World's Traffic Cities List: ವಿಶ್ವದಲ್ಲೇ ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ಸಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು
World's Traffic Cities List 2024: ಹಲವು ವಿಭಾಗಗಳ ಸಮೀಕ್ಷೆಗಳಂತೆ ಇದೀಗ ಇದೀಗ ವಿಶ್ವದಲ್ಲೇ ಅತೀ ಹೆಚ್ಚು ಟ್ರಾಫಿಕ್ ಇರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾದರೆ ಬೆಂಗಳೂರು ಎಷ್ಟನೇ ಸ್ಥಾನವನ್ನು ಪಡೆದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಇನ್ನು ಈ ಸಮೀಕ್ಷೆಯನ್ನು ಇಂಡೆಕ್ಸ್ ನಡೆಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಅಂದರೆ ಮೊದಲು ನೆನಪಾಗುವುದೇ ಟ್ರಾಫಿಕ್. ಇಲ್ಲಿನ ಜನರು ಹೊರಗಡೆ ಹೋಗಿ ಮತ್ತೆ ತಮ್ಮ ಗಮ್ಯ ಸ್ಥಾನಕ್ಕೆ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಯಾವಾಗ ತಲುಪುತ್ತೇವೋ ಎನ್ನುವ ಚಿಂತೆಯಲ್ಲಿರುತ್ತಾರೆ. ನಗರದ ಜನ, ಕಚೇರಿ ಕೆಲಸಕ್ಕೆ ತೆರಳುವವರು ಪ್ರತಿನಿತ್ಯವೂ ಟ್ರಾಫಿಕ್‌ನಿಂದ ಬೇಸತ್ತು ಹೋಗುತ್ತಾರೆ. ಯಾವುದೇ ಮಾರ್ಗದಲ್ಲಿ ಹೋದರೂ ಟ್ರಾಫಿಕ್ ಮಾತ್ರ ತಪ್ಪಿದ್ದಲ್ಲ ಎನ್ನುವ ಪರಿಸ್ಥತಿ ನಿರ್ಮಾಣವಾಗಿದ್ದು, ನಗರ ವಿಶ್ವದ ಅತ್ಯಂತ ಟ್ರಾಫಿಕ್ ಹೊಂದಿರುವಂತರ ಸಿಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ವಿಶ್ವದ ಅತ್ಯಂತ ಟ್ರಾಫಿಕ್ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದ ಸುಮಾರು 387 ನಗರಗಳನ್ನ ಆಯ್ಕೆ ಮಾಡಿ ಅತ್ಯಂತ ಜನದಟ್ಟಣೆ ನಗರ ಯಾವುದು ಎಂದು ಸಮೀಕ್ಷೆ ಮಾಡಿದೆ. ಈ ಪೈಕಿ ಭಾರತದ ಎರಡು ಮಹಾನಗರಗಳು ವಿಶ್ವದ ಅತ್ಯಂತ ಜನದಟ್ಟಣೆ ನಗರಗಳು ಎಂಬ ಸ್ಥಾನವನ್ನು ಅಲಂಕರಿಸಿದ್ದು, ಬೆಂಗಳೂರು 6ನೇ ಸ್ಥಾನ ಪಡೆದರೆ, ಪುಣೆ 7ನೇ ಸ್ಥಾನದಲ್ಲಿದೆ.
ವಿಶ್ವದ ಟಾಪ್ ಮೋಸ್ಟ್ ನಗರಗಳಲ್ಲಿ ಸರಾಸರಿ 10 ಕಿಲೋ ಮೀಟರ್ ಸಂಚಾರ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ಅಧ್ಯಯನ ಮಾಡಿದೆ. ಇದರಲ್ಲಿ ಬೆಂಗಳೂರು ಟ್ರಾಫಿಕ್‌ನಲ್ಲಿ 10 ಕಿಲೋ ಮೀಟರ್ ತಲುಪಲು 28 ನಿಮಿಷ 10 ಸೆಕೆಂಡು ಪ್ರಯಾಣ ಮಾಡಬೇಕೆಂದು ತಿಳಿದುಬಂದಿದೆ. ಪುಣೆ ಟ್ರಾಫಿಕ್‌ನಲ್ಲಿ 10 ಕಿಲೋ ಮೀಟರ್ ತಲುಪಲು 27 ನಿಮಿಷ 50 ಸೆಕೆಂಡು ಪ್ರಯಾಣ ಮಾಡಬೇಕಾಗುತ್ತದೆ.
ವಿಶ್ವದ ಟಾಪ್ ಟ್ರಾಫಿಕ್ ನಗರಗಳ ಪಟ್ಟಿ
1. ಲಂಡನ್ (ಯುಕೆ)- ನಂ.1
2. ಡಬ್ಲಿನ್ (ಐರ್ಲೆಂಡ್)- 2ನೇ ಸ್ಥಾನ
3. ಟೊರೊಟೊ (ಕೆನಡಾ)- 3ನೇ ಸ್ಥಾನ
4. ಮಿಲನ್ (ಇಟಲಿ) - 4ನೇ ಸ್ಥಾನ
5. ಲಿಮಾ (ಪೆರು) - 5ನೇ ಸ್ಥಾನ
6. ಬೆಂಗಳೂರು (ಭಾರತ) - 6ನೇ ಸ್ಥಾನ
7. ಪುಣೆ (ಭಾರತ) 7ನೇ ಸ್ಥಾನ
ಈ ಹಿಂದೆ ಟ್ರಾಫಿಕ್ ಕ್ವಾಲಿಟಿ ಇಂಡೆಕ್ಸ್ ದೇಶದ ಟ್ರಾಫಿಕ್ ನಗರಗಳ ಸಮೀಕ್ಷೆ ಮಾಡಿದ್ದು, ಮೊದಲ ಸ್ಥಾನ ಪಡೆದಿದ್ದ ಬೆಂಗಳೂರು ಭಾರೀ ಟೀಕೆಗೆ ಒಳಗಾಗಿತ್ತು. ಇದೀಗ ಈಗ ವಿಶ್ವದ ಟ್ರಾಫಿಕ್ ನಗರಗಳ ಪಟ್ಟಿಯಲ್ಲೂ ಟಾಪ್ 10ರಲ್ಲಿ ಸ್ಥಾನ ಪಡೆದಿದೆ. ಇನ್ನು ಬ್ರ್ಯಾಂಡ್ ಬೆಂಗಳೂರು ಕನಸು ಕಾಣುತ್ತಿರುವ ಸರ್ಕಾರ ಈ ಟ್ರಾಫಿಕ್ ನಿಯಂತ್ರಣದ ಬಗ್ಗೆಯೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಇದರಿಂದ ವಾಹನ ಸವಾರರು ಪರದಾಡಿ, ಯಾವುದೋ ಬೇರೆ ಮಾರ್ಗದಲ್ಲಿ ಹೋದಲೂ ಅಲ್ಲಿ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದ್ದರಿಂದ ಇದರತ್ತನೂ ಕೂಡ ಸರ್ಕಾರ ಗಮನಹರಿಸಬೇಕಿದೆ ಎನ್ನುವುದು ನಗರ ವಾಸಿಗಳ ಆಗ್ರಹವಾಗಿದೆ.












Click it and Unblock the Notifications