Bengaluru Suburban Rail: ಉಪನಗರ ರೈಲು ಯೋಜನೆಗೆ ರಾಜ್ಯದಿಂದ ಇಷ್ಟು ಅನುದಾನ; ಅಂಕಿಅಂಶಗಳ ವಿವರ ಇಲ್ಲಿದೆ
Bengaluru Suburban Rail: ಬೆಂಗಳೂರಿನ ಬಹುನಿರೀಕ್ಷಿತ ಯೋಜನೆಗಳಲ್ಲಿ ಉಪನಗರ ರೈಲು ಯೋಜನೆ ಒಂದಾಗಿದೆ. ಈ ಕಾಮಗಾರಿಯನ್ನು ಬೇಗ ಮುಗಿಸುವಂತೆ ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಸೂಚನೆ ನೀಡಿದ್ದರು. ಇದಕ್ಕೆ ಅನುದಾನದ ಕೊರತೆಯೂ ಒಂದು ಕಾರಣವಾಗಿತ್ತು ಎನ್ನಲಾಗಿದೆ. ಇದೀಗ ರಾಜ್ಯದಿಂದಲೂ ಅನುದಾನ ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ಬೆಂಗಳೂರು ಉಪನಗರ ರೈಲು ಯೋಜನೆಗೆ 306 ರೈಲು ಕೋಚ್‌ಗಳ ಖರೀದಿಗೆ ರಾಜ್ಯದ ಪಾಲು 2,135 ಕೋಟಿ ರೂಪಾಯಿ ಒದಗಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ ಅವರು, ಮುಂದಿನ 5 ವರ್ಷಗಳಲ್ಲಿ 306 ಕೋಚ್‌ಗಳನ್ನು ಖರೀದಿ ಮಾಡಲಿ ಈ ಮೊತ್ತವನ್ನು ಕೆಆರ್‌ಐಡಿಇಗೆ ಒದಗಿಸಲಾಗುತ್ತದೆ. ಒಟ್ಟು ಈ ಯೋಜನೆಗೆ ಅಂದಾಜು ಮೊತ್ತ 4,300 ಕೋಟಿ ರೂಪಾಯಿ ಆಗಿದ್ದು, ರಾಜ್ಯದಿಂದ 2,135 ಕೋಟಿ ರೂಪಾಯಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಈ ವೇಳೆ 9 ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ತಿದ್ದುಪಡಿ ವಿಧೇಯಕಕ್ಕೂ ಸಂಪುಟದಲ್ಲಿ ಅಸ್ತು ನೀಡಲಾಗಿದೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ ವಿಧೇಯಕ, 2024, ಕರ್ನಾಟಕ ಅಂತರ್ಜಲ ವಿಧೇಯಕ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024, ಚಾಣಕ್ಯ ವಿಶ್ವ ವಿದ್ಯಾಲಯ ವಿಧೇಯಕ, 2024, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ವಿಧೇಯಕ, 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ, 2024, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024, ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಸ್ ವಿಧೇಯಕ 2024ಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣದ ಬಳಿಯಿರುವ ಶಾಪಿಂಗ್ ಸ್ಟ್ರೀಟ್‌ಗಳು: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ರೈಲು ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋ ಸಾರಿಗೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾದರೆ ನೀವು ಒಂದು ವೇಳೆ ಶಾಪಿಂಗ್ ಮಾಡಬೇಕೆಂದರೆ, ಮೆಟ್ರೋ ನಿಲ್ದಾಣದ ಪಕ್ಷದಲ್ಲಿವೆ ಶಾಪಿಂಗ್ ಸ್ಟ್ರೀಟ್‌ಗಳು. ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕಡಿಮೆ ಸಮಯದಲ್ಲಿ ಶಾಪಿಂಗ್ ಮಾಡಬೇಕೆ. ಹಾಗಾದರೆ ಮೆಟ್ರೋ ನಿಲ್ದಾಣದ ಪಕ್ಷದಲ್ಲೇ ಇವೆ ನೋಡಿ ಶಾಪಿಂಗ್ ಸ್ಟ್ರೀಟ್‌ಗಳು. ಹಾಗಾದರೆ ದೂರ, ತಲುಪಲು ಸಮಯ ಎಷ್ಟು ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
1. ಕಮರ್ಷಿಯಲ್ ಸ್ಟ್ರೀಟ್: ಪರ್ಪಲ್ ಲೈನ್ ಆದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಈ ಸ್ಟ್ರೀಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 800 ಮೀಟರ್ ದೂರ ಆಗಲಿದ್ದು, ಇಲ್ಲಿಗೆ 10-11 ನಿಮಿಷಗಳ ಒಳಗೆ ತಲುಪಬಹುದಾಗಿದೆ.
2. ಚಿಕ್ಕಪೇಟೆ ಸ್ಟ್ರೀಟ್: ಇದು ಗ್ರೀನ್ ಲೈನ್ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿಯೇ ಇದೆ. ಮೆಟ್ರೋ ನಿಲ್ದಾಣದಿಂದ ಕೇವಲ 500 ಮೀಟರ್ ದೂರಲ್ಲಿದ್ದು, ತಲುಪಲು ಬೇಕಾಗುವುದು 7 ನಿಮಿಷ ಅಷ್ಟೇ.
3. ಜಯನಗರ 4ನೇ ಬ್ಲಾಕ್: ಇದು ಗ್ರೀನ್ ಲೈನ್ ಜಯನಗರ ಮೆಟ್ರೋ ನಿಲ್ದಾಣದ ಬಳಿಯೇ ಇದೆ. ಮೆಟ್ರೋ ನಿಲ್ದಾಣದಿಂದ ಕೇವಲ 500 ಮೀಟರ್ ದೂರಲ್ಲಿದ್ದು, ತಲುಪಲು ಬೇಕಾಗುವುದು 7 ನಿಮಿಷ ಅಷ್ಟೇ.
4. ಬ್ರಿಗೇಡ್ ರಸ್ತೆ ಸ್ಟ್ರೀಟ್: ಪರ್ಪಲ್ ಲೈನ್ ಆದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಈ ಸ್ಟ್ರೀಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 800 ಮೀಟರ್ ದೂರ ಆಗಲಿದ್ದು, ಇಲ್ಲಿಗೆ ನಡೆದುಕೊಂಡು ಹೋದರೆ 10 ನಿಮಿಷಗಳ ಒಳಗೆ ತಲುಪಬಹುದಾಗಿದೆ.
5. ಮಲ್ಲೇಶ್ವರಂ ಶಾಪಿಂಗ್ ಪಾಯಿಂಟ್: ಗ್ರೀನ್ ಲೈನ್ ಶ್ರೀರಾಂಪುರ ಮೆಟ್ರೋ ನಿಲ್ದಾಣದ ಹತ್ತಿರದಲ್ಲೇ ಈ ಶಾಂಪಿಂಗ್ ಪಾಯಿಂಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 1.5 ಕಿಮೀ ದೂರ ಆಗಲಿದ್ದು, ಇಲ್ಲಿಗೆ ನಡೆದುಕೊಂಡು ಹೋದರೆ 15 ನಿಮಿಷಗಳ ಒಳಗೆ ತಲುಪಬಹುದಾಗಿದೆ.
6. ಚರ್ಚ್ ಸ್ಟ್ರೀಟ್: ಪರ್ಪಲ್ ಲೈನ್ ಆದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಈ ಸ್ಟ್ರೀಟ್ ಇದೆ. ಇದು ಮೆಟ್ರೋ ನಿಲ್ದಾಣದದಿಂದ ಕೇಲವ 300 ಮೀಟರ್ ದೂರ ಇದ್ದು, ಇಲ್ಲಿಗೆ 5 ನಿಮಿಷದ ಒಳಗೆ ನಡೆದುಕೊಂಡು ತಲುಪಬಹುದಾಗಿದೆ.












Click it and Unblock the Notifications