ಬೆಂಗಳೂರು ರಸ್ತೆ ಅಪಘಾತ: ಮೃತರಲ್ಲಿ ಶೇ.40ರಷ್ಟು ಪಾದಚಾರಿಗಳು
ಬೆಂಗಳೂರು, ಜನವರಿ 7: ಬೆಂಗಳೂರಲ್ಲಿ 2018ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ಶೇ.40ರಷ್ಟು ಪಾದಚಾರಿಗಳಾಗಿದ್ದಾರೆ ಎನ್ನುವ ಮಾಹಿತಿ ಟ್ರಾಫಿಕ್ ಪೊಲೀಸ್ ಡಾಟಾ ಮೂಲಕ ತಿಳಿದುಬಂದಿದೆ.
2018ರಲ್ಲಿ ಒಟ್ಟು 684 ಅಪಘಾತಗಳು ಸಂಭವಿಸಿದ್ದು ಅದರಲ್ಲಿ 276 ಮಂದಿ ಪಾದಚಾರಿಗಳು ಮೃತಪಟ್ಟಿದ್ದಾರೆ. ಅದರಲ್ಲಿ ಡಿಸೆಂಬರ್ ತಿಂಗಳಲ್ಲೇ 29 ಮಂದಿ ಸಾವನ್ನಪ್ಪಿದ್ದಾರೆ.
ಹಲಸೂರು, ಇಂದಿರಾನಗರ, ಕೆಆರ್‌ಪುರಂ, ಫ್ರೇಜರ್ ಟೌನ್, ಶಿವಾಜಿನಗರ, ಕೆಜಿ ಹಳ್ಳಿ 111 ಮಂದಿ ಪಾದಚಾರಿಗಳು ಮೃತಪಟ್ಟಿದ್ದಾರೆ.
ಉಪ್ಪಾರಪೇಟೆ, ಚಿಕ್ಕಪೇಟೆ, ಮಾಗಡಿ ರಸ್ತೆ, ವಿಜಯನಗರ, ಬ್ಯಾಟರಾಯನಪುರ, ಕಾಮಾಕ್ಷಿ ಪಾಳ್ಯ, ಕೆಂಗೇರಿಯಲ್ಲಿ ಒಟ್ಟು 75 ಮಂದಿ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಒಟ್ಟು 47 ಮಂದಿ ಪಾದಚಾರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅದರಲ್ಲಿ ಶೇ.60 ರಷ್ಟು ರಸ್ತೆಯನ್ನು ದಾಟುವಾಗ ಸಂಭವಿಸಿದೆ. ಹಾಗಾಗಿ ಬೆಂಗಳೂರಿನಾದ್ಯಂತ ಸಿಗ್ನಲ್fಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ. 2 ಸಾವಿರ ಕಿ.ಮೀ ವಿಸ್ತೀರ್ಣದ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಬೇಕಿದೆ.












Click it and Unblock the Notifications