Bengaluru Property: ಬೆಂಗಳೂರು ಹೊಸ ಪ್ರಾಪರ್ಟಿ ಯೋಜನೆಯಲ್ಲಿ ಹಿನ್ನಡೆ: ರಿಯಲ್ ಎಸ್ಟೇಟ್ ಮೇಲೆ ಪರಿಣಾಮ
ಬೆಂಗಳೂರು: ಬೆಂಗಳೂರಿನ ಆಸ್ತಿದಾರರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಇದು ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರುತ್ತಿದೆ. ಕರ್ನಾಟಕ ಮಾತ್ರವಲ್ಲ ಭಾರತದಲ್ಲೇ ಅತ್ಯಂತ ದುಬಾರಿ ಪ್ರಾಪರ್ಟಿ ಹಾಗೂ ಮನೆಗಳು ಇರುವ ಪ್ರಮುಖ ನಗರಗಳಲ್ಲಿ ಒಂದು ಎಂದು ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ಪ್ರಾಪರ್ಟಿಗೆ ಸಂಬಂಧಿಸಿದಂತೆ ಹೊಸದೊಂದು ತಲೆನೋವು ಶುರುವಾಗಿದೆ. ಇದು ರಿಯಲ್ ಎಸ್ಟೇಟ್‌ಗೂ ಪೆಟ್ಟುಕೊಟ್ಟಿದೆ.
ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ರಾಜ್ಯ ಕಾಂಗ್ರೆಸ್ ಸರ್ಕಾರವು ಇ ಖಾತಾ ಸೇರಿದಂತೆ ಆಸ್ತಿಗಳಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಜಾರಿ ಮಾಡಿದೆ. ಆದರೆ ಕೆಲವೊಂದು ಬದಲಾವಣೆಗಳು ಪ್ರಾರಂಭದ ಹಂತದಲ್ಲಿ ಪ್ರಾಪರ್ಟಿಗಳ ರಿಜಿಸ್ಟ್ರೇಷನ್ ಹಾಗೂ ಮಾರಾಟದಲ್ಲಿ ಹಿನ್ನಡೆಯನ್ನುಂಟು ಮಾಡಿದೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿಗಳಿಗೆ ಸಂಬಂಧಿಸಿದಂತೆ ಇ ಖಾತಾದ ನಂತರ ಆಸ್ತಿಗಳಿಗೆ ಜಿಪಿಎಸ್ ಗುರುತು ಮಾಡುವ ಪ್ರಕ್ರಿಯೆಗೆ ಮುಂದಾಗಿದೆ. ಇದು ಬೆಂಗಳೂರಿನಲ್ಲಿರುವ ಆಸ್ತಿಗಳಿಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ನೀಡಲಿದೆ.

ಈ ಯೋಜನೆಯಿಂದ ಬೆಂಗಳೂರಿನ ಆಸ್ತಿಗಳ ನಿರ್ದಿಷ್ಟ ಪ್ರದೇಶ, ಆಸ್ತಿ ತೆರಿಗೆ ಹಾಗೂ ಭೂ ಸಂಬಂಧಿತ ವಿಷಯಗಳಲ್ಲಿ ದಕ್ಷತೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಆದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅತ್ಯಂತ ಮಹತ್ವದ ಯೋಜನೆಯಾಗಿದ್ದರೂ, ಗಂಭೀರವಾಗಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಈ ಯೋಜನೆಯನ್ನು 2024ರ ಸೆಪ್ಟೆಂಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಪರಿಚಯಿಸಲಾಗಿತ್ತು.
ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಜಿಪಿಎಸ್ ಟ್ಯಾಗಿಂಗ್ ಪ್ರಕ್ರಿಯೆಯನ್ನು ಮುಂದುವರಿಸಿದೆ. ಪ್ರತಿಯೊಂದು ಆಸ್ತಿಗೆ ನಿಖರವಾದ ಸ್ಥಳ ವಿವರಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಂದಾಜು 25 ಲಕ್ಷ ಆಸ್ತಿಗಳಿದ್ದು ಇವುಗಳಿಗೆ ಡಿಜಿಟಲ್ ಮ್ಯಾಪಿಂಗ್ ಮಾಡಲು ನಿರ್ಧರಿಸಲಾಗಿದೆ.
15.5 ಲಕ್ಷ ಆಸ್ತಿಗಳ ಜಿಪಿಎಸ್ ಅಳವಡಿಕೆ
ಇನ್ನು ಬೆಂಗಳೂರಿನಲ್ಲಿ 2025ರ ಅಂತ್ಯದ ವೇಳೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಶೇ.28 ಪ್ರತಿಶತದಷ್ಟು ಮಾತ್ರ ಜಿಯೋ-ಟ್ಯಾಗ್ ಮಾಡಲಾಗಿದೆ. 15.5 ಲಕ್ಷ ಆಸ್ತಿಗಳ ಜಿಪಿಎಸ್ ಹೊಂದಾಣಿಕೆಗಳನ್ನು ಈಗಾಗಲೇ ಮ್ಯಾಪ್ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. 7 ಲಕ್ಷ ಆಸ್ತಿಗಳ ಹೊಂದಾಣಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನೇರ ಸಮೀಕ್ಷೆಗಳ ಮೂಲಕ ಮ್ಯಾಪ್ ಮಾಡುತ್ತಿದ್ದಾರೆ. ಆಸ್ತಿ ಮಾಲೀಕರು ಸ್ವಯಂ-ಸಲ್ಲಿಕೆ ಮೂಲಕ 8.5 ಲಕ್ಷ ಆಸ್ತಿಗಳ ಹೊಂದಾಣಿಕೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಮೇಲೆ ಜಿಪಿಎಸ್ ಟ್ಯಾಗಿಂಗ್ ಹೇಗೆ ಪ್ರಭಾವ
ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಜಿಪಿಎಸ್ ಟ್ಯಾಗಿಂಗ್ ವ್ಯವಸ್ಥೆಯು ಗಮನಾರ್ಹ ಪರಿಣಾಮಗಳನ್ನು ಬೀರುತ್ತಿದೆ. ಅಲ್ಲದೇ ಗ್ರೇಟರ್ ಬೆಂಗಳೂರು ಪಾಲಿಕೆಗೆ ಆಸ್ತಿ ತೆರಿಗೆ ಸಂಗ್ರಹವು ಪ್ರಮುಖ ಆದಾಯದ ಮೂಲವಾಗಿದೆ. ಆದಾಗ್ಯೂ, ಆಸ್ತಿ ತೆರಿಗೆ ಮೌಲ್ಯಮಾಪನದಲ್ಲಿ ಆಸ್ತಿಯ ಸರಿಯಾದ ಗುರುತಿಸುವಿಕೆ ಮತ್ತು ವ್ಯಾಖ್ಯಾನವು ಕಡ್ಡಾಯವಾಗಿದೆ. ಡೇಟಾದಲ್ಲಿನ ಯಾವುದೇ ವ್ಯತ್ಯಾಸಗಳು ತೆರಿಗೆ ನಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಮುಂದುವರಿದು ಡೆವಲಪರ್‌ಗಳು, ಹೂಡಿಕೆದಾರರು ಮತ್ತು ಮನೆ ಖರೀದಿ ಮಾಡಬೇಕು ಎಂದು ಎದುರು ನೋಡುತ್ತಿರುವವರು ಜಿಪಿಎಸ್-ಸಕ್ರಿಯಗೊಳಿಸಿದ ರಿಯಲ್ ಎಸ್ಟೇಟ್ ಡೇಟಾಬೇಸ್‌ನ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇತ್ತೀಚಿಗೆ ಇ ಖಾತಾ ಪರಿಚಯಿಸಿದ ನಂತರವೂ ಇದೇ ಮಾದರಿಯ ಬೆಳವಣಿಗೆ ನಡೆದಿತ್ತು. ಸ್ಥಳ ಟ್ರ್ಯಾಕಿಂಗ್ ದಾಖಲೆಗಳೊಂದಿಗೆ, ರಿಯಲ್ ಎಸ್ಟೇಟ್ ಮಾಲೀಕತ್ವದ ಕುರಿತಾದ ವಿವಾದಗಳಿಗೆ ಬ್ರೇಕ್ ಬೀಳಿದೆ. ಅಲ್ಲದೇ ಆಸ್ತಿ ಮಾರಾಟವೂ ಸಹ ಸುಲಭವಾಗಲಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಗೊಂದಲಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾದರಿಯ ಸ್ಪಷ್ಟತೆಯನ್ನು ಮನೆ ಖರೀದಿ ಮಾಡಬೇಕು ಎಂದು ಎದುರು ನೋಡುತ್ತಿರುವವರು ಬಯಸುತ್ತಿದ್ದಾರೆ. ದಾಖಲೆಗಳು ಎಲ್ಲವೂ ಸರಿಯಾಗಿ ಇರಬೇಕು ಎಂದೂ ನಿರೀಕ್ಷೆ ಮಾಡುತ್ತಿದ್ದಾರೆ.












Click it and Unblock the Notifications