Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್‌

Bengaluru Rent House: ಬೆಂಗಳೂರಿನಲ್ಲಿ ಬಾಡಿಗೆ ಮನೆ ಸಿಗುವುದು ಇಂದಿಗೂ ಸವಾಲಾಗಿದೆ. ಆದರೆ ಕಡಿಮೆ ಬೆಲೆಗೆ ಬಾಡಿಗೆ ಸಿಗುವುದಿರಲಿ, 30,000 ರೂ. ಕೊಟ್ಟರೂ ಬೆಂಗಳೂರಿನಲ್ಲಿ ಒಳ್ಳೆಯ ಬಾಡಿಗೆ ಮನೆ ಸಿಗುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಹೇಳಿದ್ದಾರೆ. ರೆಡ್ಡಿಟ್ ಪೋಸ್ಟ್‌ನಲ್ಲಿ ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. 28,000 ರೂ.ದಿಂದ 32,000 ರೂ. ಮೊತ್ತದ ಬಾಡಿಗೆ / ಅಪಾರ್ಟ್‌ಮೆಂಟ್‌ಗಳಲ್ಲೂ ಸಂಪೂರ್ಣವಾಗಿ ಪಾರ್ಕಿಂಗ್ ವ್ಯವಸ್ಥೆ ಇರಲಿಲ್ಲ. ಬಾಲ್ಕನಿ ವ್ಯವಸ್ಥೆಯೂ ಇರಲಿಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

30,000 ರೂ. ಮಾಸಿಕ ಬಾಡಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು, ಯೋಗ್ಯ ಸ್ಥಳ, ಕ್ರಿಯಾತ್ಮಕ ಸೌಕರ್ಯಗಳು ಸಹ ಸಿಗುತ್ತಿಲ್ಲ. ಬೆಂಗಳೂರಿನ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಬಾಡಿಗೆ ಮಾರುಕಟ್ಟೆಯಲ್ಲಿ ಮನೆ ಹುಡುಕುವುದೇ ಸವಾಲಾಗಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಮನೆ ಹುಡುಕುವುದು ಬಹುದೊಡ್ಡ ಸವಾಲಾಗಿದೆ. 30,000 ರೂ. ಬಜೆಟ್ ಹೊರತಾಗಿಯೂ ಬೆಂಗಳೂರಿನಲ್ಲಿ ಒಳ್ಳೆಯ 1BHK ಮನೆ ಹುಡುಕಲು ಸಾಧ್ಯವಾಗಿಲ್ಲ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Bengaluru Rent House

ಬೆಂಗಳೂರಿನಲ್ಲಿ ಮನೆ ಹುಡುಕುವುದು ಮೊದಲ ಕಷ್ಟವಾಗಿದ್ದರೆ ದುಬಾರಿ ಮುಂಗಡ ಹಣ ಹಾಗೂ ದುಬಾರಿ ಮೊತ್ತದ ಬಾಡಿಗೆ ಮತ್ತೊಂದು ತಲೆನೋವಾಗಿದೆ. ಈ ಎಲ್ಲ ಸಮಸ್ಯೆಗಳ ನಡುವೆ ಹಣ ವ್ಯಯಿಸಿದರೂ ಉತ್ತಮ ಬಾಡಿಗೆ ಮನೆಗಳು ಬೆಂಗಳೂರಿನಲ್ಲಿ ಸಿಗದೆ ಇರುವುದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸವಾಲಾಗಿರುವ ಬಗ್ಗೆ ಹಾಗೂ ಬಾಡಿಗೆ ಮನೆಗಳು ಕಡಿಮೆ ಬೆಲೆಗೆ ಸಿಗದೆ ಇರುವ ಬಗ್ಗೆ ಹತಾಶೆ ಹೆಚ್ಚಾಗಿದೆ.

ಬೆಂಗಳೂರಿನ ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್, ಮಾರತಹಳ್ಳಿ, ಎಇಸಿಎಸ್ ಲೇಔಟ್ ಹಾಗೂ ಸರ್ಜಾಪುರದಂತಹ ಪ್ರದೇಶ, ಕಾಡುಬೀಸನಹಳ್ಳಿಯ ಆರು ಕಿ.ಮೀ ವ್ಯಾಪ್ತಿಯಲ್ಲಿ ಮನೆ ಹುಡುಕಿದರೂ ಮನೆ ಸಿಗಲಿಲ್ಲ. ಒಂದು ಉತ್ತಮ ಫ್ಲಾಟ್‌ಗಾಗಿ ಪರಿದಾಡುವಂತಾಯಿತು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಸರಿಯಾದ ಬಾಲ್ಕನಿ ಹಾಗೂ ನಿರ್ದಿಷ್ಟ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದೆ ಇರುವ ಬಗ್ಗೆ ನೆಟ್ಟಿಗರೊಬ್ಬರು ನೋವು ತೋಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, 28,000 ರೂ.ದಿಂದ 32,000 ರೂ. ಬಾಡಿಗೆ ಇರುವ ಫ್ಲಾಟ್‌ಗಳಲ್ಲಿ ಸರಿಯಾದ ಪಾರ್ಕಿಂಗ್ ಸೌಲಭ್ಯವೇ ಇರಲಿಲ್ಲ. ಅಲ್ಲದೆ ಬಾಲ್ಕನಿ ಎಂದು ಹೇಳಿದ್ದು ವಾಸ್ತವದಲ್ಲಿ ವಾಷಿಂಗ್ ಮೆಷಿನ್ ಇಡುವಷ್ಟು ಕಿರಿದಾದ ಜಾಗವಾಗಿತ್ತು. ನೆಟ್ಟಿಗರ ಪ್ರಕಾರ ಐಷಾರಾಮಿ ಮನೆ ಬೇಕಿಲ್ಲ, ಆದರೆ ಮೂಲಭೂತ ಸೌಲಭ್ಯಗಳ ವಿಷಯದಲ್ಲಿ ಯಾವ ರೀತಿಯ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ಅವರು ಸರಳ ಮತ್ತು ಉಪಯುಕ್ತ 1BHK ಮನೆ ಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಒಬ್ಬ ಬಳಕೆದಾರರು ಶೀಘ್ರದಲ್ಲೇ ನಮಗೆ ಆಫ್ರಿಕನ್ ಸಂಬಳ ಮತ್ತು ಯುರೋಪಿಯನ್ ಬಾಡಿಗೆ ಸಿಗಲಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆಗೂ ಬರುತ್ತಿರುವ ಸಂಬಳಕ್ಕೂ ಹೊಂದಾಣಿಕೆಯೇ ಆಗುತ್ತಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ 1 BHK ಮನೆ ಒಂದು ಹಗರಣ. ಇತರ ಜನರೊಂದಿಗೆ 2/3 BHK ಮನೆ ಪಡೆಯುವುದು ಉತ್ತಮ. ನೀವು ಗರಿಷ್ಠ 25 ಸಾವಿರ ಪಾವತಿಸುತ್ತೀರಿ ಮತ್ತು ನಿಮಗೆ ಬೇಕಾದ ಎಲ್ಲವನ್ನೂ ಹೊಂದಿರುತ್ತೀರಿ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+