Bengaluru Rent: ಬೆಂಗಳೂರಿನ ಈ ಏರಿಯಾಗಳಲ್ಲಿ ಸಂಬಳಕ್ಕಿಂತ ಬಾಡಿಗೆ ದರವೇ ಹೆಚ್ಚು, ಎಲ್ಲೆಲ್ಲಿ?
ಬೆಂಗಳೂರು ಬೆಳೆದಂತೆ ಇಲ್ಲಿನ ಮನೆಗಳ ಬಾಡಿಗೆ ಕೂಡ ಗಗನಕ್ಕೇರಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆಯಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮನೆ ಬಾಡಿಗೆ ದರವು ಡಬಲ್ ಆಗಿದೆ. ಇನ್ನೂ ಕೆಲವೆಡೆ ಎರಡು ಪಟ್ಟಿಗಿಂತ ಅಧಿಕವಾಗಿದೆ. ಈ ಬಗ್ಗೆ ಬಾಡಿಗೆ ಪಾವತಿದಾರರು ಆತಂಕ ವ್ಯಕ್ತಪಡಿಸಿದ್ದು, ತಮ್ಮ ಸಂಬಳದ ಜೊತೆಗೆ ಬಾಡಿಗೆಯನ್ನು ಹೋಲಿಸಿ ಚರ್ಚೆ ನಡೆಸಿದ್ದಾರೆ. ಎರಡು ವರ್ಷದಲ್ಲಿ ಸಂಬಳಕ್ಕಿಂತ ವೇಗವಾಗಿ ಬಾಡಿಗೆ ದರ ಏರಿದೆ ಎಂದಿದ್ದಾರೆ. ಬೆಂಗಳೂರಿಗರು ಉಲ್ಲೇಖಿಸಿರುವಂತೆ ಈ ಏರಿಯಾಗಳಲ್ಲಿ ಮನೆ ಬಾಡಿಗೆ ದರ ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಗೊತ್ತಾ?
ಬೆಂಗಳೂರಿನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಬಾಡಿಗೆ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ಮನೆ ಬಾಡಿಗೆಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಬಾಡಿಗೆಯು ಸಂಬಳಕ್ಕಿಂತ ಹೇಗೆ ಹೆಚ್ಚಾಗುತ್ತಿದ್ದು, ನಗರದಲ್ಲಿ ಜೀವನ ನಡೆಸುವುದು ಭಾರಿ ದುಬಾರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ವೇದಿಕೆ ಗ್ರೇಪ್‌ವೈನ್‌ನಲ್ಲಿನ ಈ ಪೋಸ್ಟ್ ವೈರಲ್ ಆಗಿದೆ. ಬೆಂಗಳೂರಿನ ಮನೆ ಬಾಡಿಗೆಗಳು ಗಗನಕ್ಕೇರುತ್ತಿದ್ದು, ಸಂಬಳದ ಏರಿಕೆಗಿಂತ ವೇಗವಾಗಿ ಹೆಚ್ಚಾಗುತ್ತಿದೆ. ಹಾಗಾಗಿ ನಗರದಲ್ಲಿ ಮನೆ ಖರೀದಿಸುವುದು ಭಾರಿ ಕಷ್ಟಕರವಾಗುತ್ತಿದೆ ಎಂದು ಹೇಳಿದ್ದಾರೆ. "ಬಾಡಿಗೆಗಳು ಸಂಬಳಕ್ಕಿಂತ ವೇಗವಾಗಿ ಹೆಚ್ಚುತ್ತಿವೆ" ಎಂಬ ಟೈಟಲ್‌ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ 3 ಬಿಎಚ್‌ಕೆ ಮನೆಗಳ ಬಾಡಿಗೆ ದರ ಸದ್ಯ ಸುಮಾರು 90,000 ರೂಪಾಯಿಗೆ ತಲುಪಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಸರ್ಜಾಪುರ ರಸ್ತೆ ಹಾಗೂ ಟೆಕ್ ಪಾರ್ಕ್‌ಗಳ ಬಳಿ ಇರುವ ಬೆಳ್ಳಂದೂರು ಭಾಗದಲ್ಲೂ ಅಪಾರ್ಟ್‌ಮೆಂಟ್ ಬಾಡಿಗೆ ದರ ಕನಿಷ್ಠ 70,000 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಎಂದು ಉಲ್ಲೇಖಿಸಿದ್ದಾರೆ. ಈ ಸಮಸ್ಯೆ ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ. ರಾಷ್ಟ್ರ ರಾಜಧಾನಿ ನವದೆಹಲಿಯ ಎನ್‌ಸಿಆರ್ ಹಾಗೂ ಮುಂಬೈನ ಜನರು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿದ್ದಾರೆ.
ವರ್ಷದ ಬಾಡಿಗೆ ನನ್ನ ಸಿಟಿಸಿಗೆ (CTC) ಸಮವಾಗಿದೆ!
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿಗರು, ನಮ್ಮ ವರ್ಷದ ಬಾಡಿಗೆಯು ನನ್ನ ವಾರ್ಷಿಕ ಸಂಬಳಕ್ಕೆ (CTC) ಸಮಾನವಾಗಿದೆ ಎಂದು ತಮ್ಮ ಹತಾಶೆ ಹಂಚಿಕೊಂಡಿದ್ದಾರೆ. ನನಗೆ ಶೇ 8ರಷ್ಟು ಮಾತ್ರ ಸಂಬಳ ಹೆಚ್ಚಾಗಿದ್ದರೆ. ನಮ್ಮ ಬಾಡಿಗೆ ಶೇ 10ರಷ್ಟು ಹೆಚ್ಚಾಗಿದೆ. ನನ್ನ ಸಂಬಳದಲ್ಲೇ ಇದನ್ನು ಸರಿದೂಗಿಸಲು ಸಾಧ್ಯವೇ ಇಲ್ಲ. ನಮ್ಮ ಮನೆಯವರು ಬೇರೆ ಆದಾಯದ ಮೂಲ ಹೊಂದಿರುವುದರಿಂದ ಇದನ್ನು ನಿಭಾಯಿಸುತ್ತಿದ್ದೇವೆ ಎಂದು ಬೆಂಗಳೂರಿನ ನಿವಾಸಿ ಹೇಳಿಕೊಂಡಿದ್ದಾರೆ.

ನಾವು ದುಡಿಯುವ ಬಹುತೇಕ ಹಣ ಈಗ ನಮ್ಮ ಮನೆಮಾಲೀಕರಿಗೆ ಹೋಗುತ್ತಿದೆ. ಬೆಂಗಳೂರಿನಲ್ಲಿ ಈಗ ಬಾಡಿಗೆ ಪಾವತಿಸಲು ಮಾತ್ರವೇ ಕೆಲಸ ಮಾಡುತ್ತಿದ್ದೇನೆ ಎಂದು ಮತ್ತೊಬ್ಬರು ನೋವು ಹಂಚಿಕೊಂಡಿದ್ದಾರೆ. ಬೆಂಗಳೂರು ಅತ್ಯಂತ ದುಬಾರಿ ಬಾಡಿಗೆ ಇರುವ ನಗರಗಳಲ್ಲಿ ಸ್ಥಾನ ಪಡೆದಿದೆ. ಅನರಾಕ್ ಗ್ರೂಪ್‌ನ ದತ್ತಾಂಶ ಹೇಳುವಂತೆ 2022ರಿಂದ 2024ರ ನಡುವೆ ಬೆಂಗಳೂರಿನ ಬಾಡಿಗೆ ದರವು ಬರೋಬ್ಬರಿ ಶೇ 40ಕ್ಕಿಂತಲೂ ಏರಿದೆ ಎಂದು ವರದಿಯಾಗಿದೆ.
ಆಕ್ಸಿಸ್ ಇಕಾರ್ಪ್ ಸಿಇಒ ಆದಿತ್ಯ ಕುಶ್ವಾಹ ಅವರು 2023ರಿಂದ ಬಾಡಿಗೆ ದರಗಳು ಬಹುತೇಕ ದ್ವಿಗುಣಗೊಂಡಿರುವ ಬೆಂಗಳೂರನ್ನು ಬೆಂಗಳೂರನ್ನು ಭಾರತದ ಅತ್ಯಂತ ಬಿಸಿಯಾದ ವಸತಿ ಮಾರುಕಟ್ಟೆ ಎಂದು ಕರೆದಿದ್ದಾರೆ. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹಲವು ಬೆಂಗಳೂರಿನ ಈ ಏರಿಯಾಗಳನ್ನು ಮೊದಲು ತೊರೆದು, ಕಡಿಮೆ ಬಾಡಿಗೆ ಇರುವ ಉಪನಗರಗಳಿಗೆ ಸ್ಥಳಾಂತರಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇಷ್ಟೆಲ್ಲ ಬಾಡಿಗೆ ಕಟ್ಟುವ ಬದಲು ಸುಮ್ಮನೆ ಒಂದು ಮನೆ ಖರೀದಿಸುವುದೇ ಇದಕ್ಕೆಲ್ಲ ದೀರ್ಘಾವಧಿಯ ಪರಿಹಾರ ಎಂದೂ ಹೇಳಿದ್ದಾರೆ.












Click it and Unblock the Notifications