Bengaluru Property: ಬೆಂಗಳೂರಿನ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ: ಪ್ರಾಪರ್ಟಿ ಬೆಲೆ ಶೇ 20ರಿಂದ 40ರಷ್ಟು ಹೆಚ್ಚಳ ಫಿಕ್ಸ್
Bengaluru Property: ಬೆಂಗಳೂರಿನ ಹೃದಯಭಾಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮೊದಲಿನಿಂದಲೂ ಭೂಮಿಗೆ ಬಂಗಾರದ ಬೆಲೆ ಇದೆ. ಇದೀಗ ಬೆಂಗಳೂರಿನ ಕೆಲವೊಂದು ಭಾಗದಲ್ಲಿ ಭೂಮಿ - ಪ್ರಾಪರ್ಟಿ ಬೆಲೆಯು ಏಕಾಏಕಿ ಶೇ 20% ರಿಂದ 40% ರಷ್ಟು ಭಾರಿ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಸಿಲಿಕಾನ್ ಸಿಟಿ ಬೆಂಗಳೂರು ಅತ್ಯಂತ ವೇಗವಾಗಿ ಅಭಿವೃದ್ಧಿ ಅಗುತ್ತಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯು ನಿರೀಕ್ಷೆಗಿಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಈ ರೀತಿ ಇರುವಾಗಲೇ ಬೆಂಗಳೂರಿನ ನಿರ್ದಿಷ್ಟ ಭಾಗದಲ್ಲಿ ಭೂಮಿ - ಪ್ರಾಪರ್ಟಿ ಬೆಲೆಯು ಏಕಾಏಕಿ ಭರ್ಜರಿ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ಹೊಸ ಮಾರ್ಗಳ ಅಭಿವೃದ್ಧಿ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನ ನಿರ್ದಿಷ್ಟ ಪ್ರದೇಶಗಳಲ್ಲಿ ದಿಢೀರ್ ಭೂಮಿ ಹಾಗೂ ಪ್ರಾಪರ್ಟಿ ಬೆಲೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳ
ಇನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ಭೂಮಿಯ ಬೆಲೆಯು ಏಕಾಏಕಿ ಹೆಚ್ಚಳವಾಗಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದಾರೆ. ದಕ್ಷಿಣ ಬೆಂಗಳೂರಿನ ಭಾಗದಲ್ಲಿ ಇರುವವರಿಗೆ ಇದು ಜಾಕ್‌ಪಾಟ್ ಸಮಯ ಎಂದೇ ವ್ಯಾಖ್ಯಾನಿಸಲಾಗಿದೆ. ಬೆಂಗಳೂರಿನ ಜೆಪಿ ನಗರ ಮತ್ತು ಬನ್ನೇರುಘಟ್ಟ ರಸ್ತೆಯಂತಹ ಪ್ರಮುಖ ಸ್ಥಳಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಭೂಮಿ ಹಾಗೂ ಪ್ರಾಪರ್ಟಿಯ ಬೆಲೆಯು ಅಂದಾಜು ಶೇ. 20% ರಿಂದ ಶೇ. 40% ರಷ್ಟು ಭಾರಿ ಏರಿಕೆಯಾಗಬಹುದು ಎಂದು ಹೊಸ ವರದಿಯೊಂದು ಉಲ್ಲೇಖಿಸಿದೆ.
ಪ್ರಾಪರ್ಟಿ ಬೆಲೆ ಹೆಚ್ಚಳಕ್ಕೆ ಕಾರಣವೇನು
ಇನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಳವಾಗುವುದಕ್ಕೆ ಮುಖ್ಯವಾಗಿ ಮೆಟ್ರೋ ಯೋಜನೆ, ಮೆಟ್ರೋ ಹೊಸ ಮಾರ್ಗಗಳ ಅಭಿವೃದ್ಧಿಯಿಂದಾಗಿ ಈ ಭಾಗದಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಬರಲಿರುವ ಹಳದಿ ಮತ್ತು ಗುಲಾಬಿ ಮಾರ್ಗಗಳು ದಕ್ಷಿಣ ಬೆಂಗಳೂರನ್ನು ನಗರದ ಉಳಿದ ಭಾಗಗಳಿಗೆ ಹಿಂದೆಂದಿಗಿಂತಲೂ ಉತ್ತಮವಾಗಿ ಸಂಪರ್ಕ ಕಲ್ಪಿಸಲಿದೆ. ಈ ಸುಧಾರಿತ ಸಾರಿಗೆ ಸಂಪರ್ಕವು ಈಗಾಗಲೇ ಈ ಪ್ರದೇಶಗಳಲ್ಲಿ ಆಸ್ತಿಗೆ ಬೇಡಿಕೆಯನ್ನು ಹೆಚ್ಚಿಸಿದೆ.
ಬೆಂಗಳೂರಿನ ಪ್ರಮುಖ ಭಾಗಗಳಿಗೆ ಮೆಟ್ರೋ ಸಂಪರ್ಕ
ಬೆಂಗಳೂರಿನ ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಜಾಲ ಅಭಿವೃದ್ಧಿ ಆಗಲಿದೆ. ಮೆಟ್ರೋ ಹಳದಿ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯಂತಹ ಐಟಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಪಿಂಕ್ ಮಾರ್ಗವು ನಗರ ಕೇಂದ್ರಕ್ಕೆ ಹೋಗುವುದನ್ನು ಸುಲಭ ಮಾಡಲಿದೆ. ಜೆಪಿ ನಗರ ಮತ್ತು ಬನ್ನೇರುಘಟ್ಟ ರಸ್ತೆಯ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳು, ಪ್ಲಾಟ್‌ಗಳು ಮತ್ತು ವಾಣಿಜ್ಯ ಅಂಗಡಿಗಳ ಬೆಲೆಗಳು ಹೆಚ್ಚಾಗುವ ನಿರೀಕ್ಷೆ ಇದೆ.












Click it and Unblock the Notifications