Tunnel Road: ಲಾಲ್‌ಬಾಗ್‌ ಉಳಿಸಲು ಸರ್ಕಾರ ನಿರ್ಧಾರ: ಟ್ರಾಫಿಕ್ ಮುಕ್ತಿಗೆ ಸಲಹೆ ಕೊಟ್ಟ ವಿಪಕ್ಷ ನಾಯಕ

ಬೆಂಗಳೂರು: ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರಾರ್ಥವಾಗಿ ರಾಜ್ಯ ಸರ್ಕಾರ 17 ಕಿಮೀ ಉದ್ದದ ಸುರಂಗ ರಸ್ತೆ ಯೋಜನೆ ಕೈಗೆತ್ತಿಕೊಂಡಿದೆ. ಈ ರಸ್ತೆಗೆ ಲಾಲ್‌ ಬಾಗ್‌ ಭೂಮಿ ಬಳಕೆ ಆಗುವುದಕ್ಕೆ ನಾಗರಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಾರ್ವಜನಿಕ ಸಾರಿಗೆ ಬಳಕೆ ಮಾಡುವುದನ್ನು ಹೆಚ್ಚಿಸಲು ಸರ್ಕಾರಕ್ಕೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಬಿಸ್ಮೈಲ್ ವತಿಯಿಂದ ಸುರಂಗ ರಸ್ತೆ ಯೋಜನೆ ನಿರ್ಮಾಣವಾಗಲಿದೆ. ಈ ಕಂಪನಿ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಮಹತ್ವದ ಸೂಚನೆ ನೀಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸಾರಿಗೆ ಉತ್ತೇಜನ, ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಫೀಡರ್ ಬಸ್ ಕುರಿತು ಮಾತನಾಡಿದ್ದಾರೆ.

Bengaluru Tunnel Road

ತಪ್ಪು ಹೆಜ್ಜೆಯಿಂದ ಹಿಂದೆ ಸರಿದಿದ್ದೀರಿ! ಅಶೋಕ್

ಜನರ ಆಕ್ರೋಶಕ್ಕೆ ಹೆದರಿ ಲಾಲ್‌ಬಾಗ್‌ನಿಂದ ಯು-ಟರ್ನ್ ಹೊಡೆದಿದ್ದೀರಿ, ಈಗ ಇಡೀ ಸುರಂಗ ರಸ್ತೆ ಯೋಜನೆಯನ್ನೇ ಕಸದ ಬುಟ್ಟಿಗೆ ಹಾಕಿ!. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಬೆಂಗಳೂರಿನ ಶ್ವಾಸಕೋಶದಂತಿರುವ ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನದ ಭೂಮಿಯನ್ನು ಕಬಳಿಸುವ ನಿಮ್ಮ ಮೊಂಡುತನವನ್ನ ಕಡೆಗೂ ಕೈಬಿಟ್ಟು ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಬೆದರಿ ತಮ್ಮ ತಪ್ಪು ಹೆಜ್ಜೆ ಹಿಂದೆ ಇಟ್ಟಿರುವುದು ನಿಮ್ಮ ಅನಿವಾರ್ಯತೆಯೇ ಹೊರತು ನಿಮಗಿರುವ ಪರಿಸರ ಕಾಳಜಿಯಲ್ಲ ಅಂತಲೂ ಅವರು ದೂರಿದ್ದಾರೆ.

ಸುರಂಗ ಯೋಜನೆ ಸಂಪೂಣವಾಗಿ ಕೈ ಬಿಡಲು ಆಗ್ರಹ

ಲಾಲ್‌ಬಾಗ್ ಬಲಿಕೊಡುವ ದುಷ್ಟ ಆಲೋಚನೆಯಿಂದ ಸದ್ಯಕ್ಕೆ ಹಿಂದೆ ಸರಿದಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾವಿರಾರು ಕೋಟಿ ಕಮಿಷನ್ ದಂಧೆಯ ಈ ಸುರಂಗ ರಸ್ತೆ (Tunnel Road) ಯೋಜನೆಯನ್ನೇ ಸರ್ಕಾರ ಸಂಪೂರ್ಣವಾಗಿ ಕೈಬಿಡಬೇಕು. ಇದು ನಮ್ಮ ಆಗ್ರಹ.

ಸಾರ್ವಜನಿಕ ಸಾರಿಗೆ ಬಲಪಡಿಸಿ, ಟ್ರಾಫಿಕ್ ತಗ್ಗುತ್ತೆ!

ರಾಜಧಾನಿ ️ಬೆಂಗಳೂರಿಗರಿಗೆ ಬೇಕಿರುವುದು ವೈಜ್ಞಾನಿಕ ಪರಿಹಾರ. ಸುರಂಗ ರಸ್ತೆಯಂತಹ ಕಮಿಷನ್ ಯೋಜನೆಗಳಲ್ಲ ಎಂದು ಕಿಡಿ ಕಾರಿದ್ದಾರೆ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆ ಸರ್ಕಾರದ ಮೊದಲ ಆದ್ಯತೆಯಾಗಬೇಕು. ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಬ್ ಅರ್ಬನ್ ರೈಲು ಯೋಜನೆಯ ಕಡೆ ಗಮನ ಹರಿಸಿ, ನಡೆಯುತ್ತಿರುವ ಮೆಟ್ರೋ ಹೊಸ ಮಾರ್ಗದ ಕಾಮಗಾರಿಗಳಿಗೆ ವೇಗ ನೀಡಿ ಎಂದು ವಿಪಕ್ಷ ನಾಯಕ ಆಗ್ರಹಿಸಿದ್ದಾರೆ.

ಮೂಲೆ ಮೂಲೆಗಳಿಗೆ ಬಸ್ ಸೇವೆ ಸಿಗುವಂತೆ ಮಾಡಿ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸೌಲಭ್ಯ ಹೆಚ್ಚಿಸುವ ಅಗತ್ಯವಿದೆ. ದಿನೇ ದಿನೇ ವಿಸ್ತಾರಗೊಳ್ಳುತ್ತಿರುವ ನಗರದ ಮೂಲೆ ಮೂಲೆಗಳ ಹೊಸ ಬಡಾವಣೆಗಳಿಗೆ ಬಿಎಂಟಿಸಿ ಬಸ್‌ ಸಂಪರ್ಕ ಕಲ್ಪಿಸಬೇಕು. ಅಲ್ಲದೇ ಮೆಟ್ರೋ ಫೀಡರ್ ವ್ಯವಸ್ಥೆ ಬಲಪಡಿಸಿ first-mile last-mile ಸಮಸ್ಯೆಯನ್ನು ಬಗೆಹರಿಸಿದರೆ ದ್ವಿಚಕ್ರ ವಾಹನಗಳ ದಟ್ಟಣೆ ತಾನಾಗಿಯೇ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಸಾಮಾನ್ಯ ಜನರಿಗೆ ನಿತ್ಯ ಸಂಚಾರಕ್ಕೆ ಸುಸಜ್ಜಿತ, ಸುಗಮ ಮತ್ತು ಕೈಗೆಟುವ ದರದಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು, ರಿಯಲ್ ಎಸ್ಟೇಟ್ ಹಾಗೂ ಕಮಿಷನ್ ಲೂಟಿಗಾಗಿ ಸಾವಿರಾರು ಕೋಟಿಗಟ್ಟಲೆ ಹಣವನ್ನು ಸುರಂಗ ತೋಡಲು ಸುರಿಯುವುದು ಅತ್ಯಂತ ಬೇಜವಾಬ್ದಾರಿ ಮತ್ತು ಅಕ್ಷಮ್ಯ ನಡೆ ಎಂದು ಸುರಂಗ ಯೋಜನೆಯನ್ನು ಖಂಡಿಸಿದರು.

ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿ. ಆಮೇಲೆ ಕೋಟಿ ಕೋಟಿ ವೆಚ್ಚದ ಸುರಂಗ ರಸ್ತೆ ಬಗ್ಗೆ ಯೋಚನೆ ಮಾಡಿ! ನಿಮ್ಮ ಕಮಿಷನ್ ಆಸೆಗೆ ಬೆಂಗಳೂರಿನ ಪರಿಸರ ಮತ್ತು ಸಾರ್ವಜನಿಕರ ತೆರಿಗೆ ಹಣವನ್ನ ಕೊಳ್ಳೆಯೊಡೆಯಲು ಬಿಜೆಪಿ ಎಂದಿಗೂ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಲಾಲ್ ಬಾಗ್ ಸ್ಥಳ ಬಿಟ್ಟು ಹೊಸ ಸ್ಥಳ ಗುರುತಿಸಿ: ಡಿಕೆಶಿ ಸೂಚನೆ

ಲಾಲಾ ಬಾಗ್ ಭೂಮಿ ಬಳಸಿ ಸುರಂಗ ರಸ್ತೆ ನಿರ್ಮಾಣಕ್ಕೆ ವಿರೋಧ ಕೇಳಿ ಬಂದ ಬೆನ್ನಲ್ಲೆ ಇತ್ತೀಚೆಗೆ ಜಿಬಿಎ ಸಭೆಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಉದ್ಯಾನದ ಸ್ಥಳದಲ್ಲಿ ಟನಲ್ ರಸ್ತೆ ಬೇಡ. ಅದಕ್ಕೆ ಪರ್ಯಾಯವಾಗಿ ಬೇರೆ ಕಡೆ ಸ್ಥಳ ಹುಡುಕಿ, ಇದಕ್ಕೆ ಸಂಬಂಧಿಸಿದಂತೆ ನೂತನ ವಿಸೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕೆಂದು ಬಿ-ಸ್ಮೈಲ್ ಮತ್ತು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಪರಿಸರವಾದಿಗಳು, ನಾಗರಿಕರ ಒತ್ತಡಕ್ಕೆ ಸರ್ಕಾರ ಮಣಿಸಿದೆ. ಆದರೆ ಸುರಂಗ ಯೋಜನೆಯಿಂದ ಹಿಂದೆ ಸರಿದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+