24 Coaches Vande Bharat Sleeper: ಕೆಲವೇ ತಿಂಗಳಲ್ಲಿ ಅಧುನಿಕ '24 ಬೋಗಿಗಳ ಸ್ಲೀಪರ್ ವಂದೇ ಭಾರತ್' ಸೇವೆಗೆ

Vande Bharat Sleeper Train: ಭಾರತೀಯ ರೈಲ್ವೆ ಇಲಾಖೆ ರಾತ್ರಿ ಸುದೀರ್ಘ ಪ್ರಯಾಣದ ಪ್ರಯಾಣಿಕರಿಗಾಗಿ ಆರಾಮದಾಯಕ ಅನುಭವ ನೀಡುವ 16 ಬೋಗಿಗಳ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಿತ್ತು. ಇದೀಗ ಮುಂದುವರಿದ ಹಂತದಲ್ಲಿ ಪ್ಯಾಂಟ್ರಿ ಮತ್ತು ಇನ್ನಿತರ ಅತ್ಯಾಧುನಿಕ ಸೌಕರ್ಯವುಳ್ಳ 24 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸಲು ಸಜ್ಜಾಗಿದೆ. ಈ ರೈಲುಗಳು ಕೆಲವೇ ತಿಂಗಳಲ್ಲಿ ಕಾರ್ಯಾಚರಣೆ ಆರಂಭಿಸಲಿವೆ.

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ರೈಲು ಇದಾಗಿರಲಿದ್ದು, ಇದರ 24 ಬೋಗಿಗಳ ರೈಲು ಸೆಟ್ ಗಳು ದೇಶಿಯವಾಗಿ ತಯಾರಾಗಲಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯು (ICF) ತಲಾ 24 ಬೋಗಿಗಳ ಒಂದು ರೈಲಿನಂತೆ ಒಟ್ಟು 50 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ‍ಉತ್ಪಾದನೆ ಮಾಡುತ್ತಿದೆ. ಕರ್ನಾಟಕ ರಾಜ್ಯದ ಬೆಂಗಳೂರಿನ BEML ಸಂಸ್ಥೆಯು 10 ಸ್ಲೀಪರ್ ರೈಲು ಸೆಟ್‌ಗಳನ್ನು ತಯಾರಿಸಲಿದೆ ಎಂಬುದು ಮತ್ತೊಂದು ವಿಶೇಷ. ಈ ಹೊಸ ರೈಲುಗಳು ಹಾಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗಿಂತ ಉತ್ತಮವಾಗಿರಲಿವೆ ಎನ್ನಲಾಗಿದೆ.

24 Coaches Vande Bharat Sleeper

200ಕ್ಕೂ ಹೆಚ್ಚು ವಂದೇ ಭಾರತ್ ಸ್ಲೀಪರ್ ರೈಲು

ದೂರದ ರಾತ್ರಿ ರೈಲು ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ದೇಶದಲ್ಲಿ ಮುಂದಿನ ದಿನಗಳಲ್ಲಿ ಬರೋಬ್ಬರಿ 200ಕ್ಕೂ ಅಧಿಕ ಸ್ಲೀಪರ್ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಹೌರಾ-ಗುವಾಹಟಿ ಮಧ್ಯೆ ಸಂಚಾರ ಮಾಡುತ್ತಿದೆ. ಎರಡನೇ ರೈಲು ಬೆಂಗಳೂರು-ಮುಂಬೈ ನಡುವೆ ಅಧಿಕೃತ ವಾಣಿಜ್ಯ ಸಂಚಾರಕ್ಕೆ ಮುಹೂರ್ತ ಫಿಕ್ಸ್ ಆಗಬೇಕಿದೆ. ಈ ನಡುವೆ 16ರ ಬದಲಾಗಿ 24ಬೋಗಿಗಳ ರೈಲು ಕಾರ್ಯಾಚರಣೆಗೆ ಇಲಾಖೆ ನಿರ್ಧರಿಸಿದೆ.

ಐಸಿಎಫ್‌ ಮತ್ತು ಬಿಇಎಂಎಲ್ ಸಂಸ್ಥೆಯು, ಜೊತೆಗೆ ಇಂಡೋ-ರಷ್ಯನ್ ಜಂಟಿ ಉದ್ಯಮ 'ಕೈನೆಟ್' ಸಂಸ್ಥೆ 120 ರೈಲುಗಳನ್ನು ತಯಾರಿಸಲಿದೆ. ಟಿಟಾಗಢ್ ಹಾಗೂ BHELನ ಒಕ್ಕೂಟವು 80 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸಿ ಪೂರೈಸಲಿದೆ. ಈ ರೈಲುಗಳ ಅಂತಿಮ ವಿನ್ಯಾಸ ಇನ್ನೇನು ಕೆಲವೇ ದಿನಗಳಲ್ಲಿ ಲಭ್ಯಾಗಲಿದೆ. ಈ ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳು ಸೇವೆ 2027ರ ಮಧ್ಯಭಾಗಕ್ಕೆ ಶುರುವಾಗುವ ಸಾಧ್ಯತೆಗಳು ಇವೆ.

ಪ್ಯಾಂಟ್ರಿ ಸಹಿತ 24 ಬೋಗಿಗಳ ರೈಲಿನ ವೈಶಿಷ್ಟ್ಯ?

‍ಹೊಸ ವಿನ್ಯಾಸದಲ್ಲಿ 24 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ತಯಾರಾಗುತ್ತಿವೆ. ಸುದೀರ್ಘ ಪ್ರಯಾಣ ಹಿನ್ನೆಲೆಯಲ್ಲಿ ಇದೇ ರೈಲಿನ ಒಳಗೆ 'ಪ್ಯಾಂಟ್ರಿ ಕಾರ್' (ಅಡುಗೆ ಅಥವಾ ಆಹಾರ ಬಡಿಸುವ ಬೋಗಿ) ಸೌಲಭ್ಯ ಇರಲಿದೆ. ಈ ಪ್ಯಾಂಟ್ರಿ ಸೌಲಭ್ಯ ಇತರ ವಂದೇ ಭಾರತ್ ರೈಲುಗಳಲ್ಲಿ ಇಲ್ಲ. ಇದರೊಂದಿಗೆ ಇನ್ನಷ್ಟು ಅತ್ಯಾಧುನಿಕ ಸೌಕರ್ಯಗಳಿರಲಿವೆ. ಇದನ್ನು ದೇಶದ ಅತೀ ಉದ್ದದ ವಂದೇ ಭಾರತ್ ರೈಲು ಅಂತಲೂ ಕರೆಯಲಾಗುತ್ತಿದೆ.

* ಇನ್ನೂ ಬೋಗಿಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ ಹಾಲಿ ಇರುವ ಟಾಯ್ಲೆಟ್‌ಗಳ ಸಂಖ್ಯೆ ಸಹ ಹೆಚ್ಚಾಗಲಿವೆ. ಪ್ಯಾಂಟ್ರಿಯಿಂದ ರೈಲಿನಲ್ಲೇ ಆಹಾರ ಬಿಸಿ ಮಾಡಿ ಬಡಿಸಲು ಸಾಧ್ಯವಾಗುತ್ತದೆ. ಇದರ ವಿನ್ಯಾಸದ ಕೆಲಸ ಇನ್ನೂ ನಡೆಯುತ್ತಿದೆ.

* ಹಾಲಿ 'ವಿಬಿ' ರೈಲಿನಲ್ಲಿ ಮೂಲ ಮಾದರಿಯ 16 ಪ್ಯಾಸೆಂಜರ್ ಬೋಗಿಗಳು ಲಭ್ಯವಿವೆ. 11 ಎಸಿ 3-ಟೈರ್ ಕೋಚ್‌ಗಳು, ನಾಲ್ಕು ಎಸಿ 2-ಟೈರ್ ಕೋಚ್‌ಗಳು ಮತ್ತು ಒಂದು ಎಸಿ ಫಸ್ಟ್ ಕ್ಲಾಸ್ ಬೋಗಿಗಳಿವೆ.

* ಪ್ರತಿ ಗಂಟೆಗೆ 160 ಕಿಮೀ ವೇಗದ ಬದಲಾಗಿ ಗರಿಷ್ಠ ವೇಗದ ಮಿತಿ ಈ ರೈಲಿಗೆ 180 ಕಿಮೀ. ಅರೆ-ಹೈ-ಸ್ಪೀಡ್ ವರ್ಗದ ರೈಲಿನ ಪಟ್ಟಿಗೆ ಸೇರಿಸಲಾಗಿದೆ.

* ಯುರೋಪಿಯನ್ ರೈಲುಗಳಿಂದ ಸ್ಫೂರ್ತಿ ಪಡೆದ ಸ್ಲೀಪರ್ ರೈಲಿನಲ್ಲಿ ಮೆತ್ತನೆ ಬರ್ತ್ ಒದಗಿಸಲಾಗಿದೆ. ಇದು ಪ್ರಯಾಣಿಕರ ಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾಗಿದೆ.

* ಆನ್‌ಬೋರ್ಡ್ ಸೌಲಭ್ಯಗಳು: ರೈಲಿನ ಒಳಗೆ ರಾತ್ರಿ ಉತ್ತಮ ಬೆಳಕು, ದೃಶ್ಯ ಪ್ರದರ್ಶನಗಳೊಂದಿಗೆ ಸಂಯೋಜಿತ ಘೋಷಣೆ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಮಾಡ್ಯುಲರ್ ಪ್ಯಾಂಟ್ರಿ ಘಟಕಗಳು ಹೊಂದಿವೆ.

* ಆಧುನಿಕ ಮತ್ತು ಅಂಗವಿಕಲ ಸ್ನೇಹಿ ಶೌಚಾಲಯ, ಶಿಶುಪಾಲನಾ ಕೇಂದ್ರದ ವ್ಯವಸ್ಥೆ ಈ ರೈಲಿನಲ್ಲಿರಲಿದೆ. ಎಸಿ ಪ್ರಥಮ ದರ್ಜೆ ಬೋಗಿಯಲ್ಲಿ ಬಿಸಿನೀರು ಸಹಿತ ಶವರ್ ಸೌಲಭ್ಯ ಒಳಗೊಂಡಿರಲಿದೆ.

* ಈ ಸ್ಲೀಪರ್ ರೈಲು ಸ್ಥಳೀಯ ಕವಚ ತಂತ್ರಜ್ಞಾನ ಹೊಂದಿದೆ. ಉತ್ತಮ ಬ್ರೇಕಿಂಗ್ ಸಿಸ್ಟಮ್, ಅಧಿಕ ಶಕ್ತಿಯ ತಂತ್ರಜ್ಞಾನ ಹೊಂದಿದೆ. ಇದು ಅಪಘಾತ ನಿರೋಧಕವಾಗಿ ಕೆಲಸ ಮಾಡಲಿದೆ. ಇದರೊಂದಿಗೆ ಸ್ವಯಂ ಚಾಲಿತ ಬಾಗಿಲು, ಚಾರ್ಜಿಂಗ್ ಪೋರ್ಟಲ್, ಎಸಿ ನಿಯಂತ್ರಣ, ಸಿಸಿಟಿವಿ, ಸೆನ್ಸಾರ್‍‌ಗಳು, ಬೆಂಕಿ ನಿರೋಧ, ಎಲ್‌ಇಡಿ ಡಿಸ್ಪ್ಲೈಗಳು ಸೇರಿ ಹಲವು ಸೌಕರ್ಯ ಇರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+