ಬೆಂಗಳೂರು ನಗರದಲ್ಲಿ ಇದುವರೆಗೆ 1 ಕೋಟಿ ಮಂದಿಗೆ ಕೊರೊನಾ ಲಸಿಕೆ

ಬೆಂಗಳೂರು, ಆಗಸ್ಟ್ 26: ಬೆಂಗಳೂರು ನಗರದಲ್ಲಿ ಇದುವರೆಗೆ 1 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇವತ್ತಿಗೆ 1 ಕೋಟಿ ಮಂದಿಗೆ ಲಸಿಕೆ ಹಾಕಿಸುವಲ್ಲಿ ಬೆಂಗಳೂರು ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಯಶಸ್ವಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,00,34,598 ಮಂದಿ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರು 24,43,914 ಮಂದಿ ಹಾಗೂ ಒಂದು ಡೋಸ್ ಮಾತ್ರ ಪಡೆದವರ ಸಂಖ್ಯೆ 75,90,684.

Bengaluru Urban Touches One Crore Covid Jabs

ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳು, 198 ವಾರ್ಡ್‌ಗಳು, 6 ಪುರಸಭೆಗಳು, 1 ನಗರಸಭೆ, 87 ಗ್ರಾಮ ಪಂಚಾಯಿತಿಗಳ 1038 ಗ್ರಾಮಗಳಲ್ಲಿ ಈ ಲಸಿಕೆಗಳನ್ನು ನೀಡಲಾಗಿದೆ.

ದಿವ್ಯಾಂಗರು ಸೇರಿದಂತೆ ಕೆಲವು ವಿಶೇಷ ವರ್ಗಗಳಿಗೆ ಲಸಿಕೆ ಪಡೆಯಲು ಉಚಿತ ವಾಹನ ಸೌಲಭ್ಯ ಒದಗಿಸಲಾಗಿದೆ. ಉದ್ದಿಮೆಗಳಿರುವಲ್ಲಿಗೆ ತೆರಳಿ ಲಸಿಕೆ ವಿತರಣೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

2021ರ ಜನವರಿ 16ರಂದು ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ನಗರದಲ್ಲೂ ಲಸಿಕಾ ಅಭಿಯಾನ ಆರಂಭಗೊಂಡಿತ್ತು. ಕೋವಿಡ್ ನಿಯಂತ್ರಣ ಕಾರ್ಯದ ಮುಂಚೂಣಿಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯ ಫೆ.8ರಿಂದ ಆರಂಭವಾಗಿತ್ತು.

ಸರ್ಕಾರಿ ನೌಕರರು ಈ ಹಂತದಲ್ಲಿ ಲಸಿಕೆ ಪಡೆದಿದ್ದರು, 45 ವರ್ಷ ಮೇಲ್ಪಟ್ಟವರಿಗೆ ಮಾ.1ರಿಂದ ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಮೇ 10 ರಿಂದ ಲಸಿಕೆ ನೀಡಲಾಗಿದೆ.

ಕರ್ನಾಟಕದಲ್ಲಿ ಬುಧವಾರ ಒಟ್ಟು 1224 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 22 ಜನರು ಸಾವನ್ನಪ್ಪಿದ್ದಾರೆ. ಒಟ್ಟು 1668 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 0.62, ಸೋಂಕಿತರ ಸಾವಿನ ಪ್ರಮಾಣ ಶೇ 1.79 ಇದೆ. ಕರ್ನಾಟಕದಲ್ಲಿ ಈವರೆಗೆ 29,42,250 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28,85,700 ಮಂದಿ ಚೇತರಿಸಿಕೊಂಡಿದ್ದಾರೆ. ಮೃತರ ಒಟ್ಟು ಸಂಖ್ಯೆ 37,206. ರಾಜ್ಯದಲ್ಲಿ ಪ್ರಸ್ತುತ 19,318 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ಬೆಂಗಳೂರು ನಗರದಲ್ಲಿ ಬುಧವಾರ 309 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ. 657 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 12,35,910 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,12,705 ಮಂದಿ ಚೇತರಿಸಿಕೊಂಡಿದ್ದಾರೆ. 7231 ಮಂದಿಯಲ್ಲಿ ಸೋಂಕು ಸಕ್ರಿಯವಾಗಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?: ಬೆಂಗಳೂರು ನಗರ 309, ದಕ್ಷಿಣ ಕನ್ನಡ 217, ಉಡುಪಿ 130, ಮೈಸೂರು 102, ಹಾಸನ 95, ತುಮಕೂರು 52, ಉತ್ತರ ಕನ್ನಡ 48, ಕೊಡಗು 41, ಶಿವಮೊಗ್ಗ 42, ಮಂಡ್ಯ 38, ಚಿಕ್ಕಮಗಳೂರು 28, ಬೆಳಗಾವಿ 19, ಕೋಲಾರ 17, ಬೆಂಗಳೂರು ಗ್ರಾಮಾಂತರ 13, ಧಾರವಾಡ 11, ಚಿತ್ರದುರ್ಗ, ಕಲಬುರಗಿ 10, ಯಾದಗಿರಿ 8, ಚಾಮರಾನಗರ 6, ಬಳ್ಳಾರಿ, ಹಾವೇರಿ, ವಿಜಯಪುರ, ದಾವಣಗೆರೆ 3, ಚಿಕ್ಕಬಳ್ಳಾಪುರ, ಕೊಪ್ಪಳ, ಬಾಗಲಕೋಟೆ 2, ರಾಯಚೂರು, ರಾಮನಗರ 1.

ಬಿಬಿಎಂಪಿ ವ್ಯಾಪ್ತಿಯಲ್ಲಿ:
ಮೊದಲ ಡೋಸ್: 65,50,169
ಎರಡನೇ ಡೋಸ್: 21,80,183
ಒಟ್ಟು:87,30,352

ಬೆಂಗಳೂರು ಜಿಲ್ಲೆ:
ಮೊದಲ ಡೋಸ್: 10,40,515
ಎರಡನೇ ಡೋಸ್:2.63,731
ಒಟ್ಟು:13,04,246
-1,00,34,598 ಲಸಿಕೆ ಪೂರ್ಣ

ಲಸಿಕೆ ಪಡೆದಿರುವ ವರ್ಗ(ಆರೋಗ್ಯ ಕಾರ್ಯಕರ್ತರು)
ಮೊದಲ ಡೋಸ್:250001
ಎರಡನೇ ಡೋಸ್: 163414
ಒಟ್ಟು-413415

ಮುಂಚೂಣಿ ಕಾರ್ಯಕರ್ತರು
ಮೊದಲ ಡೋಸ್-413400
ಎರಡನೇ ಡೋಸ್-1402884
ಒಟ್ಟು:3978341

18ರಿಂದ 44 ವರ್ಷದವರು
ಮೊದಲ ಡೋಸ್: 4351826
ಎರಡನೇ ಡೋಸ್: 711825
ಒಟ್ಟು-5063651

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+