Bengaluru Rental: ಬೆಂಗಳೂರು ಬಾಡಿಗೆದಾರರಿಗೆ ಹೊಸ ಸಂಕಷ್ಟ; ಈ ಕಾರಣಕ್ಕೆ ಪೂರ್ಣ ಅಡ್ವಾನ್ಸ್ ಹಣ ತೆಗೆದುಕೊಂಡ ಮನೆ ಮಾಲೀಕ
Bengaluru Rental: ಬೆಂಗಳೂರಿನಲ್ಲಿ ಬಾಡಿಗೆದಾರರು ಬಾಡಿಗೆ ಮನೆ ಹುಡುಕುವುದಕ್ಕೆ ಸರ್ಕಸ್ ನಡೆಸಬೇಕಾಗಿದೆ. ಆದರೆ ಇದೀಗ ಬಾಡಿಗೆ ಹಣ ಹಾಗೂ ಬಾಡಿಗೆ ಮನೆ ಪಡೆಯುವ ಸಂದರ್ಭದಲ್ಲಿ ನೀಡಲಾಗಿದ್ದ ಮುಂಗಡ ಹಣ ಪಡೆದುಕೊಳ್ಳುವುದಕ್ಕೂ ಒದ್ದಾಡುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ಬಾಡಿಗೆ ಮನೆ ಬಿಡುವಾಗ ಬಾಡಿಗೆದಾರರ ಅಡ್ವಾನ್ಸ್ ಹಣವನ್ನು ಹಿಂದಿರುಗಿಸುತ್ತಿಲ್ಲ. ಬದಲಿಗೆ ಮನೆ ನಿವರ್ಹಣೆ ಹೆಸರಿನಲ್ಲಿ ಸಾವಿರಾರು ರೂಪಾಯಿ ಹಣವನ್ನು ಹಿಡಿದುಕೊಳ್ಳುತ್ತಿದ್ದರು. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಚರ್ಚೆಗಳು ಶುರುವಾಗಿವೆ.
ಬೆಂಗಳೂರಿನ ಬಾಡಿಗೆದಾರರೊಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಮನೆ ಮಾಲೀಕರು, ಬಾಡಿಗೆ ಮನೆಯನ್ನು ಖಾಲಿ ಮಾಡಿದ ನಂತರ ಪೇಂಟಿಂಗ್ ಮತ್ತು ಮನೆ ದುರಸ್ತಿ ಹೆಸರಿನಲ್ಲಿ ಸಂಪೂರ್ಣ ಭದ್ರತಾ ಠೇವಣಿ (ಅಡ್ವಾನ್ಸ್ - ಮುಂಗಡ ಹಣ)ವನ್ನು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೊದಲೆಲ್ಲ ಬೆಂಗಳೂರಿನಲ್ಲಿ ಅಡ್ವಾನ್ಸ್ ಹಣವನ್ನು ಹೆಚ್ಚು ಹಿಡಿದುಕೊಳ್ಳುತ್ತಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೂ ಹೆಚ್ಚು ಹಣ ಕಡಿತ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದವು. ಇದೀಗ ಸಂಪೂರ್ಣ ಅಡ್ವಾನ್ಸ್ ಹಣವನ್ನು ತೆಗೆದುಕೊಳ್ಳುತ್ತಿರುವುದು ಬಾಡಿಗೆದಾರರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಒಪ್ಪಂದದ ಪ್ರಕಾರ ನೋಟಿಸ್ ಅವಧಿಗೆ ಒಂದು ತಿಂಗಳ ಬಾಡಿಗೆಯನ್ನು ಕಡಿತಗೊಳಿಸಲಾಗಿದೆ. ಇದರ ಹೊರತಾಗಿ ಮನೆ ಮಾಲೀಕರು ಪೇಂಟಿಂಗ್ ಮತ್ತು ನಿರ್ವಹಣೆಗಾಗಿ ಹೆಚ್ಚುವರಿ ತಿಂಗಳ ಬಾಡಿಗೆಯನ್ನು ಕಟ್ ಮಾಡಿದ್ದಾರೆ.
ಬೆಂಗಳೂರು ಬಾಡಿಗೆದಾರರು ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ ?
ಇನ್ನು ಬೆಂಗಳೂರಿನಲ್ಲಿ ಆಸ್ತಿ ಮಾಲೀಕರು ಎದುರಿಸಿದ ಸಮಸ್ಯೆಯ ಬಗ್ಗೆ ಬಾಡಿಗೆದಾರರು ವಿಸ್ತೃತವಾಗಿ ವಿವರಿಸಿದ್ದಾರೆ. ನಾನು ಇತ್ತೀಚೆಗೆ ನನ್ನ ಬಾಡಿಗೆಯನ್ನು ಖಾಲಿ ಮಾಡಿದ್ದೇನೆ. ನನ್ನ ಮನೆ ಮಾಲೀಕರು ನನ್ನ ಪೂರ್ಣ ಭದ್ರತಾ ಠೇವಣಿಯನ್ನು ಹಿಂದಿರುಗಿಸಲು ನಿರಾಕರಿಸುತ್ತಿದ್ದಾರೆ. ಅವರು 1 ತಿಂಗಳ ಬಾಡಿಗೆಯನ್ನು ಕಡಿತಗೊಳಿಸಿದ್ದಾರೆ (ಇದು ನೋಟಿಸ್ ಅವಧಿಗೆ ಎಂದು ಹೇಳುತ್ತಿದ್ದಾರೆ), ಇದು ಬಾಡಿಗೆ ಒಪ್ಪಂದದ ಪ್ರಕಾರ ಸರಿಯಾಗಿದೆ.
ಅಲ್ಲದೆ ಮನೆ ಮಾಲೀಕರು ಮನೆಯ ಪೇಂಟಿಂಗ್/ನಿರ್ವಹಣೆಗಾಗಿ ಮತ್ತೆ 1 ತಿಂಗಳ ಬಾಡಿಗೆಯನ್ನು ಕಡಿತಗೊಳಿಸಿದ್ದಾರೆ. ನನ್ನ ಅಡ್ವಾನ್ಸ್ ಹಣದಿಂದ 2 ತಿಂಗಳ ಬಾಡಿಗೆಯನ್ನು ತೆಗೆದುಕೊಂಡಿದ್ದಾರೆ. ಈ ರೀತಿ ಮಾಡುವುದು ಸರಿಯೇ. ಈ ರೀತಿ ಕಾನೂನಿನಲ್ಲಿ ಇದೆಯೇ ಎಂದು ಬೆಂಗಳೂರಿನ ಬಾಡಿಗೆ ಮನೆದಾರರು ರೆಡ್ಡಿಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಇನ್ನು ಈ ವಿಷಯಕ್ಕೆ ಹಲವು ನೆಟ್ಟಿಗರು ಹೌದು ಬೆಂಗಳೂರಿನಲ್ಲಿ ಈ ರೀತಿಯ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಹೌದು, ಇದು ಸಾಮಾನ್ಯ ವಿಷಯ. ಇದಕ್ಕಾಗಿಯೇ ಯಾರೂ 11 ತಿಂಗಳ ಮೊದಲು ಮನೆ ಖಾಲಿ ಮಾಡುವುದಿಲ್ಲ. ಅಲ್ಲದೆ ಅವರು ಯಾವಾಗಲೂ ಒಂದು ತಿಂಗಳು ಕಡಿತಗೊಳಿಸುತ್ತಾರೆ. ಅಲ್ಲದೆ ಮನೆ ಮಾಲೀಕರು ಬಾಡಿಗೆದಾರರಿಂದ ಪೇಂಟಿಂಗ್ ಎಂದು ಒಂದು ತಿಂಗಳ ಹಣವನ್ನು ಹಿಡಿದುಕೊಳ್ಳುತ್ತಾರೆ. ನೀವು 3 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ನೀಡಿದಾಗ ಹಾಗೂ 11 ತಿಂಗಳು ಬಾಡಿಗೆ ಮನೆಯಲ್ಲಿ ಇದ್ದಾಗ ಮಾತ್ರ ಉತ್ತಮ ವ್ಯವಹಾರ ನಡೆಸಲು ಸಾಧ್ಯ ಎಂದಿದ್ದಾರೆ.














Click it and Unblock the Notifications