Get Updates
Get notified of breaking news, exclusive insights, and must-see stories!

ವಾಹನ ಸವಾರರೇ ಗಮನಿಸಿ: ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಸಂಚಾರ ಬದಲಾವಣೆ!

Bengaluru Traffic advisory: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹಾಗೂ ಸಂಚಾರ ಬದಲಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪೊಲೀಸರು ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದಾರೆ. ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡುವ ಉದ್ದೇಶದಿಂದ ಸಂಚಾರ ಬದಲಾವಣೆಯನ್ನು ಮಾಡಲಾಗಿದೆ. ಬೆಂಗಳೂರು ಸಂಚಾರ ಪೊಲೀಸರು ಯಾವ ಮಾರ್ಗದಲ್ಲಿ ಸಂಚಾರ ಬದಲಾವಣೆ ಮಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.

ಎಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಕೆಲವು ಪ್ರಮುಖ ರಸ್ತೆಗಳಲ್ಲಿ ರಸ್ತೆ ಸಂಚಾರ ಬದಲಾಯಿಸಲಾಗಿದೆ. ಈ ಸಂಚಾರ ಬದಲಾವಣೆಯು ಪ್ರಾಯೋಗಿಕವಾಗಿ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

Bengaluru Traffic advisory Motorists take note Traffic changes on major roads in city

ಸಂಚಾರ ನಿರ್ಬಂಧ: ಸಕ್ರಾ ಆಸ್ಪತ್ರೆ ಕಡೆಯಿಂದ ದೇವರಬಿಸನಹಳ್ಳಿ-ಇಕೋವರ್ಲ್ಡ್-ಇಂಟೆಲ್-ಇಕೋಸ್ಪೇಸ್ ಕಡೆಗೆ ನೇರ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

ನಿಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ: ಈ ಮಾರ್ಗಗಳಲ್ಲಿ ಮಾರ್ಗ ಬದಲಾವಣೆ

* ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ಕಡ್ಡಾಯ ಎಡತಿರುವು ಪಡೆದು ಕಾಡಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಯ ಮೂಲಕ ಸಾಗಿ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ 'ಯು' ತಿರುವು ಪಡೆದು, ದೇವರಬಿಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ, ದೇವರಬಿಸನಹಳ್ಳಿ ಜಂಕ್ಷನ್ ಮುಖಾಂತರ ಸಂಚರಿಸಬಹುದು.

* ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್ ಸರ್ವೀಸ್ ರಸ್ತೆ ಮೂಲಕ ಮಾರತಹಳ್ಳಿ ಕಡೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಕಾಡಬಿಸನಹಳ್ಳಿ, ಕಡೆಗೆ ಹೋಗುವ ಮಧ್ಯಭಾಗದ ಸರ್ವೀಸ್ ರಸ್ತೆ ಮೂಲಕ ನೇರವಾಗಿ ಮಾರತಹಳ್ಳಿ ಕಡೆಗೆ ಸಂಚರಿಸಬಹುದು.

* ಬೆಳ್ಳಂದೂರು ಕಡೆಯಿಂದ ಪಾಸ್‌ಪೋರ್ಟ್ ಸರ್ವೀಸ್ ರಸ್ತೆ ಮೂಲಕ ದೇವರಬಿಸನಹಳ್ಳಿ ರಸ್ತೆ ಕಡೆ ಸಂಚರಿಸುವ ವಾಹನಗಳು, ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿನ ಮಾರ್ಗದ ಮೂಲಕ ಮಧ್ಯ ಭಾಗದ ಸರ್ವೀಸ್ ರಸ್ತೆಯಲ್ಲಿ ಎಡ ತಿರುವು ಪಡೆದು, ಕಾಡಬಿಸನಹಳ್ಳಿ ಸರ್ವೀಸ್ ರಸ್ತೆ ಮೂಲಕ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ 'ಯು' ತಿರುವು ಪಡೆದು ದೇವರಬಿಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ ದೇವರಬಿಸನಹಳ್ಳಿ ಜಂಕ್ಷನ್ ಮುಖಾಂತರ ಸಂಚರಿಸಬಹುದು.

* ಇಕೋವರ್ಲ್ಡ್(ಆರ್.ಎಂ.ಜಡ್) ಕಡೆಯಿಂದ ಮಾರತ್‌ಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ ಪಾಸ್‌ಪೋರ್ಟ್ ಸರ್ವೀಸ್ ರಸ್ತೆಯಲ್ಲಿ ಬಲತಿರುವು ಪಡೆದು, ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ಕಾಡಬಿಸನಹಳ್ಳಿ ಕಡೆಗೆ ಹೋಗುವ ಮಧ್ಯಭಾಗದ ಸರ್ವೀಸ್ ರಸ್ತೆ ಮೂಲಕ ನೇರವಾಗಿ ಮಾರತ್‌ಹಳ್ಳಿ ಕಡೆಗೆ ಸಂಚರಿಸಬಹುದು.

* ಇಕೋವರ್ಲ್ಡ್ (ಆರ್.ಎಂ.ಜಡ್) ಕಡೆಯಿಂದ ದೇವರಬೀಸನಹಳ್ಳಿ - ಕಡೆಗೆ ಸಂಚರಿಸುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ, ಪಾಸ್‌ಪೋರ್ಟ್ ಸರ್ವೀಸ್ ರಸ್ತೆಯಲ್ಲಿ ಬಲತಿರುವು ಪಡೆದು, ದೇವರ ಬೀಸನಹಳ್ಳಿ ಜಂಕ್ಷನ್ ಬಲ ಮಾರ್ಗದ ಮೂಲಕ ಮಧ್ಯಭಾಗದ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು, ಕಾಡಬಿಸನಹಳ್ಳಿ ಸರ್ವೀಸ್ ರಸ್ತೆ ಮೂಲಕ ಕಾಡಬಿಸನಹಳ್ಳಿ ಜಂಕ್ಷನ್‌ನಲ್ಲಿ 'ಯು' ತಿರುವು ಪಡೆದು ದೇವರಬಿಸನಹಳ್ಳಿ ಕಡೆಯ ಮಧ್ಯದಲ್ಲಿರುವ ಸರ್ವೀಸ್ ರಸ್ತೆ, ಹೊರವರ್ತುಲ ರಸ್ತೆ ಮುಖಾಂತರ ದೇವರಬಿಸನಹಳ್ಳಿ ಕಡೆಯ ಸರ್ವೀಸ್ ರಸ್ತೆಗೆ ಹೋಗಿ, ದೇವರಬಿಸನಹಳ್ಳಿ ಜಂಕ್ಷನ್ ಮೂಲಕ ಸಂಚರಿಸಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+