ಬೆಂಗಳೂರಿಗರೇ ಚಿಯರ್ಸ್ ವಿತ್ ಬಿಯರ್: ಕಂಡೀಷನ್ಸ್ ಅಪ್ಲೈ
ಬೆಂಗಳೂರು, ಮೇ 14: ಬೆಂಗಳೂರಿನ ಮದ್ಯ ಪ್ರಿಯರೇ ಇಂದಿನಿಂದ ಮೈಕ್ರೋ ಬ್ರೂವರಿಗಳಲ್ಲಿ ಬಿಯರ್ ದೊರೆಯಲಿದೆ. ಕರ್ನಾಟಕ ಅಬಕಾರಿ ಇಲಾಖೆಯು ಮೈಕ್ರೋಬ್ರೂವರಿಗಳಿಗೆ(ಬಿಯರ್ ತಯಾರಿಕಾ ಘಟಕ) ತಮ್ಮ ಬಳಿ ಇರುವ ದಾಸ್ತಾನನ್ನು ಖಾಲಿ ಮಾಡುವಂತೆ ತಿಳಿಸಿದೆ.
Recommended Video
ಆದರೆ ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶದಿಂದ ಶಾಪ್ ತೆರೆಯುವಂತಿಲ್ಲ. ಹಾಗೆಯೇ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಮಾರಾಟ ಮಾಡುವಂತಿಲ್ಲ. ಅವರ ಬಳಿ ಈಗಿರುವ ಬಿಯರ್ ಅನ್ನು ಮಾತ್ರ ಮಾರಾಟ ಮಾಡಬಹುದೇ ವಿನಃ ಹೊಸದಾಗಿ ತರಿಸಿಕೊಳ್ಳುವಂತಿಲ್ಲ.ಮೈಕ್ರೋಬ್ರೂವರಿಗಳು ಮಾತ್ರ ಬಿಯರ್ ಅನ್ನು ನೀಡಲು ಸೆರಾಮಿಕ್ ಗ್ಲಾಸ್‌ಗಳಲ್ಲಿ ಹಾಗೂ ಎರಡು ಲೀಟರ್ ಹಿಡಿಯುವ ಸ್ಟೇನ್‌ಲೆಸ್ ಸ್ಟೀಲ್ ಕಂಟೈನರ್ ಬಳಕೆ ಮಾಡುತ್ತಾರೆ.
ಜೂನ್ 30ರವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಮಾಲೀಕರೊಬ್ಬರು ಮಾತನಾಡಿ ನಾವು 6 ಸಾವಿರ ಲೀಟರ್ ವೆರೆಗೆ ಬಿಯರ್ ಸ್ಟಾಕ್ ಮಾಡಿದ್ದೇವೆ ಈಗ ಶೇ.40ರಷ್ಟು ರಿಯಾಯಿತಿಯಲ್ಲಿ ಮಾರಾಟ ಆರಂಭಿಸುತ್ತೇವೆ.

ಸ್ವಲ್ಪ ಹಣ ಬಂದರೂ ನೌಕರರಿಗೆ ಸಂಬಳ ಕೊಡಲು ನೆರವಾಗುತ್ತದೆ. ಕಳೆದ ಎರಡು ತಿಂಗಳಿನಿಂದ ವ್ಯಾಪಾರವೇ ಇಲ್ಲದೆ ತೊಂದರೆಯಾಗಿದೆ ಎಂದು ಬಿಯರ್ ಲೈಬ್ರರಿ ಸಿಇಒ ಪ್ರಶಾಂತ್ ಕುನಾಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 60 ಮೈಕ್ರೋಬ್ರೂವರಿಗಳಿವೆ. ಲಾಕ್‌ಡೌನ್ 3.0ದಲ್ಲಿ ಕರ್ನಾಟಕ ಸರ್ಕಾರವು ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಮದ್ಯವನ್ನು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲೂ ಮಾರಾಟ ಮಾಡಲು ಅನುಮತಿ ದೊರೆತಿತ್ತು. ಮದ್ಯಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಶೇ.17ರಷ್ಟು ತೆರಿಗೆ ವಿಧಿಸಲಾಯಿತು.












Click it and Unblock the Notifications