Bengaluru Rent: ಬೆಂಗಳೂರು ಬಾಡಿಗೆ, ಅಡ್ವಾನ್ಸ್ ದುಬಾರಿ: ದೆಹಲಿ, ಮುಂಬೈನಲ್ಲಿ ಇಷ್ಟಿಲ್ಲ, ನಾರ್ಥಿ ಯುವತಿ ವೈರಲ್ ವಿಡಿಯೋ
Bengaluru Rent: ಬೆಂಗಳೂರಿನಲ್ಲಿ ಮನೆ ಬಾಡಿಗೆ ಹಾಗೂ ಮುಂಗಡ ಹಣ (Rental House Advance) ಎರಡೂ ಸಹ ಏಕಾಏಕಿ ಹೆಚ್ಚಳವಾಗಿದೆ. ಅದರಲ್ಲೂ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಬಾಡಿಗೆ ಮನೆಗಳ ಅಡ್ವಾನ್ಸ್ ವಿಪರೀತವಾಗಿದೆ. ಬೆಂಗಳೂರು ಮೂಲದ ಕಂಟೆಂಟ್ ಕ್ರಿಯೇಟರ್‌ವೊಬ್ಬರು ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಅಡ್ವಾನ್ಸ್ ದುಬಾರಿ ಆಗಿರುವ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ವಿಷಯವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಸಾರ್ವಜನಿಕರು ಸಹ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಅಡ್ವಾನ್ಸ್ ಇಷ್ಟೊಂದು ದುಬಾರಿ ಆಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಮನೆ ಬಾಡಿಗೆ ಹಾಗೂ ಮನೆಗಳ ಅಡ್ವಾನ್ಸ್ ಸಹ ಹೆಚ್ಚಳವಾಗಿದೆ. ಆದರೆ ಈ ಹೆಚ್ಚಳವು ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮನೆ ಹುಡುಕಾಟದ ಸವಾಲುಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಉಪಾಸನಾ ಡೋಗ್ರಾ upasna_dogra ಎನ್ನುವ ಖಾತೆಯಿಂದ ಯುವತಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹೆಚ್ಚಿನ ಬಾಡಿಗೆ ಮತ್ತು ಭದ್ರತಾ ಠೇವಣಿಗಳು ಇಲ್ಲದ ಹಾಗೂ ಕೈಗೆಟುಕುವ ಮನೆಯನ್ನು ಹುಡುಕುವುದು ಹೆಚ್ಚು ಕಷ್ಟಕರವಾಗಿದೆ. ಉಪಾಸನಾ ಡೋಗ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಬಾಡಿಗೆಗೆ ಮನೆಯನ್ನು ಹುಡುಕುವುದು ಎಷ್ಟು ಸವಾಲಿನ ಕೆಲಸವಾಗಿದೆ ಎನ್ನುವುದನ್ನು ಅವರು ವಿವರಿಸಿದ್ದಾರೆ. ಇದು ಹಲವು ವರ್ಷಗಳಲ್ಲಿ ಅವರ ಮೂರನೇ ಬಾಡಿಗೆ ಮನೆಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ದುರದೃಷ್ಟವಶಾತ್, ಅವರ ಮನೆ ಹುಡುಕಾಟದ ಅನ್ವೇಷಣೆಯು ಆರಂಭದಿಂದಲೂ ಸಮಸ್ಯೆಗಳು ಎದುರಾಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಉಪಾಸನಾ ಅವರು ಬಾಡಿಗೆ ಮನೆಯನ್ನು ಹುಡುಕುವುದರಲ್ಲಿ ಇರುವ ಬಹುದೊಡ್ಡ ಸಮಸ್ಯೆಯೆಂದರೆ ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡುವುದು. ಬೆಂಗಳೂರಿನಲ್ಲಿ ದುಬಾರಿ ಅಡ್ವಾನ್ಸ್‌ನ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
Bengaluru Rent: 3 ಲಕ್ಷ ರೂಪಾಯಿ ಭದ್ರತಾ ಠೇವಣಿ
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮನೆ ಬಾಡಿಗೆ ಹೆಚ್ಚಾಗುವುದರೊಂದಿಗೆ ಮನೆಗಳ ಅಡ್ವಾನ್ಸ್ ಸಹ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ವೊಂದರ ಭದ್ರತಾ ಠೇವಣಿ / ಅಡ್ವಾನ್ಸ್ ₹3 ಲಕ್ಷ ಇದೆ ಎಂದು ಮಾಲೀಕರೊಬ್ಬರು ಹೇಳಿದರು ಎಂದು ಅವರು ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಬೆಲೆಯನ್ನು ಕೇಳಿದಾಗ ಉಪಾಸನಾಳ ಅವರು ಹತಾಶೆ ಆಗಿರುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಠೇವಣಿ ಏಕೆ ಇಷ್ಟೊಂದು ಹೆಚ್ಚಾಗಿದೆ ಎಂಬುದರ ಕುರಿತು ನಾನು ಮಾತನಾಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ನಾನು ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ನನ್ನ ಇತರ ಸ್ನೇಹಿತರು ಸಹ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಠೇವಣಿ ನಿಮ್ಮ ಬಾಡಿಗೆಗಿಂತ 10 ಪಟ್ಟು ಹೆಚ್ಚು ಇಲ್ಲ. ಆದರೆ ಇಲ್ಲಿ ಮಾತ್ರ ಯಾಕೆ ಇಷ್ಟೊಂದು 3 ಲಕ್ಷ ಠೇವಣಿ, 3 ಲಕ್ಷ ಅಂದರೆ ತಮಾಷೆಯೇ ಎಂದು ಅವರು ಕೇಳಿದ್ದಾರೆ.












Click it and Unblock the Notifications