ಬೆಂಗಳೂರಿನಲ್ಲಿ ಜ.3-5ರವರೆಗೆ ವಿದ್ಯುತ್‌ ಕಡಿತ: ಇಲ್ಲಿದೆ ವಿವರ

ಬೆಂಗಳೂರು, ಜನವರಿ 02: ಬೆಂಗಳೂರಿನಲ್ಲಿ ಪ್ರತಿನಿತ್ಯ ಇರುವ ಸಮಸ್ಯೆಗಳ ಜೊತೆಯಲ್ಲಿ ವಿದ್ಯುತ್‌ ಕಡಿತ ಕೂಡಾ ಒಂದು ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲಿ ಹಲವಾರು ಕಾರಣಗಳನ್ನು ನೀಡಿ ಬೆಸ್ಕಾಂ ವಿದ್ಯುತ್‌ ಕಡಿತವನ್ನು ಮಾಡುತ್ತಲಿದೆ.

ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಮ್) ಪ್ರಕಾರ ನಿರ್ವಹಣೆ ಮತ್ತು ಇತರ ಕೆಲಸಗಳ ಕಾರಣದಿಂದಾಗಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಜನವರಿ 3 ರಿಂದ ಜನವರಿ 5 ರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ. ಈ ಹಿಂದೆ ಇತ್ತೀಚೆಗೆ ಡಿ.30, 31ರಂದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್‌ ಕಡಿತವನ್ನು ಮಾಡಲಾಗಿತ್ತು.

ಬೆಂಗಳೂರು ದಕ್ಷಿಣ ವಲಯದಲ್ಲಿ ಜನವರಿ 3 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗೆ ಬೇರೆ ಬೇರೆ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಹಾಗಾದರೆ ಯಾವ ಪ್ರದೇಶದಲ್ಲಿ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರಗೆ ವಿದ್ಯುತ್‌ ಕಡಿತ ಉಂಟಾಗಲಿದೆ ಎಂದು ತಿಳಿಯಲು ಮುಂದೆ ಓದಿ..

Bengaluru to face power cuts from January 3 to 5: Heres full Details

ಜನವರಿ 3 ರಂದು ಈ ಪ್ರದೇಶದಲ್ಲಿ ವಿದ್ಯುತ್‌ ಕಡಿತ

ಜನವರಿ 3ರಂದು ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿನಾಯಕ ನಗರ, ಲಕ್ಕಸಂದ್ರ, ಲಾಲ್ಜಿನಗರ, ವಿಲ್ಸೋನ್‌ಗಾರ್ಡನ್, ಬಿಕಾಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿನಗರ ಕೆರೆ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಜೆಪಿ ನಗರ 1 ನೇ ಹಂತ, ಸಾರಕ್ಕಿ ಮಾರುಕಟ್ಟೆ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಚುಂಚಘಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಬನಶಂಕರಿ 2ನೇ ಹಂತ, ಜೆ.ಪಿ.ನಗರ 5ನೇ ಹಂತ, ಬ್ಯಾಂಕ್ ಕಾಲೋನಿ, ಶ್ರೀನಿವಾಸ ನಗರ, ವಿವೇಕಾನಂದ ನಗರ, ಈಜಿಪುರ, ನಾಗಸಂದ್ರಘಟ್ಟ, ಕೆಂಪಾಪುರ, ಯಮಲೂರು, ಬನ್ನಪ್ಪ ಕಾಲೋನಿ, ರಮೇಶ್ ಲೇಔಟ್, ಪರ್ಲ್ಸ್ ಪ್ಯಾರಡೈಸ್, ಐಟಿಪಿಎಲ್ ಮುಖ್ಯರಸ್ತೆ, ಬಿಡಿಎ ಮೊದಲ ಹಂತ, ದೊಡ್ಡಕಮ್ಮನಹಳ್ಳಿ, ಚಿಕ್ಕಕಮ್ಮನಹಳ್ಳಿ ಮತ್ತು ನೊಬೋ ನಗರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಹೊಯ್ಸಳನಗರ ರಸ್ತೆ, ಬಿಸಿಐ ಎಸ್ಟೇಟ್ ಕೈಗಾರಿಕಾ ಪ್ರದೇಶ, ಕೆಜಿ ಪುರ ಮುಖ್ಯ ರಸ್ತೆ, ಡಿ'ಕೋಸ್ಟಾ ಲೇಔಟ್, ಗೋವಿಂದಪುರ, ಬೈರಪ್ಪ ಲೇಔಟ್, ಗೋವಿಂದಪುರ ಗ್ರಾಮ, ಬೈರತಿ, ಬೈರತಿ ಗ್ರಾಮ ಮತ್ತು ಎಂಎಸ್ ರಾಮಯ್ಯ ಉತ್ತರ ನಗರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಓಕಳಿಪುರಂ ಮುಖ್ಯರಸ್ತೆ, ಹನುಮಂತಪ್ಪ ಕಾಲೋನಿ, ಮತ್ತಿಕೆರೆ ಮುಖ್ಯರಸ್ತೆ, ಎಸ್‌ಬಿಎಂ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಮುತ್ಯಾಲನಗರ, ಎಂಇಎಸ್ ರಸ್ತೆ, ಲಕ್ಷ್ಮೀಪುರ ಗ್ರಾಮ, ತಿಂಡ್ಲು ಮುಖ್ಯರಸ್ತೆ, ಎಂಎಸ್ ಪಾಳ್ಯ, ಕನಕ ನಗರ, ಅಮೃತನಗರ, ಜಕ್ಕೂರು, ಸಂಪಿಗೆಹಳ್ಳಿ, ಹೆಗಡೆ ನಗರ, ವಿನಾಯಕ ನಗರ, ಸಂಜಯನಗರ ಮುಖ್ಯರಸ್ತೆ, ಶೆಟ್ಟಿಹಳ್ಳಿ, ಮಲ್ಲಸಂದ್ರ, ನಂದಿನಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಮಹಾಲಕ್ಷ್ಮಿ ಪುರಂ, ಅಕ್ಕಮಹಾದೇವಿ ಚೌಲ್ಟ್ರಿ, ನಾಗ್ಪುರ ಮುಖ್ಯ ರಸ್ತೆ ಮತ್ತು ಮೋದಿ ರಸ್ತೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಡಿಎ ಲೇಔಟ್ ಸುತ್ತಮುತ್ತ, ಚಾಮರಾಜಪೇಟೆ, ಹೊಸಕೆರೆಹಳ್ಳಿ ಮುಖ್ಯರಸ್ತೆ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಆಂಧ್ರಹಳ್ಳಿ, ಸುರಾನಾ ನಗರ ಸಿಂಡಿಕೇಟ್ ಬ್ಯಾಂಕ್ ಲೇಔಟ್, ಡಿ ಗ್ರೂಪ್ 5 ನೇ ಬ್ಲಾಕ್, ಟ್ಯಾಂಕ್ ಬಂಡ್ ರಸ್ತೆ, ಸನ್‌ಸಿಟಿ, ಅಪೂರ್ವ ಲೇಔಟ್, ಕೆಂಗೇರಿ ಮುಖ್ಯ ರಸ್ತೆ, ಉಳ್ಳಾಲ ನಗರ, ಮಾರುತಿ ನಗರ, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ, ಬಿಇಎಲ್ 1 ನೇ ಹಂತ, ಬಿಇಎಲ್ 2 ನೇ ಹಂತ ಮತ್ತು ಭವಾನಿನಗರದಲ್ಲಿಯೂ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಜನವರಿ 4 ರಂದು ಈ ಪ್ರದೇಶದಲ್ಲಿ ವ್ಯತ್ಯಯ

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿನಾಯಕ ನಗರ, ಪಂಚಲಿಂಗೇಶ್ವರ, ಎಸ್‌ಆರ್ ನಗರ, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಮಾರುತಿ ಲೇಔಟ್, ವಿಟ್ಟಲ್‌ ನಗರ, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತಪುರ ಮುಖ್ಯ ರಸ್ತೆ, ವಸಂತ ವಲ್ಲಭ ನಗರ, ಕುವೆಂಪು ನಗರ ಮುಖ್ಯ ರಸ್ತೆ, ವಸಂತಪುರ, ಎಲ್‌ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಜಯನಗರ 8ನೇ ಬ್ಲಾಕ್, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಬಿಡಿಎ ಕಾಂಪ್ಲೆಕ್ಸ್, ಕೆಐಎಂಎಸ್ ಕಾಲೇಜು , ಜೆ.ಪಿ.ನಗರ 2ನೇ ಹಂತ, ಜೆ.ಪಿ.ನಗರ 3ನೇ ಹಂತ, ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಡಾಲರ್ಸ್ ಲೇಔಟ್, ಚನ್ನಮ್ಮನ ಅಚ್ಚುಕಟ್ಟು, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತ, ಚಿಕ್ಕಲಸಂದ್ರ, ಉತ್ತರಹಳ್ಳಿ ಮುಖ್ಯರಸ್ತೆ, ಸಾರ್ವಭೌಮನಗರ ಭಾಗ, ರಾಮಾಂಜನೇಯ ನಗರದ ಭಾಗ, ವಿವೇಕನಗರ, ನಾಗಸಂದ್ರ, ರಾಜು ಕಾಲೋನಿ, ಮುನ್ನಿರೆಡ್ಡಿ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ, ಬಿಡಿಎ 2ನೇ ಹಂತ ಮತ್ತು ಬಿಡಿಎ 2ನೇ ಹಂತದಲ್ಲಿ ವಿದ್ಯುತ್‌ ಕಡಿತ ಉಂಟಾಗಲಿದೆ.

ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸ್ವಾಮಿ ವಿವೇಕಾನಂದ ರಸ್ತೆ, ಕೆಜಿ ಪುರ ಮುಖ್ಯರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ದೊಮ್ಮಲೂರು ಗ್ರಾಮ, ಬಾಣಸವಾಡಿ ಮುಖ್ಯರಸ್ತೆ, ಬಿ ಚನ್ನಸಂದ್ರ, ಯುಇಲಾಲ್ ನಗರ, ನಾಗವಾರ, ಚಾಣಕ್ಯ ಲೇಔಟ್ ಗೆದ್ದಲಹಳ್ಳಿ, ಹಿರೇಮಠ ಲೇಔಟ್, ಬಸವಣ್ಣ ಲೇಔಟ್, ಕಾಫಿ ಬೋರ್ಡ್ ಲೇಔಟ್ ಮತ್ತು ಕೆ.ಎಸ್. ರಸ್ತೆಯಲ್ಲಿ ವಿದ್ಯುತ್‌ ಕಡಿತ ಉಂಟಾಗಲಿದೆ. ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಅಯ್ಯಪ್ಪ ದೇವಸ್ಥಾನ ರಸ್ತೆ, ಶ್ರೀರಾಮ್‌ಪುರ, ಯಶವಂತಪುರ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಜಾಲಹಳ್ಳಿ ಗ್ರಾಮ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಸಿಂಗಾಪುರ, ಹೆಗಡೆ ನಗರ, ಶಿವನಹಳ್ಳಿ, ಚೊಕ್ಕನಹಳ್ಳಿ, ಪಾಲನಹಳ್ಳಿ, ಪುಟ್ಟೇನಹಳ್ಳಿ, ಹಳೇಹಳ್ಳಿ, ಪುಟ್ಟೇನಹಳ್ಳಿ , ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ತುಮಕೂರು ಮುಖ್ಯರಸ್ತೆ ಟಿ ದಾಸರಹಳ್ಳಿ, ಹಂಸಸಾಗರ, ಎಂಜಿ ನಗರ, ವಿಎಚ್‌ಬಿಸಿಎಸ್ ಲೇಔಟ್, ಕುರುಬರಹಳ್ಳಿ, ಜೆಸಿ ನಗರ, ನಂದಿನಿ ಲೇಔಟ್, ಸಾಕಮ್ಮ ಬಡಾವಣೆ, ಪರಿಮಳ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸೀತಾ ವೃತ್ತ, ಬೈತ್ರನಪುರದ ಕೆಲವು ಭಾಗಗಳು, ಬಿಎಚ್‌ಇಎಲ್ ಲೇಔಟ್, ದೊಡ್ಡಬೆಲೆ ರಸ್ತೆ, ಅನ್ನಪೂರ್ಣೇಶ್ವರಿ ಲೇಔಟ್, ಟಿಜಿ ಪಾಳ್ಯ, ವಿದ್ಯಾಮಾನನಗರ, ಕೆರೆಚೂಡಳ್ಳಿ, ಹೊಸದೊಡ್ಡಿ, ಸದನಪಾಳ್ಯ, ಬಿಡಿ ಕಾಲೋನಿ, ದುಬಾಸಿಪಾಳ್ಯ, ಉತ್ತರಹಳ್ಳಿ ರಸ್ತೆ, ಕೋಣಚಂದ್ರಾಪುರ ರಸ್ತೆ, ಮಲ್ಲತ್ತಳ್ಳಿ ರಸ್ತೆ, ಕೋಡಿಬಪ್ಪಳ್ಳಿ ರಸ್ತೆ , ಅಂಬೇಡ್ಕರ್ ನಗರ, ಉಳ್ಳಾಲ ಬಸ್ ನಿಲ್ದಾಣ ಮತ್ತು ಬಿಡಿಎ ಕಾಲೋನಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಜನವರಿ 5 ರಂದು ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಲಕ್ಷ್ಮಿ ರಸ್ತೆ, ಶಾಂತಿನಗರ, ವಿನಾಯಕ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಶ್ರೀನಿವಾಸ ಕೈಗಾರಿಕಾ ಪ್ರದೇಶ, ಚುಂಚಘಟ್ಟ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಬೀರೇಶ್ವರ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಶಾಸ್ತ್ರಿ ನಗರ ಮುಖ್ಯರಸ್ತೆ, ಕೆಆರ್ ರಸ್ತೆ, ಕಿಡ್ನಿ ಫೌಂಡೇಶನ್, ಪದ್ಮನಾಬನಗರ, ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ಡಾಲರ್ಸ್ ಲೇಔಟ್, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯರಸ್ತೆ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3ನೇ ಹಂತ, ಭುವನೇಶ್ವರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಈಜಿಪುರ, ವಿವೇಕನಗರ, ಜಗದೀಶನಗರ, ಶಿವಾನಂದನಗರ, ಕುವೆಂಪು ರಸ್ತೆ, ವೀರಭದ್ರನಗರ, ಶಿವಶಕ್ತಿ ಕಾಲೋನಿ, ಮಾರತಹಳ್ಳಿ, ಐಟಿಪಿಎಲ್ ಮುಖ್ಯರಸ್ತೆ, ಹುಳಿಮಾವು, ಕೂಡ್ಲು ಗೇಟ್ ಮತ್ತು ಗೊಟ್ಟಿಗೆರೆ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮುನಿರೆಡ್ಡಿ, ಕೆಆರ್ ಪುರಂ, ಕಸ್ತೂರಿ ನಗರ, ಕೆ.ಜಿ.ಪುರ ಮುಖ್ಯರಸ್ತೆ, ಬಾಣಸವಾಡಿ, ಬೈರತಿ, ಬೈರತಿ ಗ್ರಾಮ, ಥಣಿಸಂದ್ರ ಮುಖ್ಯರಸ್ತೆ, ಸಾರಾಯಿಪಾಳ್ಯ, ಎಂ.ಎಸ್.ರಾಮಯ್ಯ ಉತ್ತರ ನಗರ ಮತ್ತು ಗೋವಿಂದಪುರ ಮುಖ್ಯರಸ್ತೆಯಲ್ಲಿ ವಿದ್ಯುತ್‌ ಕಡಿತವಾಗಲಿದೆ. ಉತ್ತರ ವಲಯದಲ್ಲಿ ರಾತ್ರಿ 9.30ರಿಂದ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ರಾಜಾಜಿನಗರ, ಶ್ರೀರಾಮಪುರಂ, ನಾಗಪ್ಪ ಬ್ಲಾಕ್, ಯಶವಂತಪುರ, ಗುರುಮೂರ್ತಿ ರೆಡ್ಡಿ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಡಿಜೆ ಹಳ್ಳಿ, ಮೋದಿ ರಸ್ತೆ, ಹೆಗ್ಡೆ ನಗರ, ವಿನಾಯಕನಗರ, ದ್ವಾರಕಾ ನಗರ, ಯಲಹಂಕ ಓಲ್ಡ್ ಟೌನ್, ಜಕ್ಕೂರು, ರವೀಂದ್ರನಗರ, ಸಂತೋಷನಗರ, ಕಲ್ಯಾಣ್ ನಗರ, ಪ್ರಶಾಂತ್ ನಗರ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಬೋವಿಪಾಳ್ಯ, ಮಹಾಲಕ್ಷ್ಮಿ ಪುರಂ, ಶ್ರೀರಾಮನಗರ ಮತ್ತು ಜೆ.ಸಿ.ನಗರದಲ್ಲಿ ವಿದ್ಯುತ್‌ ಕಡಿತವಾಗಲಿದೆ. ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Recommended Video

      Mahindra SUV ಕಾರ್ ಮೇಲೆ ಅಟ್ಯಾಕ್ ಮಾಡಿದ ಹುಲಿ | Oneindia Kannada

      ಬಾಪೂಜಿ ನಗರ, ಮಾರುತಿ ನಗರ, ಶೋಬಾ ಟೆಂಟ್ ರಸ್ತೆ, ಸ್ಯಾಟಲೈಟ್ ಬಸ್ ನಿಲ್ದಾಣ, ಕೆಎಸ್‌ಎಫ್‌ಐಸಿ ರಸ್ತೆ, ಬಲಶಾಪಲ್ಲಿಯ ರಸ್ತೆ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಎಚ್‌ಇಎಲ್ ಲೇಔಟ್, ಡಿ ಗ್ರೂಪ್ 4ನೇ ಬ್ಲಾಕ್, ಬಸಪ್ಪನಪಾಳ್ಯ, ತಿಮ್ಮೇಗೌಡನಪಾಳ್ಯ, ಬಿ.ಡಿ. , ಅಪೂರ್ವ ಲೇಔಟ್, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಏರಿಯಾ ಬ್ಲಾಕ್ -1, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ, ಕಲ್ಯಾಣಿ ಲೇಔಟ್, ಆರ್‌ಆರ್ ಲೇಔಟ್, ಕುವೆಂಪು ಮುಖ್ಯ ರಸ್ತೆ, ಜಿಕೆ ಗಲ್ಲಿ ರಸ್ತೆ ಮತ್ತು ಗಂಗಾನಗರದಲ್ಲಿ ವಿದ್ಯುತ್‌ ಕಡಿತವಾಗಲಿದೆ. (ಒನ್‌ಇಂಡಿಯಾ ಸುದ್ದಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+