Bengaluru Second Airport: ಬೆಂಗಳೂರು 2ನೇ ವಿಮಾನ ನಿಲ್ದಾಣ: ಇಲ್ಲಿ ನಿರ್ಮಾಣವಾದರೆ ಬಂಪರ್!
Bengaluru Second Airport: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ನಿತ್ಯವೂ ಒಂದಿಲ್ಲೊಂದು ಅಪ್ಡೇಟ್‌ಗಳು ಬರುತ್ತಿವೆ. ಈ ನಡುವೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಯಾವ ಜಾಗ ಬೆಸ್ಟ್ ಎನ್ನುವ ಬಗ್ಗೆ ಜೋರು ಚರ್ಚೆ ನಡೆದಿದೆ. ಇದರ ನಡುವೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ನಿಗದಿ ಮಾಡಲಾಗಿದ್ದು. ಅದರಲ್ಲಿ ಈ ಜಾಗ ಅತ್ಯಂತ ಸೂಕ್ತ ಎಂದು ಹೇಳಲಾಗುತ್ತಿದೆ. ಹಾಗಾದರೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಯಾವ ಚರ್ಚೆ ನಡೆಯುತ್ತಿದೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಹೊಸ ಅಪ್ಡೇಟ್ ಏನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳು ನಡೆದಿರುವಾಗಲೇ ಕನಕಪುರ ಹಾಗೂ ನೆಲಮಂಗಲ ಎರಡು ಪ್ರದೇಶದಲ್ಲಿ ಯಾವ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಬೆಸ್ಟ್ ಎನ್ನುವ ಬಗ್ಗೆ ಜೋರು ಚರ್ಚೆಗಳು ನಡೆದಿವೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದಾದ್ಯಂತ ಸುದ್ದಿ ಮಾಡುತ್ತಿದೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲಿಸ್ಟ್‌ನಲ್ಲಿ ಕನಕಪುರ - ಕುಣಿಗಲ್ ಹಾಗೂ ನೆಲಮಂಗಲ ಭಾಗದಲ್ಲಿ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಆದರೆ, ಇನ್ನೂ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಪರಿಶೀಲನೆ ಹಾಗೂ ಅನುಮೋದನೆಯನ್ನು ನೀಡಬೇಕಿದೆ.

ಇದರ ನಡುವೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಲಮಂಗಲದಲ್ಲಿ ನಿರ್ಮಾಣ ಮಾಡಿದರೆ ಏನೆಲ್ಲಾ ಅನುಕೂಲ ಹಾಗೂ ಇಲ್ಲಿ ವಿಮಾನ ನಿಲ್ದಾಣ ಯಾಕೆ ನಿರ್ಮಾಣವಾಗಬೇಕು ಎನ್ನುವ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ನೆಲಮಂಗಲದ ಸೋಲೂರು ಬಳಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಐಟಿ ವಲಯ ಅಭಿವೃದ್ಧಿ: ಬೆಂಗಳೂರಿನಲ್ಲಿ ಈಗ ಐಟಿ ಕೇಂದ್ರಿತವಾಗಿದ್ದು. ಐಟಿ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಲಮಂಗಲ ಭಾಗದಲ್ಲಿ ಮಾಡುವುದರಿಂದಾಗಿ ಬೆಂಗಳೂರು ಮಾತ್ರವಲ್ಲ ಸುತ್ತಮುತ್ತಲಿನ ಭಾಗದ ಜನರಿಗೂ ವಿಮಾನ ನಿಲ್ದಾಣದ ಸೇವೆ ಸಿಗಲಿದೆ. ಅಲ್ಲದೆ ಎಲ್ಲಕ್ಕಿಂತ ಹೆಚ್ಚಾಗಿ ತುಮಕೂರು ಹಾಗೂ ನೆಲಮಂಗಲ ಭಾಗಕ್ಕೂ ಐಟಿ ವಲಯ ಅಭಿವೃದ್ಧಿಯಾಗಿ. ಐಟಿಯಲ್ಲಿ ಮಹತ್ವದ ಕ್ರಾಂತಿ ಆಗಲಿದೆ. ಅಲ್ಲದೆ ಟೈರ್ 2 ಹಾಗೂ ಟೈರ್ 3 ಸಿಟಿಗಳಿಗೂ ಅನುಕೂಲವಾಗಿದೆ ಎಂದು ಅಂದಾಜಿಸಲಾಗಿದೆ.
ಇನ್ನುಳಿದ ಭಾಗದಲ್ಲಿ ಟ್ರಾಫಿಕ್ ಜಾಮ್: ಬೆಂಗಳೂರಿನ ಈಗ ಇರುವ ವಿಮಾನ ನಿಲ್ದಾಣಕ್ಕೆ ನೇರ ಅಥವಾ ಎಂಡ್ ಟು ಎಂಡ್ ಕನೆಕ್ಟಿವಿಟಿ ಇಲ್ಲ. ಅಲ್ಲದೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವುದಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಅಲ್ಲದೇ ಇದೀಗ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ ಕನಕಪುರ ರಸ್ತೆ ಹಾಗೂ ಹಾರೋಹಳ್ಳಿ ಭಾಗದಲ್ಲೂ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ನೆಲಮಂಗಲವೂ ಇದೆಲ್ಲದ್ದಕ್ಕಿಂತ ಭಿನ್ನ ಹಾಗೂ ಅನುಕೂಲಕರವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications