Vande Bharat Express: ಬೆಂಗಳೂರು-ಮುಂಬೈ ಬೆನ್ನಲ್ಲೇ ಕರಾವಳಿ-ಗೋವಾ ವಂದೇ ಭಾರತ್‌ಗೆ ಇದೇ ತಿಂಗಳು ಚಾಲನೆ

ಮಂಗಳೂರು: ಕರ್ನಾಟಕದಲ್ಲಿ ಇದೇ ನವೆಂಬರ್ ತಿಂಗಳಲ್ಲಿ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಲಿದೆ. ದೀಪಾವಳಿಗೆ ಕರಾವಳಿ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ (Bengaluru-Mangaluru-Goa Vande Bharat Express) ಚಾಲನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Bengaluru-Mumbai Sleeper Vande Bharat Express) ಇಂದು ನವೆಂಬರ್ 1ರಂದು ಉದ್ಘಾಟನೆಗೊಳ್ಳಲಿದೆ. ನಾಳೆ ಸೋಮವಾರ ನವೆಂಬರ್ 2ರಿಂದ ಅಧಿಕೃತ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದರ ಬೆನ್ನಲ್ಲೆ ಯಶವಂತಪುರದಿಂದ ಕರಾವಳಿಯ ಮಂಗಳೂರು, ಅಲ್ಲಿಂದ ಮಡಗಾಂವ್ ವರೆಗೂ ವಿಸ್ತರಣೆ ಆಗಿರುವ ವಂದೇ ಭಾರತ್ ರೈಲಿಗೆ ನವೆಂಬರ್ 3ನೇ ವಾರ ಚಾಲನೆ ನೀಡುವುದಾಗಿ ದೆಹಲಿಯಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಈ ಮೂಲಕ ಬಹುದಿನಗಳ ಕರಾವಳಿಗರ ಬೇಡಿಕೆ ಈಡೇರಲಿದೆ.

Bengaluru-Mangaluru-Goa Vande Bharat

ಯಶವಂತಪುರದಿಂದ ಈ ರೈಲು ಹಾಸನ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೂಲಕ ಗೋವಾಗೆ ಸಂಚಾರ ಮಾಡಲಿದೆ. ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳು ಹಾಗೂ ಗೋವಾವರೆಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ವಂದೇ ಭಾರತ್ ಎಕ್ಸ್ ರೈಲಿನಿಂದ ಅನುಕೂಲವಾಗಲಿದೆ. ಪ್ರವಾಸೋದ್ಯಮ, ಸುಧಾರಿತ ರೈಲು ಸೇವೆ, ಪ್ರಮುಖ ಭಾಗಗಳಿಗೆ ಸೆಮಿ ಸ್ಪೀಡ್ ರೈಲುಗಳ ಸಂಚಾರ ದೊರಕಿದಂತಾಗುತ್ತದೆ.

ಬೆಂಗಳೂರು-ಕರಾವಳಿ ಮಾರ್ಗದಲ್ಲಿ ಅತ್ಯಂತ ಕ್ಲಿಷ್ಟಕರವಾದ ಸಕಲೇಶ್ವರಪುರ ಮತ್ತು ಸುಬ್ರಹ್ಮಣ್ಯ ರಸ್ತೆ ಘಟ್ಟ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಸಿಗ್ನಲಿಂಗ್, ಬ್ರೇಕಿಂಗ್ ಸಿಸ್ಟಮ್ ಎಲ್ಲವನ್ನು ಪರೀಕ್ಷಿಸಲಾಗಿದೆ. ಯಶಸ್ವಿ ಪ್ರಾಯೋಗಿಕ ಸಂಚಾರ ಮುಗಿದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಯಶವಂತಪುರ-ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಿದೆ. ಇದನ್ನು ಕೋಟ ಶ್ರೀನಿವಾಸ ಪೂಜಾರಿ ಅವರು ಖಚಿತಪಡಿಸಿದ್ದಾರೆ.

ರೈಲುಗಳಿಗೆ ಸಂಖ್ಯೆ ಹಂಚಿಕೆ

ವಾಸ್ತವದಲ್ಲಿ ಮಂಗಳೂರು ಸೆಂಟ್ರಲ್- ಮಡಗಾಂವ್ ವರೆಗೆ ಇದ್ದ ರೈಲನ್ನು ಬೆಂಗಳೂರಿನ ಯಶವಂತಪುರವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲಾಗುವುದು. ಈ ರೈಲಿಗೆ ಈ ಹಿಂದೆ ಇದ್ದ 20646/20645 ಸಂಖ್ಯೆಗಳು ಬದಲಾಗಿದೆ. ಹಾಲಿ ವಿಸ್ತೃತ ನೂತನ ರೈಲುಗಳಿಗೆ ಸಂಖ್ಯೆ (26655/26656) ನೀಡಲಾಗಿದೆ. ನವೆಂಬರ್ 3ನೇ ವಾರ ಉದ್ಘಾಟನೆಯೊಂದಿಗೆ ಯಶವಂತಪುರ-ಮಡಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೆಸರನಲ್ಲಿ ಸೇವೆ ಮಾಡಲಿದೆ.

ಕರಾವಳಿಗೆ ಸಚಿವರು ಭೇಟಿ

ಯಶವಂತಪುರ-ಮಡಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಸಂಬಂಧ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರಾವಳಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಕುರಿತು ಅವರೇ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನವದೆಹಲಿಯ ರೈಲ್ವೆ ಭವನದಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಈ ವರೆಗೆ ಜಾರಿಯಾದ ಯೋಜನೆಗಳಿಗೆ ರಾಜ್ಯ ನಾಯಕರು ಅಭಿನಂದನೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+