Bengaluru Rent: ಬೆಂಗಳೂರಲ್ಲಿ ತಿಂಗಳ ಬಾಡಿಗೆ 35,000 ಕೊಟ್ಟರೂ "ಮೂರ್ಖ" ಎಂದ ಮನೆ ಮಾಲೀಕ, ಕಾರಣವೇನು
Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಾಗೂ ಫ್ಲಾಟ್‌ಗಳ ಬಾಡಿಗೆ ವಿಚಾರದಲ್ಲಿ ಸಮಸ್ಯೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಬಾಡಿಗೆದಾರರು ಆಸ್ತಿದಾರರಿಂದ ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರಿನ ಬಾಡಿಗೆದಾರರೊಬ್ಬರು ಗಾಳಿ ಮತ್ತು ಬೆಳಕು ಇಲ್ಲದ ಫ್ಲಾಟ್‌ಗೆ ತಿಂಗಳಿಗೆ 35,000 ರೂ. ಪಾವತಿಸಿದ್ದರೂ, ಕನಿಷ್ಠ ಸೌಲಭ್ಯ ಇಲ್ಲದೆ ಸಮಸ್ಯೆ ಎದುರಿಸಿರುವುದನ್ನು ವಿವರಿಸಿದ್ದಾರೆ. ಅಲ್ಲದೆ ಫ್ಲಾಟ್‌ನಲ್ಲಿ ಗಾಳಿ ಮತ್ತು ಬೆಳಕಿನ ಸಮಸ್ಯೆ ವಿಪರೀತವಾಗಿತ್ತು. ಏರ್ ಕಂಡಿಷನರ್ ಹೆಚ್ಚು ಬಳಸಿದ್ದಕ್ಕಾಗಿ ಮನೆ ಮಾಲೀಕರು ಬಾಡಿಗೆದಾರರನ್ನು ಅವಮಾನಿಸಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾ ರೆಡ್ಡಿಟ್ ಪೋಸ್ಟ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಅವರು, ಬಾಡಿಗೆದಾರರು ಬೆಂಗಳೂರಿನ ಕೋರಮಂಗಲದ ಸ್ಟುಡಿಯೋ ಅಪಾರ್ಟ್‌ಮೆಂಟ್‌ವೊಂದರಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಫ್ಲಾಟ್‌ನಲ್ಲಿ ಸ್ವಲ್ಪವೂ ಗಾಳಿ ಬರುತ್ತಿರಲಿಲ್ಲ. ಬಾಲ್ಕನಿ ಪ್ರದೇಶ ಇಲ್ಲ. ಹೀಗಾಗಿ, ನಾನು ಆ ಫ್ಲಾಟ್‌ನಲ್ಲಿ ಇರುವವರೆಗೆ ಎಸಿ ಬಳಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಬರೆದುಕೊಂಡಿದ್ದಾರೆ. ಬಾಡಿಗೆದಾರರು ಬೆಂಗಳೂರು ನಗರಕ್ಕೆ ಬಂದ ಮೇಲೆ ಹೆಚ್ಚಿನ ಬಾಡಿಗೆ ಮನೆಯಾದರೂ ಸರಿ ಉತ್ತಮ ಮನೆ ಸಿಗಬೇಕು ಎಂದುಕೊಂಡಿದ್ದೆ ಎಂದಿದ್ದಾರೆ. ವಿದ್ಯುತ್ ಮತ್ತು ನೀರಿನ ಸೌಲಭ್ಯವೂ ಸೇರಿಸಿ ಬಾಡಿಗೆ ಮನೆ ಸಿಗುತ್ತಿರುವುದರಿಂದ ಈ ಫ್ಲಾಟ್ ಆರಾಮದಾಯಕವಾಗಿರುತ್ತದೆ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಟುಡಿಯೋ ಅಪಾರ್ಟ್‌ಮೆಂಟ್ ಫ್ಲಾಟ್‌ಗೆ ನಾನು ಪ್ರತಿ ತಿಂಗಳು 35 ಸಾವಿರ ಪಾವತಿಸುತ್ತಿದ್ದೇನೆ. ಇದು ತುಂಬಾ ಚಿಕ್ಕದಾಗಿದೆ, ಬಾಲ್ಕನಿ ಇಲ್ಲ ಮತ್ತು ಯಾವುದೇ ಉತ್ತಮ ವಾತಾವರಣ ಇಲ್ಲಿ ಇಲ್ಲ.
ನಾನು ಇತ್ತೀಚೆಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರಿಂದ ಮತ್ತು ನಗರದ ಬಗ್ಗೆ ಹೆಚ್ಚು ತಿಳಿಯದೆ ಇರುವ ಕಾರಣಕ್ಕೆ ನಾನು ಈ ಫ್ಲಾಟ್‌ಅನ್ನು ಬಾಡಿಗೆಗೆ ಪಡೆಯುವುದಕ್ಕೆ ಒಪ್ಪಿಕೊಂಡಿದ್ದೆ ಎಂದು ರೆಡ್ಡಿಟರ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಫ್ಲಾಟ್ ಸಂಪೂರ್ಣವಾಗಿ ಸುಸಜ್ಜಿತವಾಗಿದೆ ಮತ್ತು ಎಸಿ ಸೌಲಭ್ಯ ಇದೆ. ಬಾಡಿಗೆ, ವಿದ್ಯುತ್ ಮತ್ತು ನೀರಿನ ಬಿಲ್‌ನಲ್ಲಿ ಎಲ್ಲವನ್ನೂ ಸೇರಿಸಿ ಮಾಸಿಕವಾಗಿ 35,000 ರೂ. ಪಾವತಿ ಮಾಡಬೇಕು ಎಂದು ಆಸ್ತಿದಾರರು / ಮನೆ ಮಾಲೀಕರು ತಿಳಿಸಿದ್ದರು ಎಂದು ಬಾಡಿಗೆದಾರರು ಬರೆದುಕೊಂಡಿದ್ದಾರೆ.
ಮುಂದುವರಿದು ನಮಗೆ ಇರುವ ಉಚಿತ ವಿದ್ಯುತ್ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೇನೆ ಮತ್ತು ಹೆಚ್ಚು ಎಸಿ ಬಳಸುತ್ತಿದ್ದೇನೆ ಎಂದು ಅವರು ದೂರಿದ್ದಾರೆ. ಅಷ್ಟೇ ಅಲ್ಲ ಹೆಚ್ಚು ವಿದ್ಯುತ್ ಬಳಸಿದ್ದಕ್ಕಾಗಿ ನನ್ನನ್ನು ಮೂರ್ಖ - ದಡ್ಡ ಎಂದು ಕರೆದರು. ಖಂಡಿತವಾಗಿಯೂ ಗಾಳಿಯೇ ಇಲ್ಲದೆ ಇರುವ ಫ್ಲಾಟ್‌ನಲ್ಲಿ ನಾನು ಎಸಿ ಬಳಸುವುದನ್ನು ಬಿಟ್ಟು ನನಗೆ ಬೇರೆ ದಾರಿಯೇ ಇರಲಿಲ್ಲ ಎಂದು ಫ್ಲಾಟ್‌ನ ಬಾಡಿಗೆದಾರರು ಹೇಳಿದ್ದಾರೆ.
ಈ ರೀತಿಯ ಫ್ಲಾಟ್‌ಗೆ ನಾನು ತುಂಬಾ ಪಾವತಿ ಮಾಡಿದ್ದೇನೆ ಎಂದು ತಡವಾಗಿ ಅರ್ಥವಾಯಿತು ಎಂದು ಅವರು ಸೋಶಿಯಲ್ ಮೀಡಿಯಾ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಏನೇ ಇರಲಿ, ನನಗೆ ನಿಮ್ಮಿಂದ ಸಹಾಯ ಬೇಕು. ನಾನು ಈ ತಿಂಗಳ ಅಂತ್ಯದ ವೇಳೆಗೆ ಫ್ಲಾಟ್ ಅನ್ನು ಖಾಲಿ ಮಾಡುತ್ತಿದ್ದೇನೆ ಮತ್ತು ಆದಷ್ಟು ಬೇಗ ಇನ್ನೊಂದುದನ್ನು ಹುಡುಕಬೇಕಾಗಿದೆ ಎಂದೂ ಅವರು ರೆಡ್ಡಿಟರ್‌ನಕಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications