Alert: ಬೆಂಗಳೂರಲ್ಲಿ ದಢಾರ-ರುಬೆಲ್ಲಾ ರೋಗ ಹಬ್ಬುವ ಭೀತಿ, ಮಕ್ಕಳ ರಕ್ಷಣೆಗೆ ಲಸಿಕೆ ಹಾಕಿಸಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ದಡಾರ-ರುಬೆಲ್ಲಾ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಹಿತಿ ನೀಡಿದೆ. ಜನವರಿಯಿಂದ ಮಾರ್ಚ್ ವರೆಗೆ ಹೆಚ್ಚಿನ ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದೆ. ಇಂದಿನಿಂದಲೇ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದರು.
ದಡಾರ-ರುಬೆಲ್ಲಾ ಖಾಯಿಲೆಯಿಂದ ಮಕ್ಕಳನ್ನು ರಕ್ಷಣೆ ಮಾಡಲು 'ದಡಾರ-ರುಬೆಲ್ಲಾ ವಿಶೇಷ ಪಾಕ್ಷಿಕ ಲಸಿಕಾ ಅಭಿಯಾನ -2026'ವನ್ನು ಇಂದು ಜನವರಿ 19ರಿಂದ 31ರವರೆಗೆ ನಡೆಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಲಸಿಕೆ ಅಭಿಯಾನ ಇರಲಿದ್ದು, ತಮ್ಮ ಮಕ್ಕಳಿಗೆ ವಯೋಮಿತಿ ಆಧಾರದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಎಂದು ಜಿಬಿಎ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್ ಕೋರಿದ್ದಾರೆ.

ಈ ಖಾಯಿಲೆಗಳಿಂದ ದಡಾರ-ರುಬೆಲ್ಲಾ ಖಾಯಿಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ, ಸಾರ್ವತ್ರಿಕ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ 9 ರಿಂದ 11 ತಿಂಗಳ ವಯಸ್ಸಿನಲ್ಲಿ ಮೊದಲನೇ ಡೋಸ್ ಹಾಗೂ 16 ರಿಂದ 24 ತಿಂಗಳ ವಯಸ್ಸಿನಲ್ಲಿ ಎರಡನೇ ಡೋಸ್ ದಡಾರ ರುಬೆಲ್ಲಾ ಲಸಿಕೆಯನ್ನು ನೀಡಲಾಗುತ್ತಿದೆ.
ಭಾರತ ಸರ್ಕಾರವು 2026ರ ಅಂತ್ಯದೊಳಗೆ ದಡಾರ-ರುಬೆಲ್ಲಾ ಮತ್ತು ರುಬೆಲ್ಲಾ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಬದ್ದವಾಗಿದೆ. ಈ ಮಹತ್ವದ ಗುರಿ ಸಾಧನೆಯಲ್ಲಿ ರಾಜ್ಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ದಢಾರ-ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಿಶೇಷ ಗಮನಹರಿಸಿದೆ ಎಂದರು.
ಜಿಬಿಎ ಲಸಿಕಾಕರಣ ಕಾರ್ಯಕ್ರಮದ ಗುರಿ ಏನು?
1. ದಡಾರ-ರುಬೆಲ್ಲಾ ಲಸಿಕೆಯ (MR-1, MR-2) 2 ಡೋಸ್ ಲಸಿಕಾ ಕರಣದ ಪ್ರಗತಿಯು ಶೇ.95 ಕ್ಕಿಂತ ಹೆಚ್ಚಿರಬೇಕು.
2. ದಡಾರ-ರುಬೆಲ್ಲಾ ಮೊದಲನೇ ಮತ್ತು ಎರಡನೇ ಡೋಸ್ಗಳ ಡ್ರಾಪ್ ಔಟ್ ರೇಟ್ ಶೂನ್ಯವಿರಬೇಕು.
3. Non-Measles, Non- Rubella discard rate 1 ಲಕ್ಷ ಜನಸಂಖ್ಯೆಗೆ 2 ಕ್ಕಿಂತ ಹೆಚ್ಚಿರಬೇಕು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ದಡಾರ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ತುರ್ತಾಗಿ ಲಸಿಕೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಐದು ಪಾಲಿಕೆಗಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಔಟರೀಚ್ ಪ್ರದೇಶಗಳಲ್ಲಿ ಜನವರಿ 31ರವರೆಗೆ ಲಭ್ಯವಿರುತ್ತದೆ. ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಬೇಕೆಂದು ಹೇಳಿದರು.
ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ
0-5 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಗಳಿಂದ ಈವರೆಗೆ ಲಸಿಕೆ ಪಡೆಯಲು ವಿಳಂಬವಾಗಿದ್ದಲ್ಲಿ ಅಥವಾ ಲಸಿಕೆ ಪಡೆಯದೇ ಇದ್ದಲ್ಲಿ, ಪೋಷಕರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು. ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಬಿಎ ಅಡಿ ಬರುವ 145 ಯೋಜನಾ ಘಟಕಗಳ ದಡಾರ-ರುಬೆಲ್ಲಾ ಪಾಕ್ಷಿಕ ಲಸಿಕಾ ಕಾರ್ಯಕ್ರಮ ಭಾಗವಾಗಿ ಒಟ್ಟು 1,114 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 3,005 ವಲಸೆ ತಾಣಗಳಲ್ಲಿ ಲಸಿಕಾಕರಣ ಲಭ್ಯವಿದೆ. 267 ಮಕ್ಕಳಿಗೆ MR-1 ಲಸಿಕೆ ಮತ್ತು 246 ಮಕ್ಕಳಿಗೆ MR2 ಲಸಿಕೆ ಹಾಗೂ 178 ಮಕ್ಕಳಿಗೆ ಪೆಂಟಾ-1 ಲಸಿಕೆ ಮತ್ತು 183 ಮಕ್ಕಳಿಗೆ DPT 2 ನೇ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದು ಅವರು ವಿವರಿಸಿದರು.
ಈ ಅಭಿಯಾನವು 1,040 ಹೆಚ್ಚಿನ ಅಪಾಯದ ಪ್ರದೇಶಗಳಾದ ಕೊಳೆಗೇರಿಗಳು ಮತ್ತು ದಡಾರ ಪ್ರಕರಣವಿರುವ ಪ್ರದೇಶಗಳನ್ನು ಒಳಗೊಂಡಿದೆ. 1,493 ಮಕ್ಕಳಿಗೆ MR1 ಲಸಿಕೆ ಮತ್ತು 1,512 ಮಕ್ಕಳಿಗೆ MR2 ಡೋಸ್ ಲಸಿಕೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಸಹಾಯಕಿಯಯನ್ನು ಸಂಪರ್ಕಿಸುವಂತೆ ಜಿಬಿಎ ಪ್ರಕಟಣೆಯಲ್ಲಿ ತಿಳಿಸಿದೆ.
-
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?












Click it and Unblock the Notifications