ರೈಲಿನಲ್ಲಿ ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಕೇವಲ 5 ನಿಮಿಷದಲ್ಲಿ ಓಟ್ಸ್ ತಯಾರಿಸಿಕೊಟ್ಟ ಸಿಬ್ಬಂದಿ: ರೈಲ್ವೆಯ ಮಾನವೀಯತೆಗೆ ಅಮ್ಮನ

ಸಾಮಾನ್ಯವಾಗಿ ಚಿಕ್ಕ ಮಕ್ಕಳೊಂದಿಗೆ ದೂರದ ಊರಿಗೆ ರೈಲು ಪ್ರಯಾಣ ಮಾಡುವುದು ತಾಯಂದಿರಿಗೆ ದೊಡ್ಡ ಸವಾಲಿನ ಕೆಲಸ. ಅದರಲ್ಲೂ ಮಗುವಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವುದು, ಸರಿಯಾದ ಸಮಯಕ್ಕೆ ಬಿಸಿ ಆಹಾರ ಒದಗಿಸುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಆದರೆ, ಇಲ್ಲೊಬ್ಬರು ತಾಯಿಗೆ ಭಾರತೀಯ ರೈಲ್ವೆಯ ಪ್ಯಾಂಟ್ರಿ ಸಿಬ್ಬಂದಿ ಮಾಡಿದ ಒಂದು ಸಣ್ಣ ಸಹಾಯ ಅವರ ಇಡೀ ಪ್ರಯಾಣವನ್ನು ಮರೆಯಲಾಗದಂತೆ ಮಾಡಿದೆ.

ಬಿಹಾರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ತಾಯಿಯೊಬ್ಬರ 2 ವರ್ಷದ ಮಗುವಿಗೆ ಪ್ಯಾಂಟ್ರಿ ಸಿಬ್ಬಂದಿ ಕೇವಲ 5 ನಿಮಿಷಗಳಲ್ಲಿ ಓಟ್ಸ್ (Oats) ತಯಾರಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ಭಾರತೀಯ ರೈಲ್ವೆಯ ಬಗ್ಗೆ ಜನರಿಗಿರುವ ಒಳ್ಳೆಯ ಭಾವನೆಯನ್ನ ಮತ್ತಷ್ಟು ಹೆಚ್ಚಿಸಿದೆ.

Bengaluru Mother Thanks Indian Railways As Pantry Staff Cook Oats For Toddler In 5 Minutes

ಮಗುವಿಗೆ ಓಟ್ಸ್ ತಯಾರಿಸಿಕೊಟ್ಟ ಪ್ಯಾಂಟ್ರಿ ಸಿಬ್ಬಂದಿ

ಬೆಂಗಳೂರು ಮೂಲದ ಮಹಿಳೆಯೊಬ್ಬರು ತಮ್ಮ ಎರಡು ವರ್ಷದ ಮಗುವಿನೊಂದಿಗೆ ಬಿಹಾರದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಎರಡು ರಾತ್ರಿಗಳ ಸುದೀರ್ಘ ಪ್ರಯಾಣವಾದ್ದರಿಂದ, ಮಗುವಿನ ಊಟಕ್ಕಾಗಿ ಸಂಪೂರ್ಣ ಹೊರಗಿನ ಆಹಾರವನ್ನ ಅವಲಂಬಿಸುವುದು ಬೇಡ ಎಂದು ನಿರ್ಧರಿಸಿದ್ದ ಅವರು, ತಮ್ಮೊಂದಿಗೆ ಒಂದು ಪ್ಯಾಕೆಟ್ ಓಟ್ಸ್ ಮತ್ತು ಸಣ್ಣ ಪಾತ್ರೆಯನ್ನ ತೆಗೆದುಕೊಂಡು ಹೋಗಿದ್ದರು.

ಸಂಜೆಯಾಗುತ್ತಿದ್ದಂತೆ ಮಗುವಿಗೆ ಹಸಿವಾದಾಗ, ಆಕೆ ಪ್ಯಾಂಟ್ರಿಗೆ ಹೋಗಿ ಸಿಬ್ಬಂದಿಯನ್ನ ಭೇಟಿಯಾಗಿದ್ದಾರೆ. ತಮ್ಮ ಬಳಿ ಇದ್ದ ಓಟ್ಸ್ ಪ್ಯಾಕೆಟ್ ನೀಡಿ, ಮಗುವಿಗಾಗಿ ಇದನ್ನು ಸ್ವಲ್ಪ ಬೇಯಿಸಿಕೊಡಬಹುದೇ ಎಂದು ಕೇಳಿದ್ದಾರೆ.

ತಾನು ಕೇಳಿದ್ದಕ್ಕೆ ಸಿಬ್ಬಂದಿ ಒಪ್ಪುತ್ತಾರೋ ಇಲ್ಲವೋ ಎಂಬ ಅಂಜಿಕೆ ಕೂಡ ಆಕೆಗಿತ್ತು. ಆದರೆ ತಕ್ಷಣವೇ ಸ್ಪಂದಿಸಿದ ಸಿಬ್ಬಂದಿ, ಯಾವುದೇ ವಾದ ಮಾಡದೆ ಕೇವಲ ಐದೇ ನಿಮಿಷಗಳಲ್ಲಿ ಬಿಸಿಬಿಸಿಯಾದ ಓಟ್ಸ್ ತಯಾರಿಸಿಕೊಟ್ಟಿದ್ದಾರೆ. ಈ ಮೂಲಕ ಮಗುವಿನ ಹಸಿವು ನೀಗಿಸುವಲ್ಲಿ ನೆರವಾಗಿದ್ದಾರೆ.

ವೈರಲ್ ಆದ ಇನ್‌ಸ್ಟಾಗ್ರಾಮ್ ವಿಡಿಯೋ

ಈ ಘಟನೆಯನ್ನ ಆ ಮಹಿಳೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನಾನು ಭಾರತೀಯ ರೈಲ್ವೆಯಿಂದ ಈ ಮಟ್ಟದ ಸಹಾಯವನ್ನ ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ರೈಲಿನ ಪ್ಯಾಂಟ್ರಿಯಲ್ಲಿ ಸಿಬ್ಬಂದಿ ಓಟ್ಸ್ ತಯಾರಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. "ನನ್ನನ್ನು ಹೆಚ್ಚು ಆಕರ್ಷಿಸಿದ್ದು ಕೇವಲ ಅವರು ಮಾಡಿಕೊಟ್ಟ ಆಹಾರವಲ್ಲ, ಬದಲಾಗಿ ಅವರಲ್ಲಿದ್ದ ಸಹಾಯ ಮಾಡುವ ಗುಣ. ಅವರು ತುಂಬಾ ಸಹಕಾರ ನೀಡಿದರು. ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ತಾಯಿಗೆ ಸಹಾಯ ಮಾಡಲು ಅವರು ಸ್ವಲ್ಪವೂ ಹಿಂಜರಿಯಲಿಲ್ಲ" ಎಂದು ಆಕೆ ಬರೆದುಕೊಂಡಿದ್ದಾರೆ.

ಈ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

ರೈಲ್ವೆ ಸಚಿವರಿಗೆ ಧನ್ಯವಾದ ಮತ್ತು ನೆಟ್ಟಿಗರ ಪ್ರತಿಕ್ರಿಯೆ

ಈ ಅದ್ಭುತ ಅನುಭವಕ್ಕಾಗಿ ಆ ಮಹಿಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಭಾರತೀಯ ರೈಲ್ವೆ ಇಲಾಖೆಗೆ ವಿಶೇಷ ಧನ್ಯವಾದಗಳನ್ನ ತಿಳಿಸಿದ್ದಾರೆ. "ಕೆಲವೊಮ್ಮೆ ಇಂತಹ ಸಣ್ಣ ಸಣ್ಣ ಸಹಾಯಗಳು ಮತ್ತು ಪ್ರೀತಿಯ ನಡವಳಿಕೆಗಳು ದೂರದ ಪ್ರಯಾಣವನ್ನ ತುಂಬಾ ಸ್ಮರಣೀಯವಾಗಿಸುತ್ತವೆ.

ಚಿಕ್ಕ ಮಗುವಿನೊಂದಿಗೆ ಪ್ರಯಾಣಿಸುವುದು ಯಾವಾಗಲೂ ಸುಲಭವಲ್ಲ, ಆದರೆ ದಾರಿಯಲ್ಲಿ ಸಿಗುವ ಇಂತಹ ಸಣ್ಣ ನೆರವು ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ರೈಲ್ವೆ ಸಿಬ್ಬಂದಿಯ ಕಾರ್ಯವನ್ನ ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. ಅನೇಕ ಬಳಕೆದಾರರು ತಮ್ಮದೇ ಆದ ರೈಲು ಪ್ರಯಾಣದ ಅನುಭವಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

"ನನಗೂ ಒಮ್ಮೆ ಮಗುವಿಗಾಗಿ ಮ್ಯಾಗಿ ಮಾಡಿಕೊಳ್ಳಲು ಪ್ಯಾಂಟ್ರಿ ಸಿಬ್ಬಂದಿ ಅವಕಾಶ ನೀಡಿದ್ದರು", "ಒಮ್ಮೆ ನಾನು ಮಗುವಿನ ಹಾಲಿನ ಬಾಟಲಿ ಕೊಟ್ಟಾಗ, ಅದರಲ್ಲಿ ಬಿಸಿ ಹಾಲು ತಂದುಕೊಟ್ಟಿದ್ದರು, ಇದರಿಂದ ನನ್ನ ಪ್ರಯಾಣ ನಿರಾಳವಾಗಿತ್ತು" ಎಂದು ಹಲವರು ತಮ್ಮ ಅನುಭವಗಳನ್ನು ಸ್ಮರಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+