Bengaluru Metro: ಹೊಸಕೋಟೆ, ತುಮಕೂರು ಸೇರಿ ಹಲವು ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆ; ಭೂಮಿಗೆ ಬಂಗಾರದ ಬೆಲೆ?
ಬೆಂಗಳೂರು: ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಈಗಾಗಲೇ ಭೂಮಿಗೆ ಬಂಗಾರದ ಬೆಲೆ ಇದೆ. ಇದೀಗ ಬೆಂಗಳೂರು ಸುತ್ತಮುತ್ತ ಹಾಗೂ ಹೊಸಕೋಟೆ ಮಾರ್ಗದ ಪ್ರದೇಶಗಳಲ್ಲೂ ಭೂಮಿಗೆ ಬಂಗಾರದ ಬೆಲೆ ಬರುವ ಸಮಯ ಬಂದಿದೆ. ಇದೆಲ್ಲವೂ ಬೆಂಗಳೂರಿನ ನಮ್ಮ ಮೆಟ್ರೋದ ಮುಂದಿನ ಯೋಜನೆಗಳ ಭಾಗವಾಗಿದೆ. ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಪ್ರಯಾಣ ಪ್ರಾರಂಭವಾಗಿ ಈಚೆಗೆ 15 ವರ್ಷಗಳೇ ತುಂಬಿವೆ. ಈ ಸುದೀರ್ಘ ಅವಧಿಯಲ್ಲಿ ಬೆಂಗಳೂರಿನಲ್ಲಿ ಹಲವು ಬದಲಾವಣೆಗಳು ಆಗಿವೆ.
ನಗರದ ಹೊಸ ಸಂಚಾರ ಜೀವನಾಡಿಯಾಗಿ ಬೆಂಗಳೂರು ಮೆಟ್ರೋ ಬದಲಾಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ನಿಲ್ದಾಣ ಇರುವ ಪ್ರದೇಶಗಳಲ್ಲೂ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದೀಗ ಬೆಂಗಳೂರಿನ ಇನ್ನಷ್ಟು ಪ್ರದೇಶಗಳಿಗೆ ಮೆಟ್ರೋ ಯೋಜನೆಯನ್ನು ವಿಸ್ತರಣೆ ಮಾಡುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಿವೆ. ರಾಜ್ಯ ಸರ್ಕಾರದ ಪ್ರಸ್ತಾವದಲ್ಲಿ ಹಲವು ಪ್ರದೇಶಗಳಿವೆ.

ಬೆಂಗಳೂರು ಮೆಟ್ರೋ ಯೋಜನೆ ವಿಸ್ತರಣೆ
ಬೆಂಗಳೂರು ನಮ್ಮ ಮೆಟ್ರೋ ಯೋಜನೆ ವಿಸ್ತರಣೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ಸ್ ಬಂದಿದೆ. ಬೆಂಗಳೂರು ಮೆಟ್ರೋದ 4 ನೇ ಹಂತದಲ್ಲಿ ಹಲವು ಪ್ರಮುಖ ಪ್ರದೇಶಗಳನ್ನು ಸೇರಿಸಲಾಗಿದೆ. ಈ ಹಂತದಲ್ಲಿ ಒಟ್ಟು ಬೆಂಗಳೂರು ಮೆಟ್ರೋವನ್ನು 215 ಕಿ.ಮೀ ಬೃಹತ್ ಜಾಲ ರೂಪಿಸುವುದಕ್ಕೆ ಉದ್ದೇಶಿಸಲಾಗಿದೆ. ಪ್ರಸ್ತಾವಿತ ಕಾರಿಡಾರ್‌ಗಳು ಮಾದಾವರ-ತುಮಕೂರು ವಿಸ್ತರಣೆಯನ್ನು ಸಹ ಒಳಗೊಂಡಿದೆ.
ಬೆಂಗಳೂರು ನಮ್ಮ ಮೆಟ್ರೋ ಜಾಲ ಈ ಪ್ರದೇಶಗಳಿಗೆ ವಿಸ್ತರಣೆ
ಇನ್ನು ಬೆಂಗಳೂರಿನ ನಮ್ಮ ಮೆಟ್ರೋ ಜಾಲವನ್ನು ಪ್ರಮುಖ ಪ್ರದೇಶಗಳಿಗೆ ವಿಸ್ತರಣೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಮಾದಾವರ-ತುಮಕೂರು ಪ್ರದೇಶ, ಕಡಬಗೆರೆ - ತಾವರೆಕೆರೆ, ಚಲ್ಲಘಟ್ಟ-ಬಿಡದಿ, ರೇಷ್ಮೆ ಸಂಸ್ಥೆ - ಹಾರೋಹಳ್ಳಿ, ಕಾಳೇನ ಅಗ್ರಹಾರ-ಜಿಗಣಿ-ಅತ್ತಿಬೆಲೆ-ಸರ್ಜಾಪುರ ರಸ್ತೆ-ಕಾಡುಗೋಡಿ ಟ್ರೀ ಪಾರ್ಕ್ ಮಾರ್ಗ, ಬೊಮ್ಮಸಂದ್ರ - ಅತ್ತಿಬೆಲೆ, ಕೃಷ್ಣರಾಜಪುರದಿಂದ - ಹೊಸಕೋಟೆ, ದೊಡ್ಡಜಾಲ - ದೇವನಹಳ್ಳಿ ಮಾರ್ಗಗಳಿಗೆ ವಿಸ್ತರಣೆ ಮಾಡಬೇಕು ಎಂದು ಉದ್ದೇಶಿಸಲಾಗಿದೆ.
ಭೂಮಿಗೆ ಬಂಗಾರದ ಬೆಲೆ
ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತದ ಪ್ರದೇಶಗಳಿಗೆ ಮೆಟ್ರೋ ಯೋಜನೆಯನ್ನು ವಿಸ್ತರಣೆ ಮಾಡುವುದರಿಂದ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ. ಬೆಂಗಳೂರು ನಗರದ ಮೆಟ್ರೋ ನಿಲ್ದಾಣಗಳು ಹಾಗೂ 500 ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಭೂಮಿ ಹಾಗೂ ಪ್ರಾಪರ್ಟಿ ಬೆಲೆ ಹೆಚ್ಚಳವಾಗಿದೆ. ಇದೇ ಮಾದರಿಯಲ್ಲಿ ಉಳಿದ ಪ್ರದೇಶಗಳಲ್ಲೂ ಭೂಮಿ ಹಾಗೂ ಪ್ರಾಪರ್ಟಿಯ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಹೊಸಕೋಟೆ - ತುಮಕೂರಿಗೆ ವಿಸ್ತರಣೆ ಮಾಡುವುದಕ್ಕೆ ವಿರೋಧ
ಇನ್ನು ಬೆಂಗಳೂರು ನಮ್ಮ ಮೆಟ್ರೋ ಜಾಲವನ್ನು ಹೊಸಕೋಟೆ ಹಾಗೂ ತುಮಕೂರಿಗೆ ವಿಸ್ತರಣೆ ಮಾಡುವ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ವಿಪರೀತವಾಗಿದೆ. ಮೊದಲು ಬೆಂಗಳೂರು ನಗರದಲ್ಲಿ ಸಂಪೂರ್ಣವಾಗಿ ಮೆಟ್ರೋ ಜಾಲವನ್ನು ವಿಸ್ತರಿಸಬೇಕು. ಇದಾದ ನಂತರ ಬೆಂಗಳೂರು ನಗರದ ಹೊರ ವಲಯದಲ್ಲಿ ಮೆಟ್ರೋ ಜಾಲವನ್ನು ವಿಸ್ತರಿಸುವುದು ಉತ್ತಮ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications
