ರಾಪಿಡೋ ಬೈಕ್ ಚಾಲಕ ಓದುವ ಆಸೆಯ ವಿಡಿಯೋ ವೈರಲ್, ಬೆಳೆಯಬೇಕು ಎನ್ನುವ ಬಡವರ ಮಕ್ಕಳ ಲಕ್ಷಣ ಎಂದ ನೆಟ್ಟಿಗರು!
ಬೆಂಗಳೂರಿನಲ್ಲಿ ನಡೆಯುವ ಸಣ್ಣ ಸಣ್ಣ ವಿಚಾರಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹುತೇಕ ನೆಗೆಟಿವ್ ವಿಚಾರಗಳೇ ಟ್ರೆಂಡ್ ಹಾಗೂ ವೈರಲ್ ಆಗುತ್ತಿತ್ತು. ಇದೀಗ ಸಂಜೆ ಸಮಯದಲ್ಲಿ ಯುವಕರೊಬ್ಬರು ರಾಪಿಡೋ ಬೈಕ್ ಚಾಲನೆ ಮಾಡುತ್ತಲ್ಲೇ ಟ್ರಾಫಿಕ್‌ನಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಿಡಿಯೋವನ್ನು ನೋಡುತ್ತಿರುವುದು ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ಹೌದು ಓದುವವರು / ಓದುವುದಕ್ಕೆ ಇಷ್ಟಪಡುವವರು ಎಲ್ಲಿದ್ದರೂ ಅಥವಾ ಎಂಥಹ ಪರಿಸ್ಥಿತಿಯಲ್ಲಿದ್ದರೂ ಓದುವುದನ್ನು ಬಿಡುವುದಿಲ್ಲ ಎನ್ನುವ ಮಾತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಸಹ ಇದೇ ಮಾದರಿಯ ಚರ್ಚೆಯನ್ನು ಸೃಷ್ಟಿ ಮಾಡಿದೆ. ರಾಪಿಡೋ ಬೈಕ್ ಚಾಲಕನ ಓದುವ ಆಸಕ್ತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಈ ರೀತಿ ವಾಹನ ಚಾಲನೆ ಮಾಡಿಕೊಂಡು ಓದುವುದು ಸ್ಪಲ್ಪ ಅಪಾಯಕಾರಿ ಎಂದೂ ಕೆಲವರು ಹೇಳಿದ್ದಾರೆ. ಇಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿ ಏನಿದೆ. ನೆಟ್ಟಿಗರ ಈ ಮಿಶ್ರ ಪ್ರತಿಕ್ರಿಯೆಗೆ ಕಾರಣವೇನು ಎನ್ನುವ ವಿವರ ನೋಡೋಣ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನೀವು ಗಮನಿಸಿರಬಹುದು. ಕೆಲವು ಆಟೋ ಡ್ರೈವರ್‌ಗಳು, ಡೆಲಿವರಿ ಬಾಯ್ಸ್ ಹಾಗೂ ಇನ್ನೂ ಕೆಲವು ವಾಹನ ಸವಾರರು ತಮ್ಮ ಬೈಕ್‌ನ ಹ್ಯಾಂಡಲ್‌ಬಾರ್‌ಗಳಲ್ಲಿ ಫೋನ್ ಸಿಕ್ಕಿಸಿಕೊಂಡು ರೀಲ್ಸ್ ಅಥವಾ ವೈರಲ್ ವಿಡಿಯೋ ನೋಡುವುದು ಮತ್ತು ಹಾಡುಗಳನ್ನು ಕೇಳುವುದನ್ನು ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ರಾಪಿಡೋ ಬೈಕ್ ಚಾಲಕನ ಕೋಡಿಂಗ್‌ಗೆ ಸಂಬಂಧಿಸಿದ ವಿಡಿಯೋ ನೋಡಿ ಓದುತ್ತಿರುವ ವಿಡಿಯೋ ವೈರಲ್ ಆಗಿದೆ. ಎಂದಿನಂತೆ ಸಹಜವಾಗಿ ರಾಪಿಡೋ ಬೈಕ್‌ನಲ್ಲಿ ಹೋಗುವಾಗ ಗಮನಿಸಿದ ವಿಷಯವನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದು ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಪಿಡೋ ಬೈಕ್ ಚಾಲಕನ Node.js ಟ್ಯುಟೋರಿಯಲ್ ಅನ್ನು ಕೇಳುತ್ತಿದ್ದರು ಎನ್ನಲಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿರುವ ಹಲವರು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಸಿಗ್ನಲ್‌ನಲ್ಲಿ ಸವಾರರೊಬ್ಬರು ಇದನ್ನು ಗಮನಿಸಿದ್ದಾರೆ. "ನಿನ್ನೆ ನನ್ನ @rapidobikeapp ಸವಾರ Node.js ಟ್ಯುಟೋರಿಯಲ್ ಅನ್ನು ಕೇಳುತ್ತಿದ್ದರು. ಕೇಳಿದಾಗ, ಅವರು ಈಗಾಗಲೇ ಡೆವಲಪರ್ ಆಗಿದ್ದಾರೆ ಮತ್ತು ಸ್ವಿಚ್‌ಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು. ಕ್ರೇಜಿ ಗ್ರೈಂಡ್ ಮತ್ತು ನನಗೆ @peakbengaluru ಕ್ಷಣ " ಎಂದು ನೆಟ್ಟಿಗರೊಬ್ಬರು ಹಂಚಿಕೊಂಡಿರುವ ವಿಡಿಯೋ ಇದೀಗ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
Yesterday my @rapidobikeapp rider was listening to a Node.js tutorial.
— Vaibhav Gupta (@vaibhav_gup01) November 17, 2025
Upon asking, he told me he’s already a developer and is preparing for a switch.
Crazy grind & a @peakbengaluru moment for me. pic.twitter.com/mMtwWDrzS7
ಬೆಳೆಯಬೇಕು ಎನ್ನುವ ಬಡವರ ಮಕ್ಕಳ ಲಕ್ಷಣ: ಇನ್ನು ಈ ವಿಡಿಯೋವನ್ನು ನೋಡಿರುವ ಹಲವರು ಬೆಳೆಯಬೇಕು ಎನ್ನುವ ಛಲ ಹೊಂದಿರುವ ಮಕ್ಕಳ ಲಕ್ಷಣ ಇದಾಗಿದೆ ಎಂದಿದ್ದಾರೆ. ಆದರೆ ಇನ್ನೂ ಕೆಲವರು ವಾಹನ ಚಲಾಯಿಸುವಾಗ ಎಚ್ಚರಿಕೆಯೂ ಅವಶ್ಯ ಎಂದಿದ್ದಾರೆ.












Click it and Unblock the Notifications