Bengaluru Rent House: ಬೆಂಗಳೂರಿನ ಈ ಭಾಗದಲ್ಲಿ ಮನೆ ಬಾಡಿಗೆ ಏಕಾಏಕಿ ದುಬಾರಿ!
Bengaluru Rent House: ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಬೆಲೆ ಹಾಗೂ ಭೂಮಿ, ಮನೆಗಳ ಹಾಗೂ ಆಸ್ತಿ ಬೆಲೆ ದಿಢೀರ್ ಹೆಚ್ಚಳವಾಗಿರುವುದು ಈಗಾಗಲೇ ತಿಳಿದಿರುವ ವಿಷಯ. ಆದರೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮನೆಗಳ ಬೆಲೆ ಏಕಾಏಕಿ ಭರ್ಜರಿ ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ತಿಂಗಳಿಗೆ ಇಷ್ಟೊಂದು ಬಾಡಿಗೆ ಯಾರಾದರೂ ಕೊಡುತ್ತಾರೆಯೇ. ಇದೇನು ಹುಚ್ಚುತನ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಏನಿದು ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ದಿಢೀರ್ ಹೆಚ್ಚಳ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಆದರೆ, ಇದೀಗ ಐಟಿ ಉದ್ಯಮಿಯೊಬ್ಬರು ನಗರದಲ್ಲಿ ಕೈಗೆಟುಕುವ ಬಾಡಿಗೆ ಮನೆಯನ್ನು ಹುಡುಕುವುದು ಎಷ್ಟು ಕಷ್ಟವಾಗಿದೆ. ಅಲ್ಲದೇ ಕೆಲವು ಮನೆ ಮಾಲೀಕರು (ಆಸ್ತಿದಾರರು) ಹೇಗೆ ಬೇಕಾಬಿಟ್ಟಿ ಬಾಡಿಗೆ ನಿಗದಿ ಮಾಡುತ್ತಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಮನೆಗಳ ಬಾಡಿಗೆ ಬೆಂಗಳೂರಿನಲ್ಲಿ ವಿಪರೀತವಾಗಿ ಹೆಚ್ಚಳವಾಗಿದೆ. ಆನ್‌ಲೈನ್‌ನಲ್ಲಿ ನೆಟ್ಟಿಗರೊಬ್ಬರು ಈ ವಿಷಯವನ್ನು ಹಂಚಿಕೊಂಡ ಮೇಲೆ ಹಲವರು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವಾಗ ತಮಗೂ ಇದೇ ಅನುಭವ ಆಗಿರುವುದಾಗಿ ಹೇಳಿದ್ದಾರೆ.

ಸ್ಟಾರ್ಟ್‌ಅಪ್‌ನಲ್ಲಿ ಉತ್ಪನ್ನ ಡಿಸೈನರ್ ಆಗಿರುವ ಸಾಹಿಲ್ ಖಾನ್ ಎನ್ನುವವರು ಬೆಂಗಳೂರಿನಲ್ಲಿ ಮನೆ ಹುಡುಕಾಟದ ಸಮಯದಲ್ಲಿ ಏನೆಲ್ಲಾ ಸಮಸ್ಯೆಗಳಾದವು ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದು. ಬೆಂಗಳೂರಿನ ಹಲವರು ಹೌದು ಬಾಡಿಗೆ ಮನೆ ಹುಡುಕುವಾಗ ನಾವೂ ಇದೇ ಸಮಸ್ಯೆ ಅನುಭವಿಸಿದ್ದೇವೆ.
ಮಧ್ಯಮ ವರ್ಗದವರು ಬೆಂಗಳೂರಿನಲ್ಲಿ ಮನೆ ಹುಡುಕುವುದು ಸುಲಭದ ವಿಚಾರವಲ್ಲ ಎಂದಿದ್ದಾರೆ. "ಬೆಂಗಳೂರಿನ ಕೂಕ್‌ಟೌನ್ ( Cooke Town)ನಲ್ಲಿ 3 ಬಿಎಚ್‌ಕೆಗೆ ಮನೆ ಮಾಲೀಕರು ಪ್ರತಿ ತಿಂಗಳಿಗೆ ಬರೋಬ್ಬರಿ 1 ಲಕ್ಷ ಬಾಡಿಗೆ ಕೇಳುತ್ತಿದ್ದಾರೆ. ಜನರು ಹುಚ್ಚರಾಗಿದ್ದಾರೆಯೇ?" ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ.
ಮುಂಬೈಗೆ ಬನ್ನಿ.... ಬೆಂಗಳೂರಿನಲ್ಲಿ ಮನೆ ಬಾಡಿಗೆ ಏನೇನೂ ಅಲ್ಲ!
ಇನ್ನು ಈ ಪೋಸ್ಟ್‌ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬೈಗೆ ಬನ್ನಿ ಬ್ರೋ 1 ಲಕ್ಷಕ್ಕೆ 2 ಬಿಎಚ್‌ಕೆ ಸಿಗಲಿದೆ. ಮನೆ ಅಡ್ವಾನ್ಸ್ ಕೇವಲ ಶೇ 30% ಕೂಡ ಎಂದಿದ್ದಾರೆ. ಮುಂಬೈಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ತುಂಬಾ ಕಡಿಮೆ ಎಂದೂ ಕೆಲವರು ಹೇಳಿದ್ದಾರೆ. ಮನೆಗಳ ಬಾಡಿಗೆ ಹೆಚ್ಚಾಗುತ್ತಿರುವುದರಿಂದ ಕೆಲವರು ಮನೆಗಳನ್ನು ಖರೀದಿ ಮಾಡುವಂತಾಗಿದೆ. ಇನ್ನೂ ಕೆಲವರು ಬೆಂಗಳೂರನ್ನು ದೆಹಲಿ ಎನ್‌ಸಿಆರ್‌ಗೆ ಹೋಲಿಸಿದರು, ಅಲ್ಲಿನ ಬಾಡಿಗೆಗಳು ಮತ್ತು ಠೇವಣಿಗಳು ಹೆಚ್ಚು ಸಮಂಜಸವಾಗಿವೆ ಎಂದಿದ್ದಾರೆ.
Landlords are asking for 1L rent in Cooke Town for a 3bhk. Have people lost their minds?
— Sahil Khan (@sahilk) November 18, 2025
ಇತ್ತೀಚಿನ ದಿನಗಳಲ್ಲಿ ಮನೆ ಬಾಡಿಗೆ ಹೆಚ್ಚಳ
ಇನ್ನು ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಮುಖ್ಯವಾಗಿ ಕೋವಿಡ್ ನಂತರ ಮನೆಗಳ ಬಾಡಿಗೆ ಹಾಗೂ ಅಡ್ವಾನ್ಸ್ ಭರ್ಜರಿ ಹೆಚ್ಚಳವಾಗಿದೆ ಎಂದು ಕೆಲವರು ಹೇಳಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನ ಆಸ್ತ ಹಾಗೂ ಬಾಡಿಗೆ ಬೆಲೆ ಹಲವು ಪಟ್ಟು ಹೆಚ್ಚಳವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಸ್ವಂತ ಮನೆ ಆಸೆ: ಬೆಂಗಳೂರಿನಲ್ಲಿ ವಿವಿಧ ಪ್ರದೇಶಗಳಲ್ಲಿ ಮನೆಗಳ ಬಾಡಿಗೆ ಬೆಲೆ ಹೆಚ್ಚಳವಾಗುತ್ತಿರುವುದು ಹಾಗೂ ಕೆಲವು ಮನೆಗಳ ಮಾಲೀಕರ ಕಿರಿಕಿರಿಯಿಂದಾಗಿ ಹಲವು ಮಧ್ಯಮ ವರ್ಗದವರು ಸ್ವಂತ ಮನೆಯ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications