ಕರ್ನಾಟಕ ಬಂದ್: ಬೆಂಗಳೂರು ವಿವಿ ಪರೀಕ್ಷೆ ಮುಂದಕ್ಕೆ
ಬೆಂಗಳೂರು, ಜನವರಿ 25 : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜ.25 ರಂದು ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪರೀಕ್ಷೆ ಯಾವಾಗ: ಮೊದಲ ವರ್ಷದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ ಪರೀಕ್ಷೆಗಳು ಫೆ.8 ರಂದು ಬೆಳಗ್ಗೆ 9.30 ರಿಂದ12.30 ರವರೆಗೆ ನಡೆಯಲಿದೆ. ಮೂರನೇ ವರ್ಷದ ಬಿಎ, ಬಿಎಸ್ಸಿ ಪರೀಕ್ಷೆಗಳು ಫೆ.5 ರಂದು ಮಧ್ಯಾಹ್ನ 2 ರಿಂದ5 ಗಂಟೆಯವರೆಗೆ ನಡೆಯಲಿದೆ.
ಮೂರನೇ ವರ್ಷದ ಬಿಕಾಂ, ಬಿಬಿಎಂ ಪರೀಕ್ಷೆಗಳು ಜನವರಿ31 ರಂದು ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ, ಎರಡನೇ ವರ್ಷದ ಎಂಕಾಂ ಪರೀಕ್ಷೆಗಳು ಫೆ.8ರಂದು ಮಧ್ಯಾಹ್ನ2.30ರಿಂದ 5.30 ರವರೆಗೆ ನಡೆಯಲಿವೆ.

ಎರಡನೇ ವರ್ಷದ ಎಂಎ, ಎಂಎಸ್ಸಿ ಪರೀಕ್ಷೆಗಳು ಫೆ.2 ರಂದು ಮಧ್ಯಾಹ್ನ 2.30ರಿಂದ 5.30 ರವರೆಗೆ, ಪಿಜಿ ಡಿಬಿಎ, ಡಿಆರ್ ಎಂ, ಡಿಎಚ್ ಎ ಪರೀಕ್ಷೆಗಳು ಜನವರಿ 31ರಂದು ಮಧ್ಯಾಹ್ನ 2.30 ರಿಂದ 5.30 ರವರೆಗೆ ನಡೆಯಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications