Bengaluru Weather: ಬೆಂಗಳೂರಿನಲ್ಲಿ ಇನ್ನೂ ಕೆಲ ದಿನ 'ಕೂಲ್' ವಾತಾವರಣ: ನ.28 ತನಕ ವ್ಯಾಪಕ ಮಳೆ ಮಾಹಿತಿ

ಬೆಂಗಳೂರು, ನವೆಂಬರ್ 23: ಬೆಂಗಳೂರಿನಲ್ಲಿ ಗುರುವಾರವು ಸಹ ಅಲ್ಲಲ್ಲಿ ಜೋರು ಮಳೆ ಮುಂದುವರಿಯುವ ಲಕ್ಷಣಗಳು ಇವೆ. ಈ ಮಳೆ ಸದ್ಯ ಬಿಡುವ ಲಕ್ಷಣಗಳು ಇಲ್ಲ. ಶುಕ್ರವಾರದವರೆಗೆ ವ್ಯಾಪಕವಾಗಿ ಸುರಿಯಲಿರುವ ಹಿಂಗಾರು ಮಳೆ ನಂತರ ದಿನಗಳಲ್ಲಿ ಅಂದರೆ, ನವೆಂಬರ್ 28ರವರೆಗೆ ಮುಂದುವರಿಯುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಮಳೆ ಸುರಿದು ಕೆಲವೆಡೆ ಸಂಚಾರ ಅಸ್ತೆವೆಸ್ತವಾಗಿದೆ. ಜೋರು ಮಳೆಯ ಕಾರಣದಿಂದ ಬಿಸಿಲಿಗೆ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಮತ್ತೆ ತನ್ನ ಹಳೆಯ ತಂಪು (ಕೂಲ್) ವಾತಾವರಣಕ್ಕೆ ಮರಳಿದೆ. ಇನ್ನೂ ಕೆಲವು ದಿನ ಇದೇ ರೀತಿಯ ಕೂಲ್ ವಾತಾವರಣವೇ ಕಂಡು ಬರಲಿದೆ.

bengaluru-heavy-rain

ಶುಕ್ರವಾರವರೆಗೆ ಮಧ್ಯಾಹ್ನದ ನಂತರ ಬಿಸಿಲು ಮರೆಯಾಗಿ ಗುಡುಗು, ಮಿಂಚು ಮತ್ತು ಗಾಳಿ ಸಮೇತ ಉದ್ಯಾನ ನಗರಿಯ ವಿವಿಧ ಬಡಾವಣೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಂಭವವಿದೆ. ಒಂದರೆಡು ಕಡೆ ಸಾಧಾರಣ ಮಳೆ ಆದರೆ, ಮತ್ತೊಂದಿಷ್ಟು ಕಡೆಗಳಲ್ಲಿ ಹಗುರ ಮಳೆ ಆಗುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ನಗರದಲ್ಲಿ ಹಿಂಗಾರು ಮಳೆ ಬಿರುಸಿನಿಂದ ಕೂಡಿರಲಿದೆ. ಶನಿವಾರದಿಂದ ಅನೇಕ ಕಡೆಗಳಲ್ಲಿ ತುಂತುರು ಮಳೆಯ ದರ್ಶನವಾಗಲಿದೆ. ಇದೇ ಅವಧಿಯಲ್ಲಿ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಜೋರು ಮಳೆ ಆಗಲೂಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 29ರಿಂದ 28 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ, ಕನಿಷ್ಠ ತಾಪಮಾನ 18 ರಿಂದ 19 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

bengaluru-heavy-rain

ನಗರದಲ್ಲಿ 2.5 ಸೆಂಟಿ ಮೀಟರ್ ಮಳೆ

ಇನ್ನೂ ನೆನ್ನೆ ಬುಧವಾರ ಸಂಜೆಯಿಂದ ರಾತ್ರಿವರೆಗೆ ಮಳೆ ಸುರಿಯಿತು. ನಗರದ ಸಿಂಗಸಂದ್ರ ಒಂದರಲ್ಲಿಯೇ 23.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಅರಕೆರೆ 20 ಮಿಮೀ, ಬೊಮ್ಮನಹಳ್ಳಿ 17.5ಮಿಮೀ, ಕೆಂಗೇರಿ 17ಮಿಮೀ, ಬಿಳೆಕಳ್ಳಿ 16ಮಿಮೀ, ಹೊರಮಾವು 15.5ಮಿಮೀ, ರಾಜರಾಜೇಶ್ವರಿ ನಗರ 13ಮಿಮೀ, ಹೊರಮಾವು 13ಮಿಮೀ, ಬಿಟಿಎಂ ಲೇಔಟ್ 12ಮಿಮೀ, ಕೋಣನಕುಂಟೆ 12 ಮಿಮೀ, ಅಂಜನಾಪುರ 11ಮಿಮೀ ಮಳೆ ದಾಖಲಾಗಿದೆ. ಉಳಿದ ಅನೇಕ ಕಡೆಗಳಲ್ಲಿ ತುಂತುರು ಮಳೆ ಆಗಿದೆ.

ಮಳೆಯಿಂದಾಗಿ ಪ್ರಮುಖ ರಸ್ತೆ, ಸಿಗ್ನಲ್‌ಗಳಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿ ಜನರು, ವಾಹನ ಸವಾರರು ಪರದಾಡಿದರು. ಕೆಲವು ಮಳೆಯಲ್ಲಿಯೇ ಕೆಲಸ ಮುಗಿಸಿ ಮನೆಗೆ ತೆರಳಿದ್ದು, ಕಂಡು ಬಂತು. ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಮರ ಕೊಂಬೆಗಳು ಸಹ ಗಾಳಿಗೆ ಮುರಿದು ಬಿದ್ದಿದ್ದವು. ಆದರೆ ಮಳೆಯಿಂದಾಗಿ ಯಾವುದೇ ಗಂಭೀರ ಹಾನಿ ಪ್ರಕರಣಗಳು ವರದಿ ಆಗಿಲ್ಲ. ಸದ್ಯ ನಗರದಲ್ಲಿ ಹಿಂಗಾರು ಮಳೆ ಇನ್ನೂ ಕೆಲವು ದಿನಗಳ ಕಾಲ ಹೀಗೆ ಚುರುಕಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+