುಣೆ ಮತ್ತು ಸೋಲಾಪುರದ ಪ್ರಯಾಣಿಕರಲ್ಲಿ ಹೈ-ಸ್ಪೀಡ್ ಸ್ಲೀಪರ್ ಸೇವೆಯ ನೇರ ಸಂಪರ್ಕವನ್ನು ಕಳೆದುಕೊಳ್ಳುವ ಭಯವನ್ನು ಸೃಷ್ಟಿ ಮಾಡಿತ್ತು. ಆದರೆ, ಹೊಸ ಮಾರ್ಗದಲ್ಲಿನ ರೈಲು ಸಂಚಾರದಿಂದ ಹುಬ್ಬಳ್ಳಿ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಲೆಕ್ಕಾಚಾರಗಳು ಬದಲಾಗಿವೆ.

Bengaluru Vande Bharat

ಏತನ್ಮಧ್ಯೆ ಪುಣೆ-ಸೋಲಾಪುರ ಕಾರಿಡಾರ್ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಪ್ರೀಮಿಯಂ, ದೀರ್ಘ-ದೂರ ಪ್ರಯಾಣಕ್ಕೆ ಬಲವಾದ ಬೇಡಿಕೆಯನ್ನು ಪರಿಗಣಿಸಿ ಪರಿಚಯಿಸಲಾಗಿದೆ. ಅಂತಿಮಗೊಳಿಸಿದ ಮಾರ್ಗವು ಮುಂಬೈ, ಪುಣೆ, ಸೋಲಾಪುರ, ಕಲಬುರಗಿ ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನ ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಕಲಬುರಗಿಯ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸುವುದಕ್ಕೆ ಭಾರೀ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಈ ಭಾಗದ ಜನರಿಗೂ ಬೆಂಗಳೂರು ಹಾಗೂ ಮುಂಬೈ ನಗರಗಳ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನಿಂದ ಅನುಕೂಲವಾಗಲಿದೆ.

Vande Bharat: ಬೆಂಗಳೂರು ವಂದೇ ಭಾರತ್, ಶತಾಬ್ಧಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು
Vande Bharat: ಬೆಂಗಳೂರು ವಂದೇ ಭಾರತ್, ಶತಾಬ್ಧಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು

ರೈಲ್ವೆ ಇಲಾಖೆಯು ಬೆಂಗಳೂರು ಹಾಗೂ ಮುಂಬೈ ನಗರಗಳ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಸಂಬಂಧಿಸಿದಂತೆ ಪ್ರಮುಖ ಕಾರ್ಯಾಚರಣೆ ಮತ್ತು ಟಿಕೆಟ್ ನಿಯಮಗಳನ್ನು ಅಂತಿಮಗೊಳಿಸಿದೆ. ಸಾಂಪ್ರದಾಯಿಕ ದೂರದ ರೈಲುಗಳಿಗಿಂತ ಭಿನ್ನವಾಗಿ, RAC (ರದ್ದತಿಯ ವಿರುದ್ಧ ಕಾಯ್ದಿರಿಸುವಿಕೆ) ಅಥವಾ ಕಾಯುವ ಪಟ್ಟಿಯ ಟಿಕೆಟ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹತ್ತಲು ಅವಕಾಶವಿರುವುದಿಲ್ಲ. ದೃಢೀಕೃತ ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಎನ್ನುವಂತಹ ಮಹತ್ವದ ಬದಲಾವಣೆಗಳನ್ನು ಬೆಂಗಳೂರು ಹಾಗೂ ಮುಂಬೈ ನಗರಗಳ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯಲ್ಲಿ ಪರಿಚಯಿಸಲಾಗಿದೆ.

ಇನ್ನೊಂದು ಪ್ರಮುಖ ಬದಲಾವಣೆಯಂತೆ, ಪ್ರಯಾಣದ ದೂರ ಕಡಿಮೆಯಿದ್ದರೂ ಪ್ರಯಾಣಿಕರು ಕನಿಷ್ಠ 400 ಕಿಲೋಮೀಟರ್‌ ಪ್ರಯಾಣದ ದರವನ್ನು ಪಾವತಿಸಬೇಕಾಗುತ್ತದೆ. ಈ ಸೇವೆಯನ್ನು ಪ್ರೀಮಿಯಂ ಮಟ್ಟದಲ್ಲಿ ಉಳಿಸಿ, ನಿರ್ವಹಣಾ ವೆಚ್ಚವನ್ನು ಸಮತೋಲನದಲ್ಲಿಡಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.

Bullet Train: ದೇಶದ ಮೊದಲ 'ಬುಲೆಟ್ ಟ್ರೈನ್' ಫಸ್ಟ್ ಲುಕ್ ಇದಲ್ಲ: ರೈಲ್ವೆ ಇಲಾಖೆ
Bullet Train: ದೇಶದ ಮೊದಲ 'ಬುಲೆಟ್ ಟ್ರೈನ್' ಫಸ್ಟ್ ಲುಕ್ ಇದಲ್ಲ: ರೈಲ್ವೆ ಇಲಾಖೆ

ಈ ಹೊಸ ರೈಲಿನ ಟಿಕೆಟ್ ದರಗಳು ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗಿಂತ ಸುಮಾರು 20% ಹೆಚ್ಚು ಇರಬಹುದು. ಜಿಎಸ್‌ಟಿ ಹೊರತುಪಡಿಸಿ, ಪ್ರತಿ ಕಿಲೋಮೀಟರ್‌ಗೆ ಪ್ರತ್ಯೇಕ ದರ ನಿಗದಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+