• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೇ ದಿನದಲ್ಲಿ 42 ಲಕ್ಷ ರೂ ದಂಡ ತೆತ್ತ ಬೆಂಗಳೂರಿಗರು

|

ಬೆಂಗಳೂರು, ಸೆಪ್ಟೆಂಬರ್ 11: ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಬಳಿಕ ಸಂಚಾರ ವಿಭಾಗದ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ.

ಬೆಂಗಳೂರಿಗರು ಒಂದೇ ದಿನದಲ್ಲಿ 42 ಲಕ್ಷ ರೂ ದಂಡ ತೆತ್ತಿದ್ದಾರೆ. ಸಂಚಾರ ನಿಯಮವನ್ನು ಉಲ್ಲಂಘಿಸಿದವರಿಂದ ಒಂದೇ ದಿನದಲ್ಲಿ 42 ಲಕ್ಷ ರೂ ದಂಡ ಸಂಗ್ರಹಿಸಲಾಗಿದೆ.

ಹುಷಾರ್‌! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ

ನಗರ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ 10ರಿಂದ ಬುಧವಾರ ಬೆಳಗ್ಗೆ 11ರವರೆಗೆ 1023 ಪ್ರಕರಣಗಳು ದಾಖಲಾಗಿದ್ದು, 42,53,700 ಲಕ್ಷ ರೂ ದಂಡ ಸಂಗ್ರಹಿಸಿದ್ದಾರೆ. ಒಂದು ವಾರದ ಅವಧಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ 1.10 ಕೋಟಿ ರೂ ದಂಡವನ್ನು ಜನರು ಪಾವತಿಸಿದಂತಾಗಿದೆ.

 ಯಾವ್ಯಾವ ನಿಯಮ ಉಲ್ಲಂಘನೆ

ಯಾವ್ಯಾವ ನಿಯಮ ಉಲ್ಲಂಘನೆ

ಪಾನಮತ್ತ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವುದು, ಹೆಲ್ಮೆಟ್ ಇಲ್ಲದ ಚಾಲನೆ, ತ್ರಿಬಲ್ ರೈಡಿಂಗ್, ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣ, ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ, ನೋ ಪಾರ್ಕಿಂಗ್ ಹಾಗೂ ಸಿಗ್ನಲ್‌ಗಳ ಬಳಿ ಸಂಚಾರ ಪಥದಲ್ಲಿ ನಿಲ್ಲದ ಹೀಗೆ ಕೆಲವು ಸಂಚಾರ ನಿಯಮಗಳನ್ನು ಹೆಚ್ಚಿನದಾಗಿ ಜನರು ಉಲ್ಲಂಘಿಸಿದ್ದಾರೆ.

 ಡಿಜಿಲಾಕರ್ ಸರ್ವರ್ ಡೌನ್

ಡಿಜಿಲಾಕರ್ ಸರ್ವರ್ ಡೌನ್

ಕೇಂದ್ರ ಸರ್ಕಾರದ ಡಿಜಿಲಾಕರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಜನರು ಪರದಾಡುವಂತಾಗಿದೆ. ಸಂಚಾರ ದಂಡ ಪರಿಷ್ಕರಣೆ ಬೆನ್ನಲ್ಲೇ ತಮ್ಮ ವಾಹನದ ದಾಖಲಾತಿಗಳನ್ನು ಸಂಗ್ರಹಿಸಿಡಲು ಜನರು ಕೇಂದ್ರ ಸರ್ಕಾರದ ಡಿಜಿ ಲಾಕರ್ ಆಪ್‌ಗೆ ಮುಗಿ ಬಿದ್ದಿದ್ದಾರೆ. ಒಮ್ಮೆಗೆ ಹೆಚ್ಚಿನ ಜನರು ಲಾಕರ್ ಬಳಕೆಗೆ ಮುಂದಾದ ಪರಿಣಾಮ ಸರ್ವರ್ ಡೌನ್ ಆಗಿದೆ ಎಂದು ತಿಳಿದುಬಂದಿದೆ.

ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

 ಡಿಜಿ ಲಾಕರ್ ಹೇಗೆ ಕೆಲಸ ಮಾಡುತ್ತೆ?

ಡಿಜಿ ಲಾಕರ್ ಹೇಗೆ ಕೆಲಸ ಮಾಡುತ್ತೆ?

ಪ್ಲೇ ಸ್ಟೋರ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಅಲ್ಲಿ, ಆಧಾರ್, ಚಾಲನಾ ಪರವಾನಗಿ, ಆರ್‌ಸಿ, ವಿಮೆ ಇನ್ನಿತರೆ ದಾಖಲೆಗಳು ಇರುತ್ತೆ. ತಮಗೆ ಅಗತ್ಯವಿರುವ ದಾಖಲೆಗಳನ್ನು ನೋಂದಣಿ ಸಂಖ್ಯೆ ದಾಖಲಿಸಿ ದಾಖಲಾತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ತಮ್ಮ ಬಳಿ ಯಾವುದೇ ಮೂಲ ದಾಖಲೆಗಳನ್ನು ಕೊಂಡೊಯ್ಯುವ ಬದಲಿಗೆ ಡಿಜಿ ಲಾಕರ್‌ನಲ್ಲಿರುವ ದಾಖಲೆ ತೋರಿಸಬಹುದಾಗಿದೆ.

 ಗೃಹ ಸಚಿವರ ಹೆಸರು ಹೇಳಿದರೂ ದಂಡ

ಗೃಹ ಸಚಿವರ ಹೆಸರು ಹೇಳಿದರೂ ದಂಡ

ಸಂಚಾರ ದಂಡಾಸ್ತ್ರವು ಸಾಮಾನ್ಯ ಜನರಿಗೆ ಮಾತ್ರವಲ್ಲ, ರಾಜ್ಯ ಗೃಹ ಸಚಿವರ ಹೆಸರು ಹೇಳಿದರೂ ಸಹ ಬಿಡದೆ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಪಾನಮತ್ತರಾಗಿ ವಾಹನ ಚಾಲನೆ ಮಾಡಿದ ತಪ್ಪಿಗೆ ಸಚಿವರ ಸಂಬಂಧಿ ಎನ್ನಲಾದ ವ್ಯಕ್ತಿಗೆ 15 ಸಾವಿರ ದಂಡ ವಿಧಿಸಲಾಗಿದೆ.

ಚಾಲುಕ್ಯ ವೃತ್ತ ಸಮೀಪ ರೇಸ್‌ಕೋರ್ಸ್‌ ರಸ್ತೆಯಲ್ಲಿ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆ ಪೊಲೀಸರು, ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅದೇ ಮಾರ್ಗದಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸಿಕೊಂಡು ವ್ಯಕ್ತಿಯೊಬ್ಬರು ಬಂದಿದ್ದಾರೆ. ಆ ಕಾರನ್ನು ಅಡ್ಡಗಟ್ಟಿದ ಪೊಲೀಸರು ಮದ್ಯ ಸೇವನೆ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ. ಆಗ ಸಚಿವರ ಹೆಸರು ಹೇಳಿದ್ದಾರೆ. ಆದರೂ ಪೊಲೀಸರು ಎಲ್ಲರಿಗು ವಿಧಿಸುವಂತೆಯೇ ದಂಡ ವಿಧಿಸಿದ್ದಾರೆ.

ಶಾಕ್ ಆಯ್ತಾ, ಶಾಕ್ ಆಗ್ಲೇ ಬೇಕೂಂತ ತಾನೇ ಟ್ರಾಫಿಕ್ ಫೈನ್ ಹಾಕಿರೋದು..

English summary
Bengaluru Traffic Police Collected 42 lakh Rupees fine in a day. And 1 crore in One week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X