Bengaluru-Tumakuru Metro: ಬೆಂಗಳೂರು-ತುಮಕೂರು ಮಟ್ರೋ ಯೋಜನೆ ಬಗ್ಗೆ ಹೊರಬಿತ್ತು ಮಹತ್ವದ ಅಪ್ಡೇಟ್‌

Bengaluru-Tumakuru Metro: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಟ್ರಾಫಿಕ್‌ ಜಂಜಾಟದಿಂದ ತಪ್ಪಿಸಿಕೊಳ್ಳಲು ನಗರದ ಬಹುತೇಕ ಮಂದಿ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಇದರ ನಡುವೆಯೇ ತುಮಕೂರಿನವರೆಗೂ ಮೆಟ್ರೋ ವಿಸ್ತರಣೆ ಬಗ್ಗೆ ತುಂಬಾ ದಿನಗಳಿಂದಲೂ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಯೋಜನೆ ಬಗ್ಗೆ ಸಚಿವ ಜಿ.ಪರಮೇಶ್ವರ್ ಅವರು ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ತುಮಕೂರಿನವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕೆಂದು ತುಂಬಾ ದಿನಗಳಿಂದಲೂ ಚರ್ಚೆಗಳು ನಟೆಯುತ್ತಿದೆ. ಇದೀಗ ಈ ಬಗ್ಗೆ ಸಚಿವ ಜಿ.ಪರಮೇಶ್ವರ್ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.

Bengaluru-Tumakuru Metro Project work New Big Update Know details

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ವಿಸ್ತೃತ ಯೋಜನಾ ವರದಿ ನಡೆಯುತ್ತಿದೆ. ಹೈದರಾಬಾದ್​ ಮೂಲದ ಕಂಪನಿ ಡಿಪಿಆರ್ ತಯಾರಿ ಮಾಡುತ್ತಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ, ಇದೇ ವೇಳೆ ಇನ್ನೂ ಏನೆಲ್ಲ ಹೊಸ ಅಪ್ಡೇಟ್ ಆಗಲಿವೆ ಎನ್ನುವ ಮಾಹಿತಿಯನ್ನು ಕೂಡ ಹೊರಹಾಕಿದ್ದಾರೆ.

ಟೌನ್‌ಶಿಪ್ ನಿರ್ಮಾಣದ ಬಗ್ಗೆ ಹೇಳಿದ್ದೇನು?: ವಸಂತನರಸಾಪುರದಲ್ಲಿ ಟೌನ್‌ಶಿಪ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಜಾದ ಗುರುತು ಮಾಡಲಾಗಿದೆ. ಪಿಪಿಪಿ ಮಾಡೆಲ್‌​ನಲ್ಲಿ ಟೌನ್‌​ಶಿಫ್ ನೀಡಲಾಗುತ್ತದೆ. ಇನ್ನು, ನಮ್ಮ ‌ಜಿಲ್ಲೆಯಲ್ಲಿ‌ ವಿಮಾನ ನಿಲ್ದಾಣದ ನಿರ್ಮಾಣ ಬಗ್ಗೆ ಚರ್ಚೆ ಇಲ್ಲ. ದಾಬಸ್ ಪೇಟೆ ನೆಲಮಂಗಲ ಬಳಿ ನಿರ್ಮಾಣ ಮಾಡಲು ಚರ್ಚೆ ನಡೆಯುತ್ತಿದೆ ಎಂದರು.

ಎಷ್ಟು ಕಿಲೋ ಮೀಟರ್?: 52.41 ಕಿಲೋ ಮೀಟರ್‌ ಉದ್ದದ ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಮಾರ್ಗದಲ್ಲಿ 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ಮಾಡಲಾಗಿದೆ. ಮಾದಾವರ ನಿಲ್ದಾಣದಿಂದ ಪ್ರಾರಂಭ ಆಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿಸಲಿದೆ.

ಒಂದು ವೇಳೆ ತುಮಕೂರಿನಲ್ಲಿ ಮೆಟ್ರೋ ನಿರ್ಮಾಣವಾದರೆ, ಇಲ್ಲಿನ ಆರ್ಥಿಕ ಅಭಿವೃದ್ಧಿ ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಿದಂತಾಗಲಿದೆ. ಅಲ್ಲದೆ, ಬೆಂಗಳೂರಿನಿಂದ ತುಮಕೂರಿಗೆ ಹಾಗೂ ತುಮಕೂರಿನಿಂದ ಬೆಂಗಳೂರಿಗೆ ಬೇಗ ಪ್ರಯಾಣ ಬೆಳೆಸಲು ತುಂಬಾ ಸಹಾಯಕ ಆದಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+