Bengaluru Power Cut: ಬೆಂಗಳೂರು ವಿದ್ಯುತ್ ಕಡಿತ ತೊಂದರೆ: ಬೆಸ್ಕಾಂನಿಂದ ಮಹತ್ವದ ಮಾಹಿತಿ ಬಿಡುಗಡೆ
Bengaluru Power Cut: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಏಕಾಏಕಿ ವಿದ್ಯುತ್ ಕಡಿತವಾಗುವುದು ಮುಂದುವರಿದಿದೆ. ಇದೀಗ ಬೆಂಗಳೂರಿನ ವಿವಿಧ ಭಾಗದಲ್ಲಿ ದಿಢೀರ್ ಎಂದು ವಿದ್ಯುತ್ ಕಡಿತವಾಗುವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಇನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ 21ರ ಮಂಗಳವಾರ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿರುವ ಬಗ್ಗೆ ವರದಿಯಾಗಿದೆ. ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಭಾರೀ ವ್ಯತ್ಯಾಸವಾಗಿದೆ. ಅಲ್ಲದೆ ಬೆಂಗಳೂರು ಪಶ್ಚಿಮ ಭಾಗದಲ್ಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಬೆಸ್ಕಾಂ ನಿರ್ವಹಣಾ ಕಾರ್ಯ ಮತ್ತು ಮೂಲಸೌಕರ್ಯ ಸಮಸ್ಯೆಗಳಿಂದಾಗಿ ಈ ಅಡಚಣೆಗಳು ಉಂಟಾಗಿವೆ ಎಂದು ಹೇಳಲಾಗಿದೆ. '66/11KV ವೃಷಭಾವತಿ MUSS F4 ಫೀಡರ್ 250kVA ಸಂಖ್ಯೆ 105' ಗೆ ಸಂಬಂಧಿಸಿದ ವಿದ್ಯುತ್ ಕಡಿತದ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿ. BESCOM / ಬೆಸ್ಕಾಂ ಸಹ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯುತ್ ಕಡಿತವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತ
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುವುದು ಮುಂದುವರಿದಿದೆ. 66/11kV ವೃಷಭಾವತಿ MUSS F4 ಫೀಡರ್ 250kVA ಸಂಖ್ಯೆಯಲ್ಲಿ ವಿದ್ಯುತ್ ಅಡಚಣೆ ಉಂಟಾಗಿದ್ದು, ಮಧ್ಯಾಹ್ನದ ವೇಳೆಗೆ ವಿದ್ಯುತ್ ಸರಬರಾಜು ಪುನಃಸ್ಥಾಪನೆಯಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನಲ್ಲಿ ಪದೇ ಪದೆ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆಯೂ ಬೆಸ್ಕಾಂ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಪ್ರಸ್ತುತ, 66/11KV ವೃಷಭಾವತಿ MUSS F4 ಫೀಡರ್ 250kva no-105 ವ್ಯಾಪ್ತಿಯಲ್ಲಿ ಮರ ಕತ್ತರಿಸುವ ಕೆಲಸ ಪ್ರಗತಿಯಲ್ಲಿದೆ. ಹೀಗಾಗಿ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜನ್ನು ಬೆಳಿಗ್ಗೆ 2:30 ಕ್ಕೆ (ಸರಿಸುಮಾರು) ಪುನಃಸ್ಥಾಪಿಸಲಾಗುತ್ತದೆ ಎಂದು ಹೇಳಿದೆ.
ಬೆಂಗಳೂರು: ವಿದ್ಯುತ್ ಸಮಸ್ಯೆ ದೂರು ದಾಖಲಿಸುವುದು ಹೇಗೆ
ವಿದ್ಯುತ್ ಕಡಿತ, ತಪ್ಪು ಬಿಲ್‌ಗಳು ಅಥವಾ ದೋಷಪೂರ್ಣ ಮೀಟರ್‌ಗಳು ಬೆಂಗಳೂರಿನಲ್ಲಿ ಮನೆಗಳು ಹಾಗೂ ಕೆಲಸದ ಸ್ಥಳಗಳಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಈ ಸಮಸ್ಯೆಗಳನ್ನು ತಕ್ಷಣ BESCOMಗೆ ದೂರು ನೀಡುವುದರಿಂದ ವಿದ್ಯುತ್ ಸರಬರಾಜು ಮತ್ತು ಬಿಲ್ ಸಮಸ್ಯೆಗಳನ್ನು ಬೇಗ ಪರಿಹರಿಸಬಹುದು. ಸ್ಪಷ್ಟ ದೂರು ಪ್ರಕ್ರಿಯೆ ಇದ್ದರೆ ಗೊಂದಲವೂ ಕಡಿಮೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ದೂರು ನೀಡುವುದರಿಂದ BESCOM ಸಿಬ್ಬಂದಿಗೆ ದೋಷಗಳನ್ನು ಬೇಗ ಪತ್ತೆಹಚ್ಚಲು ಮತ್ತು ಸರಿಪಡಿಸಲು ಸಹಾಯವಾಗಲಿದೆ.
BESCOM ದೂರು ಸಲ್ಲಿಸುವ ವಿಧಾನಗಳು
BESCOM ಹಲವು ಮಾರ್ಗಗಳ ಮೂಲಕ ದೂರುಗಳನ್ನು ಸ್ವೀಕರಿಸುತ್ತದೆ. ನೀವು 24/7 ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಿ ನಿಮ್ಮ ಸಮಸ್ಯೆಯನ್ನು ತಿಳಿಸಬಹುದು. ಇನ್ನೊಂದು ವಿಧಾನವೆಂದರೆ BESCOM ವೆಬ್‌ಸೈಟ್‌ನ "ONLINE GRIEVANCE REGISTRATION" ವಿಭಾಗದ ಮೂಲಕ ಆನ್‌ಲೈನ್‌ನಲ್ಲಿ ದೂರು ಸಲ್ಲಿಸುವುದು.
BESCOM Mithra ಆ್ಯಪ್ ಮತ್ತು WhatsApp ಮೂಲಕ ದೂರು ಸಲ್ಲಿಕೆ
ನೀವು App Store ಅಥವಾ Google Play Store ನಿಂದ "BESCOM Mithra" ಆಪ್ ಡೌನ್‌ಲೋಡ್ ಮಾಡಬಹುದು. ಆಪ್‌ನಲ್ಲಿ ನಿಮ್ಮ ಗ್ರಾಹಕ ಸಂಖ್ಯೆ (consumer number) ಅಥವಾ RR number ಹಾಕಿ ಖಾತೆ ಸೇರಿಸಿದ ನಂತರ "Complaint Registration" ಆಯ್ಕೆ ಮೂಲಕ ದೂರು ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದೆ.
ಅಲ್ಲದೆ WhatsApp ಮೂಲಕವೂ BESCOM ಗೆ ದೂರು ನೀಡಬಹುದು. WhatsApp ಸಂಖ್ಯೆ 9449844640. ದೂರು ನೀಡುವಾಗ ನಿಮ್ಮ ಗ್ರಾಹಕ ಸಂಖ್ಯೆಯನ್ನು ಸೇರಿಸಿ, ಸಮಸ್ಯೆಯನ್ನು ಸ್ಪಷ್ಟವಾಗಿ ವಿವರಿಸಿ ಮತ್ತು ಇದ್ದರೆ ರೆಫರೆನ್ಸ್ ಕೋಡ್‌ಗಳನ್ನು ಸೇರಿಸಿ. ಇದರಿಂದ ಸಮಸ್ಯೆ ಬೇಗ ಪರಿಹಾರವಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ಮಾಹಿತಿ ನೀಡಿದೆ.














Click it and Unblock the Notifications