ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲ್ವೆ ನಿಲ್ದಾಣ ಇನ್ನಷ್ಟು ಸುರಕ್ಷಿತ, ಹೊಸ ಕ್ರಮಗಳೇನೇನು?

|
Google Oneindia Kannada News

ಬೆಂಗಳೂರು, ಏ.5: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಇನ್ನಷ್ಟು ಭದ್ರವಾಗಲಿದೆ.

ಹೇಗೆ ಅಂತೀರಾ.. ಹಳಿಗಳ ನಡುವೆ ಬ್ಯಾರಿಕೇಡ್, ಸ್ಮಾರ್ಟ್‌ ಸಿಸಿಟಿವಿ ಕ್ಯಾಮರಾ ಸೇರಿದಂತೆ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇಶದಲ್ಲಿರುವ ಎ-ಒನ್ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನೂತನ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ.

Bengaluru railway stations is more safer

ಕೆಎಸ್‌ಆರ್ ಗೆ ಬರುವ ಎಂಟು ದ್ವಾರಗಳಲ್ಲಿ ದಿನಕ್ಕೆ ಸುಮಾರು 2.5 ಲಕ್ಷ ಮಂದಿ ಸಂಚರಿಸುತ್ತಾರೆ. ಪುಲ್ವಾಮಾ ದಾಳಿ ನಂತರ ದೇಶದ ಎಲ್ಲಾ ಪ್ರತಿಷ್ಠಿತ ನಗರಗಳ ರೈಲ್ವೆ ನಿಲ್ದಾಣದಲ್ಲಿ ಬಿಗಿ ಭದ್ರತೆ ನೀಡಲು ಆಲೋಚಿಸಲಾಗಿದೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಫೇಸ್ ಐಡೆಂಟಿಫಿಕೇಷನ್ ಟೆಕ್ನಾಲಜಿ ಇರುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ಸಿಟಿ ರೈಲ್ವೆ ನಿಲ್ದಾಣ ಈಗಾಗಲೇ 71 ಸಿಸಿ ಕ್ಯಾಮರಾಗಳನ್ನು ಹೊಂದಿದೆ. ಆದರೆ ಲೋ ರೆಸಲ್ಯೂಷನ್ ಕ್ಯಾಮರಾಗಳಾಗಿವೆ.

 ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ರೈಲ್ವೆ ಹಳಿಗಳಿಗೆ ತೊಂದರೆಯಾಗದಂತೆ ಕಾಪಾಡಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಮುಂದಿನ ತಿಂಗಳಿನಿಂದಲೇ ಕಾಮಗಾರಿ ಆರಂಭವಾಗಲಿದೆ. ಟಿಕೆಟ್ ಪಡೆದುಕೊಳ್ಳದೆ ರೈಲಿನಲ್ಲಿ ಪ್ರಯಾಣಿಸುವುದು, ಅಪರಿಚಿತ ವ್ಯಕ್ತಿ ಕುರಿತು ನಿಗಾ ಇಡಲಾಗುತ್ತದೆ. ಯಶವಂತಪುರ ರೈಲ್ವೆ ನಿಲ್ದಾಣದಲ್ಲೂ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

English summary
In line with a nationwide initiative to upgrade the security apparatus at all A-1 railway stations across the country, the Krantivira Sangolli Rayanna (KSR) and Yeshwantpur stations are set to be monitored extensively using technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X